ಕೊರಗಜ್ಜ ಒಬ್ಬ ಐತಿಹಾಸಿಕ ವ್ಯಕ್ತಿ. ‘ಕೊರಗ’ ಎಂಬುದು ಒಂದು ಸಮುದಾಯದ ಹೆಸರು. ಅಜ್ಜ ಎಂದರೆ ಹಿರಿಯ ಎಂಬ ಅರ್ಥ ಇದ್ದರೂ, ಜ್ಞಾನ ವೃದ್ಧ ಬಾಲಕನನ್ನು ಪ್ರೀತಿಯಿಂದ ‘ಅಜ್ಜ’ ಎಂದು ಕರೆದರು. ಮಂಗಳೂರಿನ ‘ಕುತ್ತಾರು’ ಎಂಬುದು ಕೊರಗಜ್ಜನ ಆದಿಸ್ಥಳ. ಕೊರಗಜ್ಜನ ಭಕ್ತರು ಭಕ್ತಿ ಮತ್ತು ಪ್ರೀತಿಯಿಂದ ಅಜ್ಜನಿಗೆ ಎಲೆ- ಅಡಿಕೆ- ಚಕ್ಕುಲಿ, ಹೆಂಡ- ಎಳನೀರನ್ನು ಅರ್ಪಿಸುತ್ತಾರೆ. ಕಳ್ಳತನವಾದವರು ಸಿಕ್ಕಿದ ಉದಾಹರಣೆ ಇವೆ. ಕರಾವಳಿ ಭಾಗದ, ತುಳುನಾಡಿನಲ್ಲಿ ಧೈವಾರಾಧನೆ – ನಾಗಾರಾಧನೆ ವಿಶೇಷವಾಗಿ ಆಚರಿಸುತ್ತಾರೆ. ತುಳುನಾಡಿಗರ ನಂಬಿಕೆ ದೈವ ಅಂದರೆ ಕಾರಣಿಕ ದೈವ- ಪವಾಡ ಪುರುಷ “ಕೊರಗಜ್ಜ” ನಂಬಿದ ಭಕ್ತರು ಶುದ್ಧ ಮನಸ್ಸಿನಿಂದ ಹರಕೆಗಳನ್ನು ಹೇಳಿಕೊಂಡರೆ ಬೇಗನೆ ಈಡೇರಿಸುವ, ಪವಾಡಗಳ ದೈವ ಎಂದೇ ಪ್ರಸಿದ್ಧನಾದ ಕೊರಗಜ್ಜನ ದೇವಾಲಯಗಳು ಎಲ್ಲಾ ಕಡೆ ಇದ್ದು ಆರಾಧನೆ ಮತ್ತು ಪವಾಡಗಳು ಹೆಚ್ಚು ಪ್ರಚ ಲಿತದಲ್ಲಿದೆ. ಕೊರಗಜ್ಜನನ್ನು ನಂಬಿ ಬದುಕುವ ಸಾವಿರಾರು ಭಕ್ತರು ಇಲ್ಲಿದ್ದಾರೆ. ಇದಕ್ಕೆ ಉದಾಹರಣೆಗಳಿವೆ ಹಸು- ಕರು- ಎಮ್ಮೆ- ಕುರಿ- ಕೋಳಿ- ಹೊಲ- ಗದ್ದೆ, ತೋಟ- ತುಡಿಕೆ, ಕೊಟ್ಟಿಗೆ, ಆರೋಗ್ಯ, ಉದ್ಯೋಗ, ವಿವಾಹ, ಸಂತಾನ, ಕಲಹ, ಹಣಕಾಸಿನ ತೊಂದರೆ, ಕಳ್ಳತನ ಎಂಥದೇ ಸಮಸ್ಯೆ ಇರಲಿ, ಪೊಲೀಸ್ ಠಾಣೆ ಹೋಗದೆ, ಕೊರಗಜ್ಜ ದೈವವನ್ನು