Ramanagara | ಓದಿನತ್ತ ಹೆಚ್ಚು ಗಮನ ಹರಿಸಿ-ಭವಿಷ್ಯ ರೂಪಿಸಿಕೊಳ್ಳಿ: ವಿದ್ಯಾರ್ಥಿಗಳಿಗೆ ನ್ಯಾ. ಎಂ.ಎಚ್. ಅಣ್ಣಯ್ಯನವರ ಕಿವಿ ಮಾತು

shape your future: Justice M.H. Annaiah's advice to students
shape your future: Justice M.H. Annaiah's advice to students

ರಾಮನಗರ: ಇಂದಿನ ವಿದ್ಯಾರ್ಥಿಗಳು ಪುಸ್ತಕಗಳನ್ನು ಹೆಚ್ಚಾಗಿ ಓದುವುದರ ಮೂಲಕ ತಮ್ಮ ಮುಂದಿನ ಭವಿಷ್ಯವನ್ನು ಉತ್ತಮಗೊಳಿಸುವತ್ತ ಗಮನ ಹರಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಎಂ.ಎಚ್. ಅಣ್ಣಯ್ಯನವರ ಅವರು ಕಿವಿ ಮಾತು ಹೇಳಿದರು.

ಅವರು ನ.26ರ ಬುಧವಾರ ನಗರದ ಐಜೂರಿನ ಭಾರತೀಯ ಸಂಸ್ಕೃತ ವಿದ್ಯಾಪೀಠದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಮನಗರದ ಭಾರತೀಯ ಸಂಸ್ಕೃತ ವಿದ್ಯಾಪೀಠದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ “ಸಂವಿಧಾನ ದಿನಾಚರಣೆ-2025, ಕಾನೂನು ಅರಿವು ನೆರವು” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇದನ್ನು ಮಿಸ್‌ ಮಾಡದೇ ಓದಿ: ಡಿ.ಕೆಗೆ ಸಿಎಂ ಸ್ಥಾನ ನೀಡದಿದ್ದರೆ ಕರ್ನಾಟಕದಾದ್ಯಂತ ಹೋರಾಟಕ್ಕೆ ಮುಂದಾದ ಒಕ್ಕಲಿಗ ಸಂಘ..!

ಇದನ್ನು ಮಿಸ್‌ ಮಾಡದೇ ಓದಿ: ಓದುಗರೇ ಗಮನಿಸಿ: ಡಿಸೆಂಬರ್ 1 ರಿಂದ ಬದಲಾಗಲಿವೆ ಈ 8 ಪ್ರಮುಖ ನಿಯಮಗಳು…!

ಇದನ್ನು ಮಿಸ್‌ ಮಾಡದೇ ಓದಿ: ದೆಹಲಿಗೆ ಬನ್ನಿ, ಸಿಎಂ ಸಿದ್ದು, ಡಿ.ಸಿಎಂ ಡಿಕೆಶಿಗೆ ಹೈಕಮಾಂಡ್‌ ಬುಲಾವ್‌…!?

ಡಾ. ಬಿ.ಆರ್. ಅಂಬೇಡ್ಕರ್ ಅವರು ಹೆಚ್ಚೆಚ್ಚು ಪುಸ್ತಕಗಳನ್ನು ಓದಿದ್ದರಿಂದ ಸಂವಿಧಾನ ರಚನೆಯಲ್ಲಿ ಅನುಕೂಲವಾಯಿತು, ಆ ಮೂಲಕ ಅವರು ದೇಶದ ಸಂವಿಧಾನ ಶಿಲ್ಪಿಯಾದರು. ವಿದ್ಯಾರ್ಥಿಗಳು ಕೂಡ ಹೆಚ್ಚಿನ ಜ್ಞಾನ ಸಂಪಾದಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ತಮ್ಮ ಸ್ವಂತ ಆಲೋಚನೆಯಿಂದ ಮಾತ್ರ ಸರಿ-ತಪ್ಪುಗಳನ್ನು ನಿರ್ಣಯ ಮಾಡಬೇಕು. ಸತತ ಪ್ರಯತ್ನದಿಂದ ಮಾತ್ರ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂಬುದರ ಕುರಿತು ವಿವಿಧ ಮಹನೀಯರ ಉದಾಹರಣೆಗಳನ್ನು ನೀಡಿ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರಿಗಿದ್ದ ಅಪಾರವಾದ ಜ್ಞಾನವನ್ನು ಕಂಡು ಅಂದಿನ ಕ್ಯಾಬಿನೆಟ್ ಸಚಿವರು ಹಾಗೂ ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನೆಗಾಗಿ 1946 ಡಿಸೆಂಬರ್ 9ರಂದು ಕರಡು ಸಮಿತಿ ಅಧ್ಯಕ್ಷರನ್ನಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ನೇಮಕ ಮಾಡುತ್ತಾರೆ. 2 ವರ್ಷ 11 ತಿಂಗಳು 18 ದಿನಗಳ ಕಾಲ ಸಂವಿಧಾನ ರಚನೆ ಕಾರ್ಯ ನಡೆಯುತ್ತದೆ. ನಂತರ 1946 ನ.26 ರಂದು ಸಂವಿಧಾನ ಅಂಗೀಕರಿಸಿದ ದಿನವನ್ನೇ ರಾಷ್ಟಿçÃಯ ಸಂವಿಧಾನ ದಿನವೆಂದು ಆಚರಿಸಲಾಗುತ್ತಿದೆ ಎಂದರು.

