ನವದೆಹಲಿ: ಅರೋಗ್ಯ ಸಂಬಂಧಿತ ವಿಮಾ ಯೋಜನೆಯಲ್ಲಿ ಮತ್ತೊಂದು ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ , ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಆಸ್ಪತ್ರೆಯಿಂದ ಡಿಸ್ಚಾರ್ಜ್ ದೃಢೀಕರಣ ವಿನಂತಿಯನ್ನು ಸ್ವೀಕರಿಸಿದ ಮೂರು ಗಂಟೆಗಳ ಒಳಗೆ ಎಲ್ಲಾ ನಗದುರಹಿತ ಕ್ಲೈಮ್ಗಳನ್ನು ಪ್ರಕ್ರಿಯೆಗೊಳಿಸುವುದನ್ನು ಕಡ್ಡಾಯಗೊಳಿಸಿದೆ.
ಮೂರು ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ, ಆಸ್ಪತ್ರೆ ವಿಧಿಸುವ ಹೆಚ್ಚುವರಿ ಮೊತ್ತವನ್ನು ವಿಮಾದಾರರು ಷೇರುದಾರರ ನಿಧಿಯಿಂದ ಭರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಕೂಡ ನೀಡಿದೆ2024 ರಲ್ಲಿ ವಿಮಾ ಕ್ಲೈಮ್‌ಗಳ ತ್ವರಿತ ಇತ್ಯರ್ಥಕ್ಕಾಗಿ IRDAI ಈಗಾಗಲೇ ಮಾರ್ಗಸೂಚಿಗಳನ್ನು ಹೊರಡಿಸಿದ್ದರೂ, ವಿಮಾ ಕಂಪನಿಗಳು (Health Insurance) ಅದನ್ನು ಪಾಲನೆ ಮಾಡುವುದಕ್ಕೆ ವಿಫಲವಾಗಿದೆ ಎನ್ನಲಾಗಿದೆ. ನವೆಂಬರ್ 2022 ರಲ್ಲಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಈ ಬಗ್ಗೆ ಮಹತ್ವದ ಆದೇಶವನ್ನು ಹೊರಡಿಸಿತ್ತು.
2047 ರ ವೇಳೆಗೆ ಎಲ್ಲಾ ನಾಗರಿಕರಿಗೆ ಸುಲಭವಾಗಿ ಸಿಗುವ ಮತ್ತು ಕೈಗೆಟುಕುವ ಆರೋಗ್ಯ ವಿಮಾ (Health Insurance) ರಕ್ಷಣೆಯನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿರುವುದಾಗಿ ತಿಳಿದು ಬಂದಿದೆ.ಈ ನಡುವೆ ಈ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ಒಂದೇ ರೀತಿಯ ಫಾರ್ಮ್ ಇರಲಿದೆ.

ಇನ್ನು ಅದಕ್ಕಾಗಿಯೂ, ವಿಮಾ ಕ್ಲೇಮ್ಗಳ (Insurance Claims) ಹಾಗೂ ಅರ್ಜಿ ಪತ್ರಗಳನ್ನು ಸುಲಭ ಮತ್ತ ಅರ್ಥಮಾಡಿಕೊಳ್ಳುವಂತಾಗಿಸಲು ವೃತ್ತಿಪರ ಏಜೆನ್ಸಿಯ ಸಹಾಯದಿಂದ ಮಾನಕೀಕೃತ ರೂಪವನ್ನು ತಯಾರಿಸುವ ಯೋಜನೆಯೂ ಇದೆ. ಇದರಿಂದ ಗ್ರಾಹಕರಿಗೆ ವಿಮಾ ((Insurance) ನೀಡುವವರು ಸಮಯಕ್ಕೆ ಸರಿಯಾಗಿ ಹಾಗೂ ಸಂಪೂರ್ಣ ಮೊತ್ತವನ್ನು ಪಾವತಿಸಲು ಸಾಧ್ಯವಾಗಲಿದೆ ಎನ್ನಲಾಗಿದೆ.

ಆರೋಗ್ಯ ಹಕ್ಕು ವಿನಿಮಯ ಮೂಲಕ ಇನ್ಶುರನ್ಸ್ ಕ್ಲೇಮ್ ಸೆಟಲ್ ಮೆಂಟ್ ಪ್ರಕ್ರಿಯೆ ಯನ್ನು ಪಾರ್ದರ್ಶಕವಾಗಿಸಲು ಕೆಲಸ ಮಾಡುತ್ತಿದೆ. ಇದಕ್ಕೆ ರಾಷ್ಟ್ರೀಯ ಆರೋಗ್ಯ ಅಧಿಕಾರ ಮತ್ತು ಇರ್ಡಾ ಜೊತೆಯೊಂದಿಗೆ ಹೊಸ ನಿರ್ದೇಶನಗಳನ್ನು ತಯಾರಿಸುತ್ತಿದ್ದಾರೆ. ಇದು ಒಂದು ಡಿಜಿಟಲ್ ವೇದಿಕೆಯಾಗಿದ್ದು , ಇದು ಆರೋಗ್ಯ ವಿಮೆ ದಾಖಲಾತಿಯ ಪ್ರಕ್ರಿಯೆ ಯನ್ನು ಮಾನಕೀಕರಣಗೊಳಿಸುತ್ತದೆ. ಜುಲೈ 2024 ರೊಳಗೆ, 34 ವಿಮಾ ಕಂಪನಿಗಳು (Insurance Companies) ಮತ್ತು ಟಿಪಿಎ ಈ ವೇದಿಕೆಯಲ್ಲಿ ಚಟುವಟಿಕೆ ನಡೆಸುತ್ತಿವೆ. 300 ಆಸ್ಪತ್ರೆಗಳು ಇದರಲ್ಲಿ ಸೇರಬೇಕು ಎನ್ನಲಾಗಿದೆ.

Follow Me