ದೃಢವಾಗಿ ಪ್ರಾರ್ಥಿಸುತ್ತಾರೆ. (ಕಳೆದ ವಸ್ತು ಸಿಕ್ಕೆ ಸಿಗುತ್ತದೆ) ಕೊರಗಜ್ಜ ದೈವ ನಂಬಿದವರ ಕೈ ಬಿಡುವುದಿಲ್ಲ ಎಂಬ ಮಾತು ಜನರಿಂದ ಬರುತ್ತದೆ. ತುಳುನಾಡಿಗರಿಗೆ ಕೊರಗಜ್ಜ ತಮ್ಮನ್ನು ಕೈ ಬಿಡಲ್ಲ ಕಾಪಾಡುತ್ತಾನೆ ಎಂಬ ನಂಬಿಕೆ. ಅಜ್ಜನ ಕುರಿತು ಆಡು ಮಾತು ಹಾಗೂ ಲಾವಣಿ, ಜನಪದ ಗೀತೆಗಳು ಎಲ್ಲಾ ಕಡೆ ಹರಿದಾಡುತ್ತಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಕರಾವಳಿ ಭಾಗದಲ್ಲಿ ದೈವಸ್ಥಾನ ಸಾಕಷ್ಟು ಇವೆ. ಕೊರಗಜ್ಜನ ಹುಟ್ಟಿನ ಕುರಿತು ನಿರ್ದಿಷ್ಟ ಮಾಹಿತಿಗಳು ಇಲ್ಲ. ಬಾಯಿಂದ ಬಾಯಿಗೆ ಹರಿದ ಸುದ್ದಿಯಂತೆ ಕೊರಗ ಸಮುದಾಯದ “ತಂದೆ ಉರವನವಾಡಿ ಮತ್ತು ತಾಯಿ ಕೊರಪಲಮೈದೆಯ ಮಗನಾಗಿ ಹುಟ್ಟಿದ. ( ಹೆಸರುಗಳ ಉಚ್ಚಾರಣೆ ವ್ಯತ್ಯಾಸವಿದೆ) ಮಗು ಹುಟ್ಟಿದ ಮೇಲೆ ಕೊರಗ ಗುಂಪಿನವರು ಸೇರಿ “ಕೊರಗ ತನಿಯ” ಎಂದು ಕರೆದರು. ತನಿಯ ಎಂದರೆ “ಮಗ”ನೇ. ಮಗು, ಹಸುಗೂಸು ಇರುವಾಗಲೇ ತಾಯಿಯನ್ನು ಕಳೆದು ಕೊಂಡ, ಅನ್ನ ತಿನ್ನಲು ಶುರು ಮಾಡಿದಾಗ ತಂದೆಯನ್ನು ಕಳೆದುಕೊಂಡ, ಇವರು ವಾಸಿಸುವ ಸ್ಥಳಕ್ಕೆ ‘ಕೊಪ್ಪ’ ಎನ್ನುತ್ತಾರೆ. ಕೊರಗರು ನೀರಿನ ಸೆಲೆ ಇರುವ ಅರಣ್ಯದ ನಡುವೆ ವಾಸಿಸುತ್ತಾರೆ. ಇದನ್ನು ಮೇಲಿನ ಏಳು ಕೊಪ್ಪ- ಕೆಳಗಿನ ಏಳು ಕೊಪ್ಪ. ಎನ್ನುತ್ತಾರೆ. ಒಂದು ಅವಘಡದಲ್ಲಿ ಈ ಕೊಪ್ಪಗಳು ಹೇಳ ಹೆಸರಿಲ್ಲದಂತೆ ನಾಶವಾಗುತ್ತದೆ.

ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಿದ್ದ ಬಾಲಕ “ಕೊರಗ” ದಟ್ಟ ಕಾಡಿಗೆ ಹೋಗಿ ಯಾರಾದರೂ ತನಗೆ ಆಶ್ರಯ ನೀಡುವರೆ ಎಂದು ಪೊದೆಯ ಮರೆಯಲ್ಲಿ ಅಡಗಿ ಕುಳಿತಿದ್ದ. ಪಕ್ಕದ ಗ್ರಾಮದಿಂದ ಹೆಂಡದ ವ್ಯಾಪಾರಿ ಮೈರಕ್ಕಿ ಎಂಬ ಮಹಿಳೆ ಹೆಂಡ ತಯಾರಿಸಿ ತನ್ನ ಎರಡು ಮಕ್ಕಳೊಂದಿಗೆ ಮಾರಲು ಬರುತ್ತಿದ್ದಾಗ, ಪೊದೆಗಳ ಮರೆ ಯಲ್ಲಿ ಮಗು ಅಳುವುದು- ನಗುವುದು ಕೇಳಿಸಿತು. ಹತ್ತಿರ ಹೋಗಿ ವಿಚಾರಿಸಿದಾಗ, ತನಗೆ ಯಾರು ಇಲ್ಲ ಎಂದ ಬಾಲಕ . ಮೈರಕ್ಕಿ ಹೇಳಿದಳು ನಿನ್ನನ್ನು ನಾನು ಸಾಕುತ್ತೇನೆ ಬರುವೆಯಾ? ಎಂದಳು. ಪೊದರಿನೊಳಗಿಂದ ಬಾಲಕ ಹೇಳಿದ ನಾನು ಹೊರಗೆ ಬರಲು ಸಾಧ್ಯವಿಲ್ಲ ಏಕೆಂದರೆ ನನ್ನ ಮೈ ಮೇಲೆ ಬಟ್ಟೆ ಇಲ್ಲ ಬರಿ ಮೈ ಎಂದನು. ಆಗ ಮೈರಕ್ಕ ಮಣ್ಣಿನ ಕೊಡ ಹೋರುವ ತಲೆಯಲ್ಲಿದ್ದ ಸಿಂಬಿಯನ್ನು ಬಿಚ್ಚಿ ಅವನ ಕಡೆ ಹಾಕಿದಳು. ಬಾಲಕ ಅದನ್ನು ಬಿಚ್ಚಿ ಮೈ ಮೇಲೆ ಸುತ್ತಿಕೊಂಡು ಹೊರಗೆ ಬಂದ. ಬಟ್ಟೆ ಸಿಕ್ಕ ಸಂತೋಷದಲ್ಲಿ “ಕೊರಗನಿಗೊಂದು ಬಟ್ಟೆ ಯಾಯ್ತು” ಎಂದ (ಬಟ್ಟೆ ಎಂದರೆ “ದಾರಿ”). ಮೈರಕ್ಕ ಹೇಳಿದಳು ತನಿಯಾ( ಮಗನೇ) ಎಂದು ಇಂದಿನಿಂದ ನಿನಗೆ ಊಟ- ಬಟ್ಟೆ ಕೊಟ್ಟು ನಾನೇ ಸಾಕುವೆ ಎಂದಳು. ಬಾಲಕ ಹೇಳಿದ ನನಗೆ ಹಾಗೆಯೇ ಊಟ ಕೊಡುವುದು ಬೇಡ ನಾನು ಕೆಲಸ ಮಾಡಿ ತಿನ್ನುತ್ತೇನೆ ಎಂದನು. ಅವಳು ಹೆಂಡ ಮಾಡುವ ತನ್ನ ಕಾಯಕದಲ್ಲಿ ಅವನನ್ನು ಸೇರಿಸಿ ಕೊಂಡಳು. ಬಾಲಕ ಏನೇ ಮುಟ್ಟಿದರು ಅದು ಅಕ್ಷಯ ವಾಗುತ್ತಿತ್ತು. ಆದರೆ ಇಲ್ಲಿ ತಂಕ ಮೈರಕ್ಕಿ ಮನೆಯಲ್ಲಿ ಕೆಲಸ ಮಾಡಿಕೊಡುತ್ತಿದ್ದ ಆಳುಗಳು, ತನಿಯ ಬಂದ ಮೇಲೆ ಅವನು