ಪ್ರೇಮ್ ಬಿಹಾರಿ ನಾರಾಯಣ್ ರಾಯ್ಜಾದಾ ಅವರು ಆರು ತಿಂಗಳ ಕಾಲ ಕೈ ಬರಹದಿಂದ ಸಂವಿಧಾನವನ್ನು ಬರೆಯುತ್ತಾರೆ. ಎಲ್ಲಾ ದೇಶಗಳಿಗಿಂತ ಬಹಳ ದೊಡ್ಡ ಸಂವಿಧಾನವೆಂದರೆ ಅದು ಭಾರತದ ಸಂವಿಧಾನ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಅರ್ಪಿಸಿದ ನಂತರ ಪತ್ರಕರ್ತರು ಸಂವಿಧಾನದ ಕುರಿತು ತಮ್ಮ ಅಭಿಪ್ರಾಯದ ಕುರಿತು ಕೇಳಿದ ಪ್ರಶ್ನೆಗೆ, ಮೂಲಭೂತ ಹಕ್ಕುಗಳು ಉಲ್ಲಂಘನೆಯಾದ ಸಂದರ್ಭದಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯೂ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ದಾಖಲಿಸುವ ಹಕ್ಕನ್ನು ಸಂವಿಧಾನದಲ್ಲಿ ಕಲ್ಪಿಸಲಾಗಿದೆ. ಆದ್ದರಿಂದ ಸಂವಿಧಾನದಲ್ಲಿ ನನ್ನ ಆತ್ಮ ಹಾಗೂ ಹೃದಯವಿದೆ ಎಂದು ಉತ್ತರಿಸಿದರು ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸವಿತ ಪಿ.ಆರ್. ಅವರು ಮಾತನಾಡಿ, ಸಂವಿಧಾನ ದಿನದ ನೆನಪಿಗೆ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಗಿಡಗಳನ್ನು ನೆಟ್ಟು, ಪೋಷಿಸುವ ಮೂಲಕ ಸಂವಿಧಾನ ದಿನಾಚರಣೆಯನ್ನು ಆಚರಿಸಬೇಕು. ವಿದ್ಯಾರ್ಥಿಗಳು ನೆಡುವ ಗಿಡಗಳು ಮುಂದಿನ ದಿನಗಳಲ್ಲಿ ಮರವಾಗಿ ಬೆಳೆದು ಶುದ್ಧವಾದ ಗಾಳಿ ನೀಡುತ್ತದೆ. ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು, ಪರಿಸರವನ್ನು ಉಳಿಸಬೇಕು ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ 0-18 ವರ್ಷದೊಳಗಿನ ಮಕ್ಕಳಿಗೆ, ವಿಶೇಷವಾಗಿ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ, ವಿಕಲಚೇತನರಿಗೆ, ಶೋಷಣೆಗೊಳಗಾದವರಿಗೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರಿಗೆ ಯಾವುದೇ ತೊಂದರೆಯಾದರು ಉಚಿತ ಕಾನೂನು ನೆರವು ನೀಡಲಾಗುವುದು ಎಂದರು.

ಹಿರಿಯ ವಕೀಲರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮಧ್ಯಸ್ಥಿಕೆದಾರರಾದ ಆರ್.ವಿ. ದೇವರಾಜು ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಸಂವಿಧಾನ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.

ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಬಿ.ಎಂ. ಶ್ರೀವತ್ಸ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಬಿ.ಐ.ಇ.ಆರ್.ಟಿ ನಾಗರತ್ನಮ್ಮ, ಭಾರತೀಯ ಸಂಸ್ಕೃತ ವಿದ್ಯಾಪೀಠದ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ನಾಯಕ್ ಟಿ., ಪ್ರಾಂಶುಪಾಲರಾದ ಶಿವಣ್ಣ, ಸರಸ್ವತಿ ವೇದಿಕೆಯಲ್ಲಿದ್ದರು. ಭಾರತೀಯ ಸಂಸ್ಕೃತ ವಿದ್ಯಾಪೀಠದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Focus more on studies – shape your future: Justice M.H. Annaiah’s advice to students