ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್ : ಬಿ ಖಾತಾ ಆಸ್ತಿಗಳಿಗೆ ಎ ಖಾತಾ ಭಾಗ್ಯ

vidhana soudha
Image / Twitter

ಬೆಂಗಳೂರು : ರಾಜ್ಯದ ಇತರೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ‘ಬಿ’ ಖಾತಾ ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್ ಮತ್ತು ಫ್ಲಾಟ್‌ ಗಳಿಗೆ ‘ಎ’ ಖಾತಾ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಇದನ್ನು ಮಿಸ್‌ ಮಾಡದೇ ಓದಿ: ರದ್ದಾದ BPL ಕಾರ್ಡ್ ಮರು ಪಡೆಯಲು ತಕ್ಷಣವೇ ಈ ಕೆಲಸ ಮಾಡಿ.!

ಇದನ್ನು ಮಿಸ್‌ ಮಾಡದೇ ಓದಿ: ssc calendar 2026 : SSC ಪರೀಕ್ಷಾ ಕ್ಯಾಲೆಂಡರ್ 2026 ಬಿಡುಗಡೆ

ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಸಚಿವ ಹೆಚ್.ಕೆ ಪಾಟೀಲ್ ಅವರು ರಾಜ್ಯದ ಎಲ್ಲಾ ಬಿ-ಖಾತಾಗಳಿಗೂ ಎ-ಖಾತಾ ನೀಡೋದಕ್ಕೆ ಸಂಪುಟ ಸಭೆಯಲ್ಲ ನಿರ್ಧರಿಸಲಾಗಿದೆ ಎಂದರು.

ರಾಜ್ಯದ ಬಿ-ಖಾತಾ ನಿವೇಶನ, ಕಟ್ಟಡ, ಫ್ಲ್ಯಾಟ್ ಗಳಿಗೆ ಎ-ಖಾತಾ ನೀಡಲು ನಿರ್ಧರಿಸಲಾಗಿದೆ. ರಾಜ್ಯಾಧ್ಯಂತ 10 ಲಕ್ಷ ಕಟ್ಟಡಗಳಿಗೆ ಇದರಿಂದ ಲಾಭವಾಗಲಿದೆ. ಬೆಂಗಳೂರು ಬಳಿಕ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೂ ಇದನ್ನು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

Siddaramaiah
Siddaramaiah

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಬಂಧಿಸಿದ ಪ್ರಾಧಿಕಾರದ ಅನುಮೋದನೆ ಪಡೆಯದೆ ನಿರ್ಮಾಣವಾ ಗಿರುವ ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್ ಮತ್ತು ಫ್ಲಾಟ್‌ಗಳು ಈಗಾಗಲೇ ‘ಬಿ’ ಖಾತಾ ಪಡೆದಿದ್ದರೆ, ಅಂತಹ ಆಸ್ತಿಗಳಿಗೆ ಈಗ ಎ ಖಾತಾ ದೊರೆಯಲಿದೆ.

It has been decided in the cabinet meeting to give b khata  to all the other urban local bodies of the state for A khata for land, building, apartment and flats.