ನವದೆಹಲಿ: ಭಾರತದಲ್ಲಿ ಚಿನ್ನದ ಬೆಲೆಗಳು ಏಪ್ರಿಲ್ 23 ರಂದು ತೀವ್ರವಾಗಿ ಬೆಲೆಯಲ್ಲಿ ಕುಸಿತಕಂಡವು, ಒಂದು ದಿನದ ಹಿಂದೆ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದ ನಂತರ ಹಾಗೂ ಜಾಗತಿಕ ಬೆಳವಣಿಗೆಗಳ ನಂತರ, ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ವ್ಯಾಪಾರ ಮಾತುಕತೆಗಳ ನಂತರ ಹೂಡಿಕೆದಾರರು ತಮ್ಮ ಸುರಕ್ಷಿತ ಹೂಡಿಕೆಯತ್ತ ಗಮನಸ ಹರಿಸಿದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.

ಇಂದು ಬೆಳಿಗ್ಗೆ 9 ಗಂಟೆಗೆ, ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (ಎಂಸಿಎಕ್ಸ್) ನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,358 ರೂ.ಗಳಿಂದ 95,982 ರೂ.ಗೆ ಇಳಿಕೆ ಕಂಡಿದೆ. ಇದಲ್ಲದೇ ಬೆಳ್ಳಿ ಬೆಲೆಯಲ್ಲಿಯೂ 387 ರೂಪಾಯಿ ಇಳಿಕೆಯಾಗಿದ್ದು, ಪ್ರತಿ ಕೆ.ಜಿ.ಗೆ 95,492 ರೂ. ಏಪ್ರಿಲ್ 22 ರಂದು ಚಿನ್ನದ ಬೆಲೆ 10 ಗ್ರಾಂಗೆ ಸಾರ್ವಕಾಲಿಕ ಗರಿಷ್ಠ 99,350 ರೂ.ಗೆ ತಲುಪಿದ ನಂತರ ಈ ಕುಸಿತ ಕಂಡುಬಂದಿದೆ. ಕೇವಲ ಒಂದು ಸೆಷನ್ನಲ್ಲಿ, ಎಂಸಿಎಕ್ಸ್ ಚಿನ್ನವು 3,900 ರೂ.ಗಳಷ್ಟು ಕುಸಿತ ಕಂಡಿದೆ.

ಇಂಡಿಯನ್ ಬುಲಿಯನ್ ಅಸೋಸಿಯೇಷನ್ (ಐಬಿಎ) ಪ್ರಕಾರ, ಏಪ್ರಿಲ್ 23 ರಂದು ಬೆಳಿಗ್ಗೆ 9 ಗಂಟೆಗೆ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 96,200 ರೂ. 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 88,100 ರೂಪಾಯಿ ದಾಖಲಾಗಿದೆ. ಇನ್ನು ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 95,940 ರೂಗಳಿಗೆ ಮಾರಾಟವಾಗುತ್ತಿದೆ.
ಏಪ್ರಿಲ್ 23 ರಂದು ನಗರವಾರು ಚಿನ್ನ ಮತ್ತು ಬೆಳ್ಳಿಯ ಬೆಲೆಗಳ ನೋಟ ಇಲ್ಲಿದೆ:
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 100 ರು ಏರಿಕೆ ಕಂಡು 96,000ರು ಬೆಲೆ ಹಾಗೂ ಅಪರಂಜಿ 10 ಗ್ರಾಂಗೆ 100 ರು ಇಳಿಕೆಯಾಗಿ 98,900ರು ನಷ್ಟಿದೆ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 96,040 ರೂ ಆಗಿದೆ.
ತಮಿಳುನಾಡಿನ ಚೆನ್ನೈನಲ್ಲಿ ಇಂದಿನ ಬಂಗಾರದ ಬೆಲೆ 10 ಗ್ರಾಂಗೆ 96,260 ರೂ ದಾಖಲಾಗಿದೆ. ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 96,100 ರೂ ಆಗಿದೆ.
ನವದೆಹಲಿಯಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 95,820 ರೂಪಾಯಿ ದಾಖಲಾಗಿದೆ.
ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 96,160 ರೂಪಾಯಿ ದಾಖಲಾಗಿದೆ.
ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 94,860 ರೂಪಾಯಿ ದಾಖಲಾಗಿದೆ.
Follow Me