ನವದೆಹಲಿ: ಜುಲೈ 01, 2025 ರಿಂದ ಅಂದರೆ ಇಂದಿನಿಂದ ಹಣಕ್ಕೆ ಸಂಬಂಧಿಸಿದ ನಿಯಮಗಳು ನಿಮ್ಮ ಜೇಬಿನ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಪರಿಣಾಮವನ್ನು ಬೀರುವುದರಲ್ಲಿ ಸಂಶಯವಿಲ್ಲ. ಅದರಲ್ಲಿ ಬಹಳ ಪ್ರಮುಖವಾಗಿದೆ ಪ್ಯಾನ್‌ಗೆ (pan) ಕಡ್ಡಾಯ ಆಧಾರ್ (Aadhaar) ಕೂಡ ಸೇರಿದೆ.
ಇಂದಿನಿಂದ ಹೊಸ ಪ್ಯಾನ್ ಕಾರ್ಡ್‌ಗೆ (PAN card) ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರನ್ನು ಪರಿಶೀಲಿಸಲು ಆಧಾರ್ (Aadhaar) ಅನ್ನು ಸಹ ಬಳಸಲಾಗುವುದು ಎಂದು ಸಿಬಿಡಿಟಿ ಈಗ ಮಾಡಿದೆ. ಅಂದ ಹಾಗೇ ಈ ಹಿಂದೆ ಹಿಂದೆ, ಸರ್ಕಾರದಿಂದ ನೀಡಲಾಗಿರುವಂತಹ ಫೋಟೋ ಐಡಿ ಮತ್ತು ಜನನ ಪ್ರಮಾಣಪತ್ರ ಮಾತ್ರ ಅವಶ್ಯಕತೆ ಇತ್ತು. ಈ ಹೊಸ ನಿರ್ಧಾರದ ಬಗ್ಗೆ ಹೇಳಿರುವ ಸಿಬಿಡಿಟಿ (CBDT) ಇದು ತೆರಿಗೆ ವ್ಯವಸ್ಥೆ(Tax system) ಮತ್ತು ಡಿಜಿಟಲ್ ಪರಿಶೀಲನೆಯನ್ನು ಬಲಪಡಿಸುವತ್ತ ಒಂದು ಹೆಜ್ಜೆಯಾಗಿದೆ ಅಂತ ತಿಳಿಸಿದೆ.
ಇದಲ್ಲದೇ ಪ್ರಸ್ತುತ ಪ್ಯಾನ್ (PAN card) ಹೊಂದಿರುವವರು ತಮ್ಮ ಕಾರ್ಡ್‌ಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್‌ದಾರರು ದಂಡವಿಲ್ಲದೆ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಲು ಡಿಸೆಂಬರ್ 31, 2025 ರ ಕೊನೆಯವಾಗಿದೆ ಎನ್ನುವುದನ್ನು ಗಮನಿಸ ಬಹುದಾಗಿದೆ. ಆಧಾರ್‌ಗೆ ಲಿಂಕ್ ಮಾಡದ ಯಾವುದೇ ಪ್ಯಾನ್ (PAN card) ಕಾರ್ಡ್‌ಗಳು ಮುಂದಿನ ವರ್ಷದಿಂದ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ ಎನ್ನುವುದನ್ನು ಕೂಡ ಗಮನಿಸಬೇಕಾಗಿದೆ. ಅಂದ ಹಾಗೇ ಮಾರ್ಚ್ 2024 ರ ಹೊತ್ತಿಗೆ, ಭಾರತದಲ್ಲಿ 740 ಮಿಲಿಯನ್‌ಗಿಂತಲೂ ಹೆಚ್ಚು ಪ್ಯಾನ್ ಕಾರ್ಡ್‌ದಾರರಿದ್ದು, 605 ಮಿಲಿಯನ್ ಜನರು ತಮ್ಮ ಆಧಾರ್ ಲಿಂಕ್ ಅನ್ನು ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ.
From now on, Aadhaar card is mandatory to get PAN.
Follow Me