ರಾಜ್ಯದಲ್ಲಿ 500 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಸರ್ಕಾರ ಆದೇಶ

vidhana soudha
Image / Twitter

ಬೆಂಗಳೂರು : ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದು, ಗ್ರಾಮ ಆಡಳಿತ ಅಧಿಕಾರಿ (Village Administrative Officer – VAO) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತು ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಲ್ಲಿ 2025-26 ನೇ ಸಾಲಿನಲ್ಲಿ 500 ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆರ್ಥಿಕ ಇಲಾಖೆಯು ಸಹಮತಿ ನೀಡಿರುತ್ತದೆ.

ಇದನ್ನು ಮಿಸ್‌ ಮಾಡದೇ ಓದಿ: ರಾಜ್ಯದಲ್ಲಿ ಯಾರಿಗೆಲ್ಲಾ `ಉಚಿತ ಬಸ್ ಪಾಸ್’ ಸೌಲಭ್ಯ ಇದೆ? ಇಲ್ಲಿದೆ ಮಾಹಿತಿ

ಇದನ್ನು ಮಿಸ್‌ ಮಾಡದೇ ಓದಿ: ಅನಧಿಕೃತವಾಗಿ ಗೃಹಬಳಕೆ ಸಿಲಿಂಡರ್‌ಗಳನ್ನು ಉಪಯೋಗಿಸಿದರೆ ಸೂಕ್ತ ಕ್ರಮ

Government order for direct recruitment of 500 village administration officer posts in the state
Government order for direct recruitment of 500 village administration officer posts in the state

ಆದ್ದರಿಂದ ಈ ಕುರಿತು ಪರಿಶೀಲಿಸಿ, ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಗ್ರಾಮ ಆಡಳಿತ ಅಧಿಕಾರಿ ವೃಂದಕ್ಕೆ ಸಂಬಂಧಿಸಿದಂತೆ ಕೆಳಕಂಡ ಅಂಶಗಳಿಗೆ ಜಿಲ್ಲಾವಾರು ಮಾಹಿತಿಯನ್ನು ದಿನಾಂಕ :07.01.2026 ಸಲ್ಲಿಸುವಂತೆ ಕೋರಲು ನಿರ್ದೇಶಿಸಲಾಗಿದೆ.

ಕರ್ನಾಟಕದಂತಹ ಸ್ಥಳಗಳಲ್ಲಿ ವಿಲೇಜ್ ಅಕೌಂಟೆಂಟ್ (VA) ಆಗಿದ್ದ ಗ್ರಾಮ ಆಡಳಿತ ಅಧಿಕಾರಿ (VAO), ಗ್ರಾಮೀಣ ನಾಗರಿಕರು ಮತ್ತು ರಾಜ್ಯ ಆಡಳಿತದ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ ಕಂದಾಯ ಸಂಗ್ರಹಣೆ, ಭೂ ದಾಖಲೆಗಳು, ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಮತ್ತು ಸಾರ್ವಜನಿಕ ಕುಂದುಕೊರತೆಗಳ ಪರಿಹಾರಕ್ಕಾಗಿ ಜವಾಬ್ದಾರಿಯುತ ಸ್ಥಳೀಯ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಅವರು ಭೂ ದಾಖಲಾತಿಗಳನ್ನು ನಿರ್ವಹಿಸುತ್ತಾರೆ, ವಿಪತ್ತು ಪರಿಹಾರಕ್ಕೆ ಸಹಾಯ ಮಾಡುತ್ತಾರೆ, ಸಮೀಕ್ಷೆಗಳನ್ನು ನಡೆಸುತ್ತಾರೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಕಂದಾಯ ಕಾರ್ಯಗಳಿಗೆ ಪ್ರಮುಖ ಸಂಪರ್ಕವಾಗಿ ಕಾರ್ಯನಿರ್ವಹಿಸುತ್ತಾರೆ, ಕಂದಾಯ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುತ್ತಾರೆ ಮತ್ತು ಪಂಚಾಯತ್ ಆಡಳಿತವನ್ನು ಬೆಂಬಲಿಸುತ್ತಾರೆ.

ಶೈಕ್ಷಣಿಕ ಅರ್ಹತೆ: ಕರ್ನಾಟಕ (ಕೆಇಎ): 2ನೇ ಪಿಯುಸಿ (12ನೇ ತರಗತಿ) ಅಥವಾ ತತ್ಸಮಾನ ಉತ್ತೀರ್ಣರಾಗಿರಬೇಕು, ಇತರ ರಾಜ್ಯ ಮಂಡಳಿಯ ಸಮಾನತೆಗಳನ್ನು ಸಹ ಸ್ವೀಕರಿಸಲಾಗಿದೆ.

Government order for direct recruitment of 500 village administration officer posts in the state