ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬೇಕು, ಉನ್ನತ ಶ್ರೇಣಿಯನ್ನು ಪಡೆದುಕೊಂಡು ಸರ್ಕಾರಿ ಹುದ್ದೆಯನ್ನು ಗಿಟ್ಟಿಸಿಕೊಳ್ಳಬೇಕು ಎನ್ನುವುದು ಹಲವರ ಆಸೆಯಾಗಿದೆ ಈ ನಿಟ್ಟಿನಲ್ಲಿ ನಿಮ್ಮ ಕನ್ನಡನಾಡು ವೆಬ್‌ಸೈಟ್ ಪ್ರತಿ ದಿನ ಐದು ಪ್ರಶ್ನೆಗಳನ್ನು ನಿಮ್ಮ ಮುಂದೆ ಹೊತ್ತು ತರುತ್ತಿದ್ದು, ಕೆಳಗೆ ಕಾಣಿಸಿರುವ ಕಾಮೆಂಟ್ ಬಾಕ್ಸ್‌ನಲ್ಲಿ ನೀವು ಕಾಮೆಂಟ್ ಮಾಡಿ ಉತ್ತರವನ್ನು ತಿಳಿಸಬಹುದಾಗಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಕೂಡ ನಮ್ಮವೆಬ್‌ಸೈಟ್ ಲಿಂಕ್ ಅನ್ನು ಹಂಚಿಕೊಳ್ಳಿ ಅವರಿಗೂ ಕೂಡ ಸಹಾಯವಾಗಬಹುದು. ಇನ್ಯಾಕೆ ತಡ ಸರಿಯಾದ ಉತ್ತರವನ್ನು ಕಾಮೆಂಟ್ ಮೂಲಕ ತಿಳಿಸಿದೆ. ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗೆ ನಮ್ಮ ಸಣ್ಣ ಸಹಾಯವಿರಲಿ.
ಸೂಚನೆ : ಕೆಳಗಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 1-6) ಗೆರೆ ಎಳೆದ ಭಾಗದಲ್ಲಿ ಕೊಡಲಾದ ರೂಪಕ್ಕೆ ಪರ್ಯಾಯವಾಗಿ ನಾಲ್ಕು ಕನ್ನಡ ರೂಪಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದುದನ್ನು ಗುರುತಿಸಿ. ಉದಾಹರಣೆ ಹೆದ್ದಾರಿಯಲ್ಲಿ ಬನ್ನೊಂದು ಆಕ್ಸಿಡೆಂಟಿಗೊಳಗಾಯಿತು.
(1) ವಿಪತ್ತು
(2) ಅಪಘಾತ
(3) ಪ್ರಮಾದ
(4) ಅಕಸ್ಮಾತ್
ಇಲ್ಲಿ ‘ಅಪಘಾತ’ ಎಂಬುದು ಸೂಕ್ತ ರೂಪ
ವಾದುದರಿಂದ (2)ಅನ್ನು ಗುರುತಿಸಬೇಕು.

1. ಅವನಿಗೆ ಆಟದ ಪಂದ್ಯದಲ್ಲಿ ಹಲವು ಮೆಡಲ್ ಗಳು ಬಂದಿವೆ.
(1) ಬಹುಮಾನ
(2) ಪಾರಿತೋಷಕ
(3) ಪದಕ
(4) ಪ್ರಶಸ್ತಿ ಫಲಕ
2. ವಿಶ್ವವಿದ್ಯಾಲಯದ ವ್ಯವಹಾರಕ್ಕೆ ರಿಜಿಸ್ಟ್ರಾರ್‌ಗೆ ಬರೆದುಕೊಳ್ಳಬೇಕು.
(1) ಕುಲ ಸಚಿವ
(2) ಕುಲಪತಿ
(3) ನೋಂದಣಿ ಅಧಿಕಾರಿ
(4) ಕುಲಾಧಿಪತಿ
3. ರೈಲು ಪಯಣಕ್ಕೆ ರಿಜರ್ವೇಷನ್ ಮಾಡುವುದು ಒಳ್ಳೆಯದು.
(1) ಪ್ರಯಾಣ ಚೀಟಿ
(2) ಆಲೋಚನೆ
(3) ವಿಚಾರಿಸುವುದು
(4) ಕಾದಿರಿಸುವಿಕೆ
4.ವಿಮಾನವನ್ನು ಪೈಲಟ್ ನಡೆಸುತ್ತಾನೆ.
(1) ಮುಂಚೂಣಿ ಅಧಿಕಾರಿ
(2) ವಿಮಾನ ಚಾಲಕ
(3) ವಿಮಾನ ಸೂಚಕ
(4) ವಿಮಾನ ನಿರ್ವಾಹಕ
5. ಮುಖ್ಯಸ್ಥರು ಈಗ ಮೀಟಿಂಗ್‌ನಲ್ಲಿದ್ದಾರೆ.
(1) ಕಾರ್ಯ
(2) ‘ಸಭೆ
(3) ಮಾತುಕತೆ
(4) ಭೇಟಿ
6. ನಮ್ಮ ಮನೆಯಲ್ಲಿ ಫ್ರಿಡ್ಜ್ ಕೆಟ್ಟು ಹೋಗಿದೆ.
(1) ಆಹಾರ ಶೀತಲ ಯಂತ್ರ
(2) ತಂಗಳನ್ನದ ಪೆಟ್ಟಿಗೆ
(3) ಹವಾ ನಿಯಂತ್ರಕ ಯಂತ್ರ
(4) ವಾತಾನುಕೂಲ ಯಂತ್ರ













Follow Me