Heart Attack: ಹೃದಾಯಾಘಾತಗಳಿಗೆ ಕೋವಿಡ್ ಲಸಿಕೆ ನೇರ ಕಾರಣವಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

Health Minister Dinesh Gundu Rao

ಬೆಂಗಳೂರು: ಆಸ್ಪತ್ರೆಯ(Hospital) ಹೊರೆಗೆ ನಡೆಯುವ ಎಲ್ಲ ಹಠಾತ್ ಸಾವುಗಳು ಇನ್ಮುಂದೆ ನೋಟಿಫೈಯಾಗಲಿದ್ದು, ಹೃದಯಾಘಾತಗಳ(Heart Attack) ಬಗ್ಗೆ ಸಂಶೋಧನೆಗೆ ಹೆಚ್ಚಿನ ಅಂಕಿ ಅಂಶಗಳು ದೊರೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Health Minister Dinesh Gundu Rao) ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೋವಿಡ್ ಅಡ್ಡ ಪರಿಣಾಮಗಳ ಕುರಿತು ತಜ್ಞರ ಸಮಿತಿಯ ವರದಿ ಸ್ವೀಕರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಕೋವಿಡ್ ಬಳಿಕ ಶೇ 4 ರಿಂದ 5 ರಷ್ಟು ಹೃದಯಾಘಾತಗಳ ಸಂಖ್ಯೆ ಹೆಚ್ಚಾಗಿವೆ ಎಂದರು. ಆದರೆ ಇದಕ್ಕೆ ಕೋವಿಡ್ ಲಸಿಕೆ(covid vaccine) ನೇರ ಕಾರಣವಲ್ಲ ಎಂಬುದು ತಜ್ಞರ ವರದಿಯಲ್ಲಿ ಹೇಳಲಾಗಿದೆ ಎಂದು ಸ್ಪಷ್ಟಪಡಿಸಿದರು.‌

ಹೃದಯಾಘಾತಗಳು ಹೆಚ್ಚಾಗಲು ಶೇ 50 ರಷ್ಟು ಪ್ರಕರಣಗಳಲ್ಲಿ ತಂಬಾಕು ಸೇವನೆಯೇ ಪ್ರಮುಖ ಕಾರಣ ಎಂಬುದು ತಜ್ಞರ ವರದಿಯಲ್ಲಿ ಹೇಳಲಾಗಿದೆ. ಇದರ ಹೊರತಾಗಿ ಮಧುಮೇಹ, ರಕ್ತದೊತ್ತಡ, ಒಬೆಸಿಟಿ ಹೆಚ್ಚಾಗಿದೆ. ಸ್ಟೀರಾಯ್ಡ್ ಹೆಚ್ಚಿನ ಬಳಕೆಯೂ ಕೂಡ ಕಾರಣವಾಗಿದೆ. ಕೋವಿಡ್ ಪೂರ್ವದಲ್ಲಿ ಜಯದೇವ ಆಸ್ಪತ್ರೆ ಮೆಡಿಕಲ್ ರೆಕಾರ್ಡ್ಸ್ ಗೆ ಹೊಲಿಕೆ ಮಾಡಿ ಕೂಡಾ ವರದಿ ಸಿದ್ಧಪಡಿಸಲಾಗಿದೆ. ಜಯದೇವ ಆಸ್ಪತ್ರೆಯಲ್ಲಿ 253 ಹೃದ್ರೋಗ ರೋಗಿಗಳ ಮೇಲೆ ಅಧ್ಯಯನ ಮಾಡಲಾಗಿದೆ. ಹೃದಯಾಘಾತಗಳಿಗೆ ಕೋವಿಡ್ ಲಸಿಕೆ ನೇರ ಕಾರಣವಲ್ಲ ಎಂದು ತಿಳಿದುಬಂದಿದೆ. ಎಂಆರ್ ಎನ್ ಎ ಲಸಿಕೆಯಿಂದ ಕೊಂಚ ಸಮಸ್ಯೆ ಎದುರಾಗಿದೆ. ಆದರೆ ಈ ಲಸಿಕೆಯನ್ನು ನಮ್ಮ ದೇಶದಲ್ಲಿ ಯಾರು ಪಡೆದಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

heart attack

ಇದನ್ನು ಮಿಸ್‌ ಮಾಡದೇ ಓದಿ: ಕರ್ನಾಟಕದಲ್ಲಿ ಹೃದಯಾಘಾತಕ್ಕೆ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆ ಇದು, ಫೋನ್‌ ನಂಬರ್ ಸೇವ್ ಮಾಡ್ಕೊಳ್ಳಿ!

ಇದನ್ನು ಮಿಸ್‌ ಮಾಡದೇ ಓದಿ:  ನಾವು ದೇವರಿಗೆ ಕರ್ಪೂರದ ಆರತಿ ಮಾಡುವುದು ಏಕೆ ಗೊತ್ತಾ?

ಇದನ್ನು ಮಿಸ್‌ ಮಾಡದೇ ಓದಿ: ಸ್ವಂತ ಮನೆ ಇಲ್ಲದವರಿಗೆ ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್‌: ಹೊಸ ಮನೆಗಾಗಿ ಈ ರೀತಿ ಅರ್ಜಿ ಸಲ್ಲಿಸಿ

ಇದನ್ನು ಮಿಸ್‌ ಮಾಡದೇ ಓದಿ: ಜಿಯೋ ಸರ್ವರ್‌ ಡೌನ್‌, ತೊಂದರೆ ಅನುಭವಿಸಿದ್ದ ಗ್ರಾಹಕರು..!

