ಬೆಂಗಳೂರಿನಲ್ಲಿ `ಜೈ ಬಾಂಗ್ಲಾ’ ಘೋಷಣೆ ಕೂಗಿದ ಮಹಿಳೆ ಅರೆಸ್ಟ್

Woman arrested for shouting 'Jai Bangla' slogan in Bengaluru
Woman arrested for shouting 'Jai Bangla' slogan in Bengaluru

ಬೆಂಗಳೂರು : ಬೆಂಗಳೂರಿನಲ್ಲಿ ದೇಶ ವಿರೋಧಿ ಜೈ ಬಾಂಗ್ಲಾ ಘೋಷಣೆ ಕೂಗಿದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಹೆಬ್ಬಗೋಡಿ ಠಾಣೆಯ ಪೊಲೀಸರು ದೇಶವಿರೋಧಿ ಘೋಷಣೆ ಕೂಗಿದ ಮಹಿಳೆಯನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಮೂಲದ ಸರ್ಬಾನು ಖಾತುನ್ ಎಂಬ ಮಹಿಳೆ ಜೈ ಬಾಂಗ್ಲಾ ಘೋಷಣೆ ಕೂಗಿದ್ದಾಳೆ.

 ಘಟನೆ ಹಿನ್ನೆಲೆ : ಅಕ್ರಮ ವಲಸಿಗರ ತೆರವು ಕಾರ್ಯಾಚರಣೆ ಮಾಡುವಾಗ ಇಂಥದ್ದೊಂದು ಘಟನೆ ನಡೆದಿದೆ. ಜೆಸಿಬಿ ಬಳಕಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಸ್ಥಳೀಯ ವ್ಯಕ್ತಿಯೊಬ್ಬ ಅದನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದ. ಈ ವೇಳೆ ಮುಸ್ಲಿಂ ಮಹಿಳೆಯೊಬ್ಬಳು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಅಲ್ಲಿಂದ ಪಾಸ್ ಆಗುತ್ತಾಳೆ.

ಇದನ್ನು ಮಿಸ್‌ ಮಾಡದೇ ಓದಿ : ಕರ್ನಾಟಕದಲ್ಲಿ `ಸಾಮಾಜಿಕ ಬಹಿಷ್ಕಾರ’ ಹಾಕಿದರೆ 1 ಲಕ್ಷ ರೂ.ದಂಡ, 3 ವರ್ಷ ಜೈಲು ಶಿಕ್ಷೆ ಫಿಕ್ಸ್

ಇದನ್ನು ಮಿಸ್‌ ಮಾಡದೇ ಓದಿ : 100 ವರ್ಷಗಳ ನಂತರ ಶನಿಯು ತನ್ನ ಸ್ವಂತ ಮನೆಗೆ ಬರುತ್ತಿರುವುದರಿಂದ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ

Woman arrested for shouting 'Jai Bangla' slogan in Bengaluru
Woman arrested for shouting ‘Jai Bangla’ slogan in Bengaluru

ಈ ವೇಳೆ ವಿಡಿಯೋ ಮಾಡುತ್ತಿದ್ದ ಸ್ಥಳೀಯ ವ್ಯಕ್ತಿ, ಆಕೆಯನ್ನು ಮಾತನಾಡಿಸಿ, ಭಾರತ್ ಮಾತಾ ಕೀ ಜೈ ಎನ್ನುತ್ತಾನೆ. ಜೊತೆಗೆ ಭಾರತ್ ಮಾತಾ ಕೀ ಜೈ ಅಂತ ಹೇಳು ಅಂತ ಹೇಳುತ್ತಾನೆ. ಆಗ ಸಿಟ್ಟಿಗೆದ್ದ ಮಹಿಳೆ ಬಾಂಗ್ಲಾಗೆ ಜೈ ಎನ್ನುತ್ತಾ ಅಲ್ಲಿಂದ ಹೊರಡುತ್ತಾಳೆ. ಈ ವೇಳೆ ಸ್ಥಳೀಯರು ಆಕೆಯ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಸ್ಥಳೀಯರು ಮತ್ತೆ ಮಹಿಳೆ ಬಳಿ ಭಾರತ್ ಮಾತಾ ಕೀ ಜೈ ಅಂತ ಹೇಳಿಸಿದ್ದಾರೆ ಎನ್ನಲಾಗಿದೆ.