ಶಿವಮೊಗ್ಗ : ಸ್ವಾಮಿ ವಿವೇಕಾನಂದರು ಕೇವಲ ಒಬ್ಬ ವ್ಯಕ್ತಿಯಲ್ಲ. ಅವರು ಯುವಶಕ್ತಿ. ವೀರ ಸನ್ಯಾಸಿಯಾಗಿದ್ದು ಎಲ್ಲ ಯುವಜನತೆಗೆ ಮಾದರಿಯಾಗಿದ್ದಾರೆ ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ನುಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೋಮವಾರ ಕುವೆಂಪು ರಂಗಮAದಿರದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹ ಅಂಗವಾಗಿ ಏರ್ಪಡಿಸಲಾಗಿದ್ದ ಯುವಜನತೆಗೆ ಐಎಎಸ್ ಮತ್ತು ಐಪಿಎಸ್ ಕಾರ್ಯಾಗಾರ ಹಾಗೂ ಮಾದಕ ವ್ಯಸನದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವರು ಆಧ್ಯಾತ್ಮಿಕ ಗುರುಗಿಂತ ಹೆಚ್ಚಾಗಿ ವೀರ ಸನ್ಯಾಸಿಯಾಗಿದ್ದರು. ಅವರನ್ನು ನೆನೆದರೆ ಸಾಕು ನಮ್ಮ ಹಿಂದೂ ಸಂಸ್ಕೃತಿ, ಪರಂಪರೆ ಕಣ್ಣ ಮುಂದೆ ಬರುತ್ತದೆ. ಭಾರತ ದೇಶ ಮಾತ್ರವಲ್ಲ ಇದು ಪುಣ್ಯಭೂಮಿ, ಮಾತೃಭೂಮಿ ಎಂಬ ಅರಿವನ್ನು ನೀಡಿದವರು ಅವರು. ನಮ್ಮ ಮಣ್ಣು, ನೆಲ, ಜಲ, ದೇಶದ ಕುರಿತು ಅಪಾರ ಪ್ರೇಮ ಹೊಂದಿದ್ದ ಅವರು ಯುವಜನತೆಯಲ್ಲಿರುವ ಅಪಾರ ಶಕ್ತಿಯ ಕುರಿತು ಒತ್ತಿ ಹೇಳಿ ಅವರಿಗೆ ಪ್ರೇರಕ ಶಕ್ತಿಯಾಗಿದ್ದಾರೆ.
ಇದನ್ನು ಮಿಸ್ ಮಾಡದೇ ಓದಿ: ಹಸಿವು ಮುಕ್ತ ಕರ್ನಾಟಕ ನಮ್ಮ ಕನಸು : ಎಸ್.ಮಧು ಬಂಗಾರಪ್ಪ
ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮೂಲೆಯಲ್ಲಿ ಕೂರಿಸಲಾಗಿದ್ದ ವಿವೇಕಾನಂದರು ತಮ್ಮ ಭಾಷಣದ ಸರತಿ ಬಂದಾಗ ಅವರು, ಅಮೇರಿಕಾ ದೇಶದ ಸಹೋದರಿ, ಸಹೋದರಿಯರೇ ಎಂದು ಮಾತನಾಡಲು ಆರಂಭಿಸಿದAತೆಯೇ ಎಲ್ಲರ ಗಮನ ಅವರ ಭಾಷಣದ ಮೇಲೆ ಹರಿಯುತ್ತದೆ, ಅವರು ತಮ್ಮ ಮಾತಿನ ಮೂಲಕ ನಮ್ಮ ದೇಶದ ಸಂಸ್ಕೃತಿಯ ಅನಾವರಣ ಮಾಡುತ್ತಾರೆ.
ಸ್ವಾಮಿ ವಿವೇಕಾನಂದರು ತಮ್ಮ ಜೀವನವನ್ನೇ ದೇಶಕ್ಕಾಗಿ ಸಮರ್ಪಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಅವರೊಂದು ವಿಶ್ವವಿದ್ಯಾಲಯವಾಗಿದ್ದರು. ದೇಶಭಕ್ತಿ, ಪ್ರಾಮಾಣಿಕತೆ ಮತ್ತು ನಂಬಿಕೆಯ ಪ್ರತೀಕ ಅವರು. ನಂಬಿಕೆ ಎಷ್ಟು ಮುಖ್ಯ ಎಂಬುದು ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದ ಗುರು ಶಿಷ್ಯರ ಮಾತಿನಲ್ಲಿ ಕಾಣುತ್ತದೆ. ಯುವಕರು ತಮ್ಮ ಎಷ್ಟೋ ಪ್ರಶ್ನೆಗಳಿಗೆ ವಿವೇಕಾನಂದರ ಮೂಲಕ ಉತ್ತರ ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ಎಲ್ಲ ಯುವಜನತೆ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಓದಬೇಕು.