 

ಮೊಬೈಲ್, ಸಿಸ್ಟಮ್ ಗಳ ಸ್ಕ್ರೀನ್ ಮುಂದೆ ಮಿತಿಮೀರಿದ ಸಮಯ ಕಳೆದಿರುವುದು ಪರಿಣಾಮ ಬೀರಿದೆ. ಕೋವಿಡ್ ಸಮಯದಲ್ಲಿ ಹೃದಯಾಘಾತಗಳಾಗಿವೆ. ಆದರೆ 3 ವರ್ಷಗಳ ನಂತರ‌ ಕೋವಿಡ್ ನಿಂದ ದುಷ್ಪರಿಣಾಮ ಬೀರಿರುವುದು ಕಡಿಮೆ ಎಂದು ತಜ್ಞರು ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.‌ 253 ಪ್ರಕರಣಗಳಲ್ಲಿ 19 ಪ್ರಕರಣಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದವು. ಆದರೆ ಶೇ 98 ರಷ್ಟು ಪ್ರಕರಣಗಳಲ್ಲಿ ಕೋವಿಡ್ ಲಸಿಕೆ ಪಡೆದವರಾಗಿದ್ದರು.‌ ಕೊವಿಡ್ ಬಂದ ಒಂದು ವರ್ಷದಲ್ಲಿ ರಕ್ತನಾಳ ಬ್ಲಾಕೇಜ್ ಆಗೋ ಸಾಧ್ಯತೆ ಇದೆ. ಆದ್ರೆ ಮೂರು ವರ್ಷದ ನಂತರ ಅದರ ಪರಿಣಾಮ ಅಷ್ಟರ ಮಟ್ಟಿಗೆ ಇಲ್ಲ ಎಂಬುದು ತಜ್ಞರ ವರದಿಯಲ್ಲಿ ಹೇಳಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

heart attack

ತಜ್ಞರ ವರದಿಯ ಹಿನ್ನೆಲೆಯಲ್ಲಿ ಹೃದಯಾಘಾತಗಳನ್ನ ಆರಂಭದಲ್ಲೇ ಪತ್ತೆ ಹಚ್ಚಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಲವು ಮಹತ್ವದ ನಿರ್ಧಾರಗಳನ್ನ ಘೋಷಿಸಿದರು..

* ಸರ್ಕಾರಿ ಆಸ್ಪತ್ರೆಯ ಹೊರಗೆ ನಡೆಯುವ ಎಲ್ಲ ಹಠಾತ್ ಸಾವುಗಳನ್ನು ಅಧಿಸೂಚಿತ ಖಾಯಿಲೆ ಎಂದು ಪರಿಗಣಿಸಲು ನಿರ್ಧಾರ.

* ಆಸ್ಪತ್ರೆಯ ಹೊರಗೆ ನಡೆಯುವ ಎಲ್ಲ ಹಠಾತ್ ಸಾವುಗಳ ಡೆತ್ ಸರ್ಟಿಫಿಕೇಟ್ ಪಡೆಯಲು ಮರಣೋತ್ತರ ಪರೀಕ್ಷೆ ಕಡ್ಡಾಯ..

* 15 ವರ್ಷದ ಎಲ್ಲ ಶಾಲಾ ಮಕ್ಕಳನ್ನು ಹೃದಯ ತಪಾಸಣೆಗೆ ಒಳಪಡಿಸಲು ಪ್ಲಾನ್.

* ಪಠ್ಯ ಪುಸ್ತಕದಲ್ಲಿ ಶಾಲಾ ಮಕ್ಕಳಿಗೆ ಅಸಾಂಕ್ರಾಮಿಕ ರೋಗ, ಹೃದಯ circular ಅಳವಡಿಸಲು ಶಿಕ್ಷಣ ಇಲಾಖೆಗೆ ಮಾಹಿತಿ ಕಳುಹಿಸಲಾಗಿದೆ.

* ಹಠಾತ್ ಹೃದಯಘಾತಗಳ ಸಂದರ್ಭದಲ್ಲಿ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತಿರುವ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ವಿಸ್ತರಣೆ.

* ಬಸ್ ಸ್ಟಾಂಡ್, ರೈಲ್ವೇ ನಿಲ್ದಾಣಗಳಲ್ಲಿ ಸ್ವಯಂ ಚಾಲಿತ AED ಯಂತ್ರಗಳನ್ನ ಇಡಲು ನಿರ್ಧಾರ. ಸಾರ್ವಜನಿಕರಿಗೆ ಸಿಪಿಆರ್ ತರಬೇತಿ ನೀಡಲು‌ ಯೋಜನೆ.

* ಸರ್ಕಾರ ಮಟ್ಟದಲ್ಲಿ ಸರ್ಕಾರಿ‌ ನೌಕಕರಿಗೆ, ಗುತ್ತಿಗೆ ನೌಕರರಿಗೆ ಹೃದಯ ತಪಾಸಣೆ, ಎ6 ಸ್ಕ್ರೀನಿಂಗ್ ಮಾಡಲು ನಿರ್ಧರಿಸಿದ್ದೇವೆ

* ಖಾಸಗಿ ಕಂಪನಿಗಳು, ಉದ್ದಿಮೆದಾರರು ತಮ್ಮ ಕಂಪನಿಗಳಲ್ಲಿ ಕಾರ್ಮಿಕರಿಗೆ ವಾರ್ಷಿಕ ಆರೋಗ್ಯ ತಪಾಸಣೆ ನಡೆಸಲು ಸಲಹೆ.