ಜನವರಿ 14 ರಂದು ರಾಷ್ಟ್ರೀಯ ಲೋಕ್ ಅದಾಲತ್

Supreme Court
Supreme Court

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಜನವರಿ 14 ರಂದು ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ರಾಜ್ಯಾದಾದ್ಯಂತ ಎಲ್ಲಾ ನ್ಯಾಯಾಲಯಗಳ ಆವರಣದಲ್ಲಿ ವರ್ಚುವಲ್ ಮತ್ತು ಭೌತಿಕವಾಗಿ ನಡೆಸಲಿದೆ. ಹಾಗಾಗಿ ಬಾಕಿ ಇರುವ ವಿವಾದಗಳನ್ನು ಪರಿಹರಿಸಲು ಆಸಕ್ತಿ ಹೊಂದಿರುವ ಸಾರ್ವಜನಿಕರು ಹತ್ತಿರದ ತಾಲೂಕು ಕಾನೂನು ಸೇವೆಗಳ ಸಮಿತಿ ಅಥವಾ ಆಯಾ ನ್ಯಾಯಾಲಯದ ಆವರಣದಲ್ಲಿ ಸ್ಥಾಪಿಸಲಾದ ಜಿಲ್ಲಾ ಕಾನೂನು ಸೇವಿಗಳ ಪ್ರಾಧಿಕಾರವನ್ನು ಸಂಪರ್ಕಿಸಲು ವಿನಂತಿಸಿದೆ.

High Court
High Court

ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಇತ್ಯರ್ಥಕ್ಕಾಗಿ ಪೂರ್ವ-ವ್ಯಾಜ್ಯ ಪ್ರಕರಣಗಳನ್ನು ಸಹ ತೆಗೆದುಕೊಳ್ಳಲಾಗುತ್ತದೆ. ಹೈಕೋರ್ಟ್‍ಗಳಲ್ಲಿ ಬಾಕಿ ಇರುವ ಪ್ರಕರಣಗಳಿಗೆ, ದಾವೆದಾರರು ಬೆಂಗಳೂರು/ಕಲಬುರಗಿ/ಧಾರವಾಡದಲ್ಲಿ ಆಯಾ ಹೈಕೋರ್ಟ್‍ಗಳಲ್ಲಿ ಸ್ಥಾಪಿಸಲಾದ ಹೈಕೋರ್ಟ್‍ಗಳಲ್ಲಿ ಸ್ಥಾಪಿಸಲಾದ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯನ್ನು ಸಂಪರ್ಕಿಸಬಹುದು. ತಾಲೂಕು ಕಾನೂನು ಸೇವೆಗಳ ಸಮಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯನ್ನು ಫೋನ್ ಮೂಲಕವೂ ಸಂಪರ್ಕಿಸಬಹುದು. ಸಂಪರ್ಕ ಸಂಖ್ಯೆಗಳು ವೆಬ್ ಸೈಟ್  ಅಲ್ಲಿ ಲಭ್ಯವಿರುತ್ತದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ಶಶಿಧರ ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಉಚ್ಚ ನ್ಯಾಯಾಲಯ ಕಾನೂನು ಸೇವೆಗಳ ಸಮಿತಿ, ಬೆಂಗಳೂರಿನ ದೂರವಾಣಿ ಸಂಖ್ಯೆ ಗಳಾದ 080-22869987, 22869988, 22954809 ಉಚ್ಚ ನ್ಯಾಯಾಲಯ ಕಾನೂನು ಸೇವೆಗಳ ಸಮಿತಿ ಧಾರವಾಡದ ದೂರವಾಣಿ ಸಂಖ್ಯೆ 0836-2485242, ಉಚ್ಚ ನ್ಯಾಯಾಲಯ ಕಾನೂನು ಸೇವೆಗಳ ಸಮಿತಿ ಕಲಬುರಗಿಯ ದೂರವಾಣಿ ಸಂಖ್ಯೆ 08472-264141 ಅಥವಾ ಸಹಾಯವಾಣಿ 15100 ರ ಮೂಲಕ ಸಾರ್ವಜನಿಕರು ಸಂಪರ್ಕಿಸಬಹುದು.

National Lok Adalat on January 14