ಅನಾರೋಗ್ಯವಾಗಿರುವ ಕೋಳಿ ಮರಿ ವಿತರಿಸಿದ್ದಕ್ಕೆ ದಂಡ

District Consumer Disputes Redressal Commission
District Consumer Disputes Redressal Commission shimoga

ಅನಾರೋಗ್ಯವಾಗಿರುವ ಕೋಳಿಮರಿಗಳನ್ನು ವಿತರಿಸಿ ನಷ್ಟ ಉಂಟು ಮಾಡಿದ ಎದುರುದಾರ ಕೋರ್ಮಲ ಹ್ಯಾಚರೀಸ್, ಕೆ.ಆರ್ ರಸ್ತೆ ಬೆಂಗಳೂರು ಇವರು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ತಬಸುಮ್ ಸುಲ್ತಾನ ಶಿವಮೊಗ್ಗ ಇವರು ಕೋರ್ಮಲ ಹ್ಯಾಚರೀಸ್, ಕೆ.ಆರ್ ರಸ್ತೆ ಬೆಂಗಳೂರು ಇವರ ವಿರುದ್ದ ದೂರನ್ನು ಸಲ್ಲಿಸಿ ದಿ: 24-12-2024 ರಂದು ರೂ.1,63,200 ಗಳನ್ನು ಪಾವತಿಸಿ 4896 ಬ್ರಾಯಲರ್ ಕೋಳಿ ಮರಿಗಳನ್ನು ಖರೀದಿಸಿದ್ದರು. ದಿ: 25-12-2024 ರಂದು ಎದುರುದಾರರು ದೂರುದಾರರಿಗೆ ಕೋಳಿಮರಿಗಳನ್ನು ಕೊಡುವಾಗ ಸುಮಾರು 145 ಮರಿಗಳು ಸತ್ತಿರುತ್ತವೆ. ಈ ವಿಷಯವನ್ನು ಎದುರುದಾರರಿಗೆ ತಿಳಿಸಿದಾಗ ಎದುರುದಾರರು ಸತ್ತ ಕೋಳಿಮರಿಗಳ ಹಣವನ್ನು ಹಿಂದಿರುಗಿಸುವುದಾಗಿ ತಿಳಿಸಿರುತ್ತಾರೆ. ನಂತರದಲ್ಲಿ ದೂರುದಾರರು ಕೋಳಿಮರಿಗಳಿಗೆ ಔಷಧಿ ಮತ್ತು ಆಹಾರವನ್ನು ನೀಡುತ್ತಾ ಬಂದರೂ 03 ವಾರಗಳಲ್ಲಿ ಸುಮಾರು 900 ರಿಂದ 950 ಮರಿಗಳು ಸಾವನಪ್ಪಿರುತ್ತವೆ ಹಾಗೂ ಸುಮಾರು 250 ಮರಿಗಳು 1.2 ರಿಂದ 1.3 ಕೆ ಜಿ ಒಳಗೆ ತೂಕವನ್ನು ಹೊಂದಿರುತ್ತವೆ. ಈ ವಿಷಯವನ್ನು ದೂರುದಾರರು ಎದುರುದಾರರಿಗೆ ಆಗಾಗ್ಗೆ ತಿಳಿಸಿದ್ದು ಎದುರುದಾರರು ಸಾವನ್ನಪ್ಪಿರುವ ಕೋಳಿಮರಿಗಳ ಮೌಲ್ಯವನ್ನು ಹಿಂದುರಿಗಿಸಿ ಕೊಡುವುದಾಗಿ ಭರವಸೆ ನೀಡಿ, 215+145 ಮರಿಗಳ ಮೊತ್ತ ರೂ.12,240 ಮಾತ್ರ ಹಿಂದಿರುಗಿಸಿರುತ್ತಾರೆ. ನಂತರ ಕರೆ ಮಾಡಿದರೆ ನಂಬರ್ ಬ್ಲಾಕ್ ಮಾಡಿರುತ್ತಾರೆ.

ಇದನ್ನು ಮಿಸ್‌ ಮಾಡದೇ ಓದಿ: ಇದನ್ನು ಮಿಸ್‌ ಮಾಡದೇ ಓದಿ :ಜಸ್ಟ್ ಒಂದೇ ನಿಮಿಷದಲ್ಲಿ ವಾಟ್ಸಪ್ ಮೂಲಕ ನಿಮ್ಮ `ಆಧಾರ್ ಕಾರ್ಡ್’ ಡೌನ್ಲೋಡ್ ಮಾಡಿಕೊಳ್ಳಿ

ಇದನ್ನು ಮಿಸ್‌ ಮಾಡದೇ ಓದಿ: ಶಿವಮೊಗ್ಗ : ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ

ಆದ್ದರಿಂದ ದೂರುದಾರರು ಎದುರುದಾರರು ಅನಾರೋಗ್ಯವಾಗಿರುವ ಕೋಳಿ ಮರಿಗಳನ್ನು ವಿತರಿಸಿ ನಷ್ಟಕ್ಕೆ ಕಾರಣರಾಗಿದ್ದು ಹಾಗೂ ಸೇವಾ ನ್ಯೂನ್ಯತೆ ಎಸಗಿರುವುದಕ್ಕಾಗಿ ತಮಗೆ ಸೂಕ್ತ ಪರಿಹಾರ ನೀಡುವಂತೆ ಕೋರಿ ಆಯೋಗಕ್ಕೆ ದೂರು ಸಲ್ಲಿಸಿರುತ್ತಾರೆ.

ಆಯೋಗವು ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ಇತರೆ ದಾಖಲೆಗಳನ್ನು ಪರಿಶೀಲಿಸಿ, ಉಭಯ ಪಕ್ಷಗಾರರ ವಾದ-ವಿವಾದಗಳನ್ನು ಆಲಿಸಿ, ಎದುರುದಾರರು ದೂರುದಾರರಿಗೆ ಸರಬರಾಜು ಮಾಡಿರುವ ಕೋಳಿಮರಿಗಳ ಆರೋಗ್ಯ ಗುಣಮಟ್ಟದಲ್ಲಿ ಕೊರತೆ ಇರುವುದನ್ನು ಪರಿಗಣಿಸಿ ಎದುರುದಾರರು ದೂರುದಾರರಿಗೆ ರೂ.25000 ಗಳ ವಾರ್ಷಿಕ ಶೇ.9 ರ ಬಡ್ಡಿಯನ್ನು ಸೇರಿಸಿ ದಿ: 13-01-2025 ರಿಂದ ಈ ಆದೇಶವಾದ 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದಲ್ಲಿ ವಾರ್ಷಿಕ ಶೇ.12 ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ನೀಡುವವರೆಗೆ ಪಾವತಿಸಬೇಕು ಹಾಗೂ ರೂ.10,000 ಗಳನ್ನು ದೂರಿನ ಖರ್ಚುವೆಚ್ಚಕ್ಕಾಗಿ ಈ ಆದೇಶವಾದ 45 ದಿಗನಳ ಒಳಗಾಗಿ ಪಾವತಿಸಬೇಕು. ತಪ್ಪಿದಲ್ಲಿ ವಾರ್ಷಿಕ ಶೇ.12 ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ನೀಡುವವರೆಗೆ ಪಾವತಿಸಬೇಕೆಂದು ಆಯೋಗದ ಅಧ್ಯಕ್ಷರಾದ ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ದಿ: 31-12-2025 ರಂದು ಆದೇಶಿಸಿದೆ.

Fine for distributing sick chickens