ಬೆಂಗಳೂರು: ಡಿಸೆಂಬರ್ 31-12-25 ಮಧ್ಯಾಹ್ನದಿಂದ 01- 01- 26 ಮಧ್ಯಾಹ್ನದವರೆಗೂ ನಂದಿ ಬೆಟ್ಟಕ್ಕೆ ಪ್ರವೇಶವನ್ನು ಬಂದ್ ಮಾಡಲಾಗಿದೆ.
ಹೌದು. ಹೊಸ ವರ್ಷದ ಸಂಭ್ರಮದಿಂದ ಅನಾಹುತ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ, ಹೊಸ ವರ್ಷಕ್ಕೆ ನಂದಿ ಬೆಟ್ಟಕ್ಕೆ ಪ್ರವೇಶವನ್ನು ನೀಡುವುದಿಲ್ಲ. ಈ ಬಗ್ಗೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನು ಮಿಸ್ ಮಾಡದೇ ಓದಿ: ಕರ್ನಾಟಕ ಆರೋಗ್ಯ ಇಲಾಖೆ ಯಿಂದ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು
ಚೆಕ್ ಬೌನ್ಸ್ ಪ್ರಕರಣ : ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ FIR

ಬೆಂಗಳೂರಿನಿಂದ 60 ಕಿ.ಮೀ. ಉತ್ತರಕ್ಕೆ ನಂದಿಬೆಟ್ಟ ಇದೇ. ಈ ಹಿಂದೆ ಇದನ್ನು ನಂದಿದುರ್ಗ ಎಂದು ಕೂಡು ಕರೆಯುತ್ತಿದ್ದರು. ಇದಲ್ಲದೇ ಇಲ್ಲಿ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಇದ್ದು, ಅವನ ತಂದೆ ಹೈದರ್ ಅಲಿ ಇಲ್ಲಿ ಅವಳಿ ಕೋಟೆಗಳು ನಿರ್ಮಿಸಿದ್ದಾನೆ. ಇದಲ್ಲದೇ ಇಲ್ಲಿ ಬ್ರಿಟಿಷ್ ಅಧಿಕಾರಿಗಳು ಇಲ್ಲಿ ವಿಶಾಲವಾದ ಬಂಗಲೆಗಳು, ಉದ್ಯಾನವನಗಳನ್ನು ಕಾಣಬಹುದಾಗಿದೆ.
Entry to Nandi hill is closed from 31-12-25 noon to 01-01-26 noon.













Follow Me