ರದ್ದಾದ BPL ಕಾರ್ಡ್ ಮರು ಪಡೆಯಲು ತಕ್ಷಣವೇ ಈ ಕೆಲಸ ಮಾಡಿ.!

ration card karnataka
ration card karnataka

ಬೆಂಗಳೂರು : ಪಡಿತರ ಚೀಟಿಯಲ್ಲಿ ಅರ್ಹರ ಹೆಸರು ಡಿಲೀಟ್ ಆಗಿದ್ದರೆ ತಕ್ಷಣವೇ 45 ದಿನದೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದಲ್ಲಿ ಸದರಿ ಮನವಿಯನ್ನು ಪರಿಶೀಲಿಸಿ ಆದ್ಯತಾ ಪಡಿತರ ಚೀಟಿ ಹೊಂದಲು ನಿಯಮಾನುಸಾರ ಅರ್ಹರಿದ್ದಲ್ಲಿ ಅಂತಹವರ ಆದ್ಯತಾ ಪಡಿತರ ಚೀಟಿಯನ್ನು (PHH) ಮರುಸ್ಥಾಪಿಸಲು ಕ್ರಮವಹಿಸಲಾಗುತ್ತದೆ.

ಮಾನದಂಡಗಳ ಆಧಾರದ ಮೇಲೆ ಅನರ್ಹವೆಂದು ಕಂಡುಬAದ ಆದ್ಯತಾ ಪಡಿತರ ಚೀಟಿಗಳನ್ನು ((PHH) ) ಆದ್ಯತೇತರ ಪಡಿತರ ಚೀಟಿಗಳನ್ನಾಗಿ (NPHH) ಪರಿವರ್ತಿಸಲು ಕ್ರಮವಹಿಸಲಾಗುತ್ತಿದೆ.

ಇದನ್ನು ಮಿಸ್‌ ಮಾಡದೇ ಓದಿ: ssc calendar 2026 : SSC ಪರೀಕ್ಷಾ ಕ್ಯಾಲೆಂಡರ್ 2026 ಬಿಡುಗಡೆ

ಉಪ್ಪಿನ ಡಬ್ಬಕ್ಕೆ ನೀವೇನಾದ್ರು ಈ ಒಂದು ವಸ್ತುವನ್ನು ಹಾಕಿಟ್ಟರೆ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ಬೆಣ್ಣೆಯ ಹಾಗೆ ಕರಗಿ ಹೋಗುತ್ತವೆ …!!!

ಈ ರೀತಿ ತಾತ್ಕಾಲಿಕವಾಗಿ ಆದ್ಯತೇತರ ಪಡಿತರ ಚೀಟಿಯನ್ನಾಗಿ (NPHH) ಪರಿವರ್ತಿಸಲಾದ ಪಡಿತರ ಚೀಟಿದಾರರು ಆದ್ಯತಾ ಪಡಿತರ ಚೀಟಿ ಹೊಂದಲು PHH) ಅರ್ಹರಾಗಿದ್ದಲ್ಲಿ 45 ದಿನದೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಸಂಬAಧಪಟ ತಾಲ್ಲೂಕಿನ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದಲ್ಲಿ ಸದರಿ ಮನವಿಯನ್ನು ಪರಿಶೀಲಿಸಿ ಆದ್ಯತಾ ಪಡಿತರ ಚೀಟಿ ಹೊಂದಲು ನಿಯಮಾನುಸಾರ ಅರ್ಹರಿದ್ದಲ್ಲಿ ಅಂತಹವರ ಆದ್ಯತಾ ಪಡಿತರ ಚೀಟಿಯನ್ನು (PHH) ಮರುಸ್ಥಾಪಿಸಲು ಕ್ರಮವಹಿಸಲಾಗುತ್ತದೆ. ಅದರಂತೆ ಒಂದು ವೇಳೆ ಅರ್ಹ ಫಲಾನುಭವಿಯ ಆದ್ಯತಾ ಪಡಿತರ ಚೀಟಿಯನ್ನು ರದ್ದು ಪಡಿಸಿದಲ್ಲಿ, ಸಂಬಂಧಪಟ್ಟ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ration card karnataka

ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿಗಳನ್ನು ಪಡೆಯುವ ಬಗ್ಗೆ ಸರ್ಕಾರವು 2017 ರಲ್ಲಿ ಈ ಕೆಳಕಂಡಂತೆ ಹೊರಗಿಡುವ ಮಾನದಂಡಗಳನ್ನು ರೂಪಿಸಿದೆ.

ವೇತನವನ್ನು ಗಣನೆಗೆ ಎಲ್ಲಾ ಖಾಯಂ ನೌಕರರು ಅಂದರೆ ತೆಗೆದುಕೊಳ್ಳದೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ

ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮAಡಳಿಗಳು/ ನಿಗಮಗಳು/ ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡAತೆ ಆದಾಯ ತೆರಿಗೆ/ಸೇವಾ ತೆರಿಗೆ/ ಜಿಎಸ್‌ಟಿ/ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು.

ration card karnataka
ration card karnataka

ಗ್ರಾಮೀಣ ಪ್ರದೇಶಗಳಲ್ಲಿ 03 ಹೆಕ್ಟರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು.

ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು.

ಕುಟುಂಬದ ವಾರ್ಷಿಕ ಆದಾಯವು ರೂ.1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು

Do this immediately to recover canceled BPL card