ಶಿವಮೊಗ್ಗ: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿವಮೊಗ್ಗ ಇಲ್ಲಿ 2025-26 ನೇ ಸಾಲಿನಲ್ಲಿ ಕೆಇಎ ಮೂಲಕ ಎಲ್ಲಾ ಸುತ್ತಿನ ಸೀಟು ಹಂಚಿಕೆಯ ನಂತರ ಉಳಿಕೆಯಾಗಿರುವ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸಿನ ಸೀಟುಗಳನ್ನು ಭರ್ತಿ ಮಾಡಲಾಗುವುದು.
ಬಿಎಸ್ಸಿ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ ರೆಗ್ಯುಲರ್ 05, ಲ್ಯಾಟರಲ್ 04 ಒಟ್ಟು 09. ಬಿಎಸ್ಸಿ ಆಪ್ಟೆಮೆಟ್ರಿ ರೆಗ್ಯುಲರ್ 20. ಬಿಎಸ್ಸಿ ರೀನಲ್ ಡಯಾಲಿಸಿಸ್ ಟೆಕ್ನಾಲಜಿ 10. ಬಿಎಸ್ಸಿ ರೆಸ್ಪರೇಟರಿ ಕೇರ್ ಟೆಕ್ನಾಲಜಿ 02. ಬಿಎಸ್ಸಿ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ರೆಗ್ಯುಲರ್ 02, ಲ್ಯಾಟರಲ್ 01 ಒಟ್ಟು 03 ಸೀಟುಗಳು ಲಭ್ಯವಿದೆ.
ಇದನ್ನು ಮಿಸ್ ಮಾಡದೇ ಓದಿ : ಸಾರ್ವಜನಿಕರ ಸುರಕ್ಷಿತ ಓಡಾಟಕ್ಕೆ sky walk ನಿರ್ಮಾಣಕ್ಕೆ ಸೂಚನೆ : ಬಿ.ವೈ. ರಾಘವೇಂದ್ರ
ಇದನ್ನು ಮಿಸ್ ಮಾಡದೇ ಓದಿ : ಹಳ್ಳಿ ಅಧಿಕಾರ ಕಸಿದುಕೊಂಡ ಮೋದಿ ಸರ್ಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ
ಜ.08 ರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 5 ಗಂಟೆವರೆಗೆ ವಾಕ್ ಇನ್ ಅಡ್ಮಿಷನ್ನ್ನು 2ನೇ ಫ್ಲೋರ್ನ ಕಮ್ಯುನಿಟಿ ಮೆಡಿಸಿನ್ ಲೆಕ್ಚರರ್ ಹಾಲ್, ಸಿಮ್ಸ್ ಶಿವಮೊಗ್ಗ ಇಲ್ಲಿ ನಿಗದಿಪಡಿಸಲಾಗಿದೆ. ಕೆಇಎ ನಲ್ಲಿ ನೋಂದಾಯಿತ ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಭರ್ತಿ ಮಾಡಲಾಗುವುದು ಎಂದು ಸಿಮ್ಸ್ ನಿರ್ದೇಶಕರು ತಿಳಿಸಿದ್ದಾ
ಸ್ವಾತಂತ್ರದ ಓಟ ಕಾದಂಬರಿಯ ರಂಗಪ್ರಯೋಗಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ
ಶಿವಮೊಗ್ಗ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬೊಳುವಾರು ಮೊಹಮ್ಮದ್ ಕುಂಞ ಅವರ ಸ್ವಾತಂತ್ರದ ಓಟ ಕಾದಂಬರಿಯನ್ನು ನಾಟಕ ರೂಪದಲ್ಲಿ ರಂಗಾಯಣ, ಶಿವಮೊಗ್ಗ ನಿರ್ಮಾಣ ಮಾಡಿ ರಾಜ್ಯಾದ್ಯಂತ ಪ್ರದರ್ಶಿಸುವ ಯೋಜನೆ ಹಮ್ಮಿಕೊಂಡಿದ್ದು, ಈ ಯೋಜನೆಗೆ 2026 ರ ಫೆಬ್ರವರಿಯಿಂದ 2026 ರ ಜೂನ್ವರೆಗೆ ಐದು ತಿಂಗಳ ಅವಧಿಗೆ ರೆಪರ್ಟರಿ ಕಲಾವಿದರಲ್ಲದೇ 15 ಜನ ಆಸಕ್ತ ಹಾಗೂ ಅನುಭವಿ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಲಾವಿದರ ವಯಸ್ಸು ಕನಿಷ್ಟ 20 ರಿಂದ ಗರಿಷ್ಟ 40 ಇರಬೇಕು. ಆಯ್ಕೆಯಾದ ಕಲಾವಿದರಿಗೆ ಮಾಹೆಯಾನ ರೂ.22 ಸಾವಿರ ಗೌರವ ಸಂಭಾವನೆ, ಊಟ, ಉಪಹಾರ ಮತ್ತು ವಸತಿ ವ್ಯವಸ್ಥೆ ಒದಗಿಸಲಾಗುವುದು. ಯೋಜನೆಯು 5 ತಿಂಗಳ ಅವಧಿಯಾಗಿದ್ದು ಅರ್ಜಿ ಸಲ್ಲಿಸಲು ಜ.16 ಕಡೆಯ ದಿನವಾಗಿರುತ್ತದೆ. ಅರ್ಜಿಯನ್ನು ಆಡಳಿತಾಧಿಕಾರಿಗಳು, ರಂಗಾಯಣ, ಹೆಲಿಪ್ಯಾಡ್ ಹಿಂಭಾಗ, ಅಶೋಕನಗರ, ಶಿವಮೊಗ್ಗ 577201 ಇಲ್ಲಿಗೆ ಖುದ್ದಾಗಿ, ಅಂಚೆ ಮೂಲಕ ಅಥವಾ ಇ-ಮೇಲ್ [email protected] ಮೂಲಕ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ರಂಗಾಯಣ, ಶಿವಮೊಗ್ಗ ಕಚೇರಿ, ದೂರವಾಣಿ ಸಂಖ್ಯೆ : 08182-256353, 7975229166 ನ್ನು ಸಂಪರ್ಕಿಸಬಹುದಾಗಿದೆ. ಅರ್ಜಿಯೊಂದಿಗೆ ತಮ್ಮ ಇತ್ತೀಚಿನ ಭಾವಚಿತ್ರ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ರಂಗಭೂಮಿ ಅನುಭವದ ವಿವರ, ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಬೇಕೆಂದು ರಂಗಾಯಣ ಆಡಳಿತಾಧಿಕಾರಿ ಡಾ.ಶೈಲಜಾ ಎ ಸಿ ತಿಳಿಸಿದ್ದಾರೆ.
Walk-in admission for remaining seats at Shimoga Institute of Medical Sciences













Follow Me