ದೇಶದಲ್ಲಿ ಬಡತನ ನಾಶವಾಗಬೇಕು, ನಾವು ಕೊಡುವಂತಹ ದೇಶವಾಗಬೇಕೆಂದು ಹೇಳುತ್ತಿದ್ದರು. ದೇಶದ ಅಭಿವೃದ್ದಿಯಲ್ಲಿ ಯುವಜನತೆಯ ಪಾತ್ರ ಮಹತ್ತರವಾಗಿದೆ ಎಂದು ತಿಳಿಸಿದ್ದ ಅವರ ಚಿಂತನೆಗಳು, ಜೀವನ ಮೌಲ್ಯ ಯುವಕರಿಗೆ ಪ್ರೇರಣೆಯಾಗಿದ್ದು, ನಾವು ಯುವಜನತೆಗೆ ಹೆಚ್ಚಿನ ಶಕ್ತಿಯನ್ನು ತುಂಬಬೇಕಿದೆ ಎಂದರು.
ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು ಮಾತನಾಡಿ, ಸ್ವಾಮಿ ವಿವೇಕಾನಂದರವರು ಈ ದೇಶದ ಮಹಾನ್ ಯುವಕ, ಸಂತ. ಅಮೇರಿಕಾ ದೇಶದ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಇವರಿಗೆ ಸಮರ್ಪಕ ಗೌರವ ದೊರಕದಿದ್ದರೂ, ತಮ್ಮ ಭಾಷಣದಲ್ಲಿ ದೃಢವಾಗಿ ಹಿಂದೂ ಧರ್ಮ, ಸಂಸ್ಕೃತಿಯ ಬಗ್ಗೆ ಸ್ಪಷ್ಟವಾಗಿ ತಿಳಿಸಿದರು. ಇಷ್ಟು ಚಿಕ್ಕ ವಯಸ್ಸಿನ ವ್ಯಕ್ತಿಯ ಆ ಭಾಷಣ ಕೇಳಿ ಎಲ್ಲರೂ ಅಚ್ಚರಿಗೊಳ್ಳುತ್ತಾರೆ. ಅಂತಹ ವ್ಯಕ್ತಿತ್ವವನ್ನು ಅವರು ಹೊಂದಿದ್ದರು.

ಸಮಾಜದಲ್ಲಿ ಯುವಕರ ಪಾತ್ರ ದೊಡ್ಡದಿದೆ ಎಂದು ವಿವೇಕಾನಂದರು ತಿಳಿಸಿದ್ದು, ನಮ್ಮ ನಮ್ಮ ಮನೆಯಿಂದಲೇ ಸಮಾಜ ಶುರುವಾಗುತ್ತದೆ. ಅಲ್ಲಿಂದಲೇ ನಮ್ಮ ವ್ಯಕ್ತಿತ್ವ ಉತ್ತಮವಾಗಿ ವಿಕಸನ ಆಗುತ್ತಾ ಹೋಗಬೇಕು. ಯುವಜನತೆ ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಂಡರೆ ಅದೇ ದೇಶಕ್ಕೆ ದೊಡ್ಡ ಕೊಡುಗೆ. ಇಂದಿನ ಯುವಜನತೆಗೆ ಎಲ್ಲ ರೀತಿಯ ಸೌಲಭ್ಯಗಳು ಸಿಗುತ್ತಿದ್ದು ಒಳ್ಳೆಯ ಶಿಕ್ಷಣ ಪಡೆದುಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದ ಅವರು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಯುವಕರೆಲ್ಲ ಓದಿ ತಿಳಿದುಕೊಂಡು ಅವರ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗೂ ಯಾವುದೇ ರೀತಿಯ ಮಾದಕ ವಸ್ತುಗಳಿಂದ ದೂರ ಇರಲು ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಯುವಜನತೆ ಸೇರಿದಂತೆ ನಮಗೆಲ್ಲರಿಗೂ ಯಾವುದೇ ಕ್ಷೇತ್ರವಿರಲಿ, ಏನೇ ಕೆಲಸ ಮಾಡುತ್ತಿರಲಿ ಜೀವನೋತ್ಸಾಹ ಬಹಳ ಮುಖ್ಯವಾಗಿ ಬೇಕು. ಯಾವುದೇ ಕೆಲಸದಲ್ಲಿ ಮನಸಾರೆ ತೊಡಗಿಕೊಂಡಲ್ಲಿ ಯಶಸ್ಸು ಹೆಚ್ಚಿರುತ್ತದೆ.
ನಾವು ನಮ್ಮ ಆಲಸ್ಯದ ಬಡತನದಿಂದ ಹೊರಬರಬೇಕು. ಸ್ವಾಮಿ ವಿವೇಕಾನಂದರು ಹೇಳಿದಂತೆ ನಾವು ಉತ್ತಮ ವ್ಯಕ್ತಿತ್ವದ, ಉದಾತ್ತ ಚಿಂತನೆಗಳ, ಮೌಲ್ಯಗಳ ಶ್ರೀಮಂತಿಕೆ ಹೊಂದಬೇಕು. ಇದರ ಮುಖೇನ ನಮ್ಮ ಕುಟುಂಬ ಮತ್ತು ಸಮಾಜಕ್ಕೆ ಉತ್ತಮವಾದ ಕೊಡುಗೆಗಳನ್ನು ಸಾಧ್ಯ.ಯುವಜನತೆ ಸದಾ ಕಲಿಕೆಯಲ್ಲಿ ಉತ್ಸುಕರಾಗಿರಬೇಕು. ಯಾವುದು ಸರಿ ಮತ್ತು ತಪ್ಪು ಎಂದು ನಿರ್ಧರಿಸುವ ಅನಲಿಟಿಕಲ್ ಬುದ್ದಿ ಇರುವ ಕಾಲಘಟ್ಟ ಇದಾಗಿದ್ದು ಈ ವಯಸ್ಸಿನಲ್ಲಿ ಧೈರ್ಯ ಸಹ ಹೆಚ್ಚಿರುವ ಕಾರಣ ತಾವು ತಮ್ಮ ನೆಚ್ಚಿನ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ಈ ವಯಸ್ಸಿನಲ್ಲಿ ಕುತೂಹಲಕ್ಕೀಡಾಗಿ ದುಶ್ಚಟಗಳಿಗೂ ಈಡಾಗಬಹುದು, ಉತ್ತಮವಾದ ಮಾರ್ಗವನ್ನೂ ಅನುಸರಿಸಬಹುದು. ಆದ್ದರಿಂದ ಯುವಜನತೆ ಉತ್ತಮ ಮಾರ್ಗ ಹಿಡಿದು ಮಾನಸಿಕವಾಗಿ ಮುತ್ತು ದೈಹಿಕವಾಗಿ ಯಾವುದೇ ದುಶ್ಚಗಳಿಂದ ದೂರ ಇರಬೇಕು. ಹಾಗೂ ವ್ಯಕ್ತಿಕ್ತ ವಿಕಸನ ಎಲ್ಲರಿಗೂ ಅತ್ಯಗತ್ಯವಾಗಿದ್ದು ಯುವಜನತೆ ಸೂಕ್ತ ಮಾರ್ಗದರ್ಶನ ಆಯ್ಕೆ ಮಾಡಿಕೊಂಡು ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಬೇಕೆಂದು ಕರೆ ನೀಡಿದರು.

ಐಎಎಸ್ ಪ್ರೊಬೇಷನರಿ ಅಧಿಕಾರಿ ನಾಗೇಂದ್ರ ಕುಮಾರ್ ಬಾಬು, ಪಿಪಿಟಿ ಪ್ರದರ್ಶನ ಮೂಲಕ ಐಎಎಸ್ ಪರೀಕ್ಷೆಗೆ ತಯಾರಿ, ಪರೀಕ್ಷೆ, ಸಂದರ್ಶನ ಮತ್ತು ಆಯ್ಕೆ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳಿಗೆ ಸವಿವರವಾದ ಮಾಹಿತಿ ನೀಡಿದರು.
ಐಪಿಎಸ್ ಪ್ರೊಬೇಷನರಿ ಅಧಿಕಾರಿ ಮೇಘಾ ಅಗರ್ವಾಲ್, ಐಪಿಎಸ್ ಪರೀಕ್ಷೆಗೆ ತಯಾರಿ, ಪರೀಕ್ಷೆ, ಸಂದರ್ಶನ, ಆಯ್ಕೆ ಪ್ರಕ್ರಿಯೆ ಕುರುತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸೈಬರ್ ಕ್ರೈಮ್ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ಮಾದಕ ವಸ್ತುಗಳ ದುಷ್ಪರಿಣಾಮಗಳು, ಎನ್‌ಡಿಪಿಎಸ್ ಕಾಯ್ದೆ, ಮಾದಕ ವಸ್ತುಗಳಿಂದ ದೂರು ಇರುವ ಬಗೆ ಕುರಿತು ವಿದ್ಯಾರ್ಥಿಗಳಿಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.ಯುವ ಸಪ್ತಾಹದ ಅಂಗವಾಗಿ ತಾಲ್ಲೂಕು ಮಟ್ಟದಲ್ಲಿ ಏರ್ಪಡಿಸಲಾಗಿದ್ದ ಕ್ರೀಡೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ,ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶೋಭಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಇತರೆ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
Swami Vivekananda is a young power-heroic monk S. N. Channabasappa













Follow Me