ಕೀಳು ಜಾತಿಯವನು ಎಂದು ಮನೆ ಬಿಟ್ಟು ಹೋದರು. ಮೈರಕ್ಕಿಗೆ ಏನು ಮಾಡಬೇಕು ತಿಳಿಯಲಿಲ್ಲ. ಒಬ್ಬ ಅನಾಥ ಬಾಲಕನಿಗೆ ಆಸರೆ ಕೊಟ್ಟಿದ್ದು ತಪ್ಪೇ ಎಂದು ಅಳಲು ಶುರು ಮಾಡಿದಳು. ಆಗ ತನಿಯ ಹೇಳಿದ ನೀವು ಚಿಂತೆ ಮಾಡಬೇಡಿ ಅಮ್ಮ, ಅವರೆಲ್ಲ ಮಾಡುವ ಕೆಲಸವ ನ್ನು ನಾನು ಮಾಡಿ ಕೊಡುವೆ ಎಂದನು. ತನಿಯ ಹೇಳಿದಂತೆ ಎಲ್ಲಾ ಆಳು ಮಾಡು ವ ಕೆಲಸ ಅವನೊಬ್ಬನೇ ಮಾಡುತ್ತಿದ್ದನು. ಮೈರಕ್ಕಿ ಹೆಂಡ ತಯಾರಿಸುವಾಗ ಸ್ವಲ್ಪ ಸ್ವಲ್ಪವೇ ತನಿಯಗೂ ಕುಡಿಯಲು ಕೊಡುತ್ತಿದ್ದಳು ಈ ಕಾರಣದಿಂದ “ಕೊರಗಜ್ಜ” ದೈವ ಸ್ವಾಮಿಗೆ ಹೆಂಡವನ್ನು ಅರ್ಪಿಸುವ ಸಂಪ್ರದಾಯ ಬೆಳೆದು ಬಂದಿದೆ.

ಇಲ್ಲಿ ಪ್ರತಿ ವರ್ಷ ಕದ್ರಿ ಮಂಜುನಾಥ ಸ್ವಾಮಿ ಜಾತ್ರೆ ನಡೆಯುತ್ತಿತ್ತು. ಈ ಜಾತ್ರೆಗೆ ಗ್ರಾಮಸ್ಥರು ಹೊರೆ ಕಾಣಿಕೆ ರೂಪದಲ್ಲಿ ಬೆಳೆ ಅಥವಾ ಹಣವನ್ನು ಕೊಡಬೇಕಿತ್ತು. ಅದನ್ನು ಹೊರೆ ಕಾಣಿಕೆ ಎನ್ನುತ್ತಾರೆ. ಅಂದರೆ ಬಲವಾದ ಏಳು ಜನರು ಹೋರು ವಷ್ಟು ಬಾಳೆ ಎಲೆ- ವಿಳ್ಳೇದೆಲೆ- ಅಡಿಕೆ- ತೆಂಗಿನ ಕಾಯಿ- ಬಾಳೆಹಣ್ಣು-, ಭತ್ತ- ಅಕ್ಕಿ- ಬೆಲ್ಲ, ಹೀಗೆ ಏನಾದರೂ, ದೇವಸ್ಥಾನಕ್ಕೆ ಕೊಡಬೇಕು. ಮತ್ತು ಆ ಏಳು ಜನರಿಗೆ ಮಾರ್ಗ ಮಧ್ಯೆ ತಿನ್ನುವಷ್ಟು ಆಹಾರ ಕೊಡಬೇಕು. ಹೊರೆ ಕಾಣಿಕೆ ಕಳಿಸಿ ಕೊಡಲು ಏಳು ಜನ ಆಳು ಬೇಕು. ಇದು ದೇವಸ್ಥಾನದವರು ಗ್ರಾಮಸ್ಥರು ಮಾಡಿಕೊಂಡ ಒಪ್ಪಂದ. ಆದರೆ ಮೈರಕ್ಕಿ ಮನೆಯಲ್ಲಿದ್ದ ಆಳುಗಳು ಬಿಟ್ಟು ಹೋಗಿದ್ದಾರೆ. ಹೊರೆ ಕಾಣಿಕೆ ಹೇಗೆ ಕಳಿಸುವುದು ಎಂದು ಯೋಚಿಸಿದಳು. ತನಿಯ ಹೇಳಿದ ನೀವು ಯೋಚಿಸಬೇಡಿ ನಾನು ಏಳು ಜನರು ಹೊರುವ ಹೊರೆ ಕಾಣಿಕೆಯನ್ನು ಕದ್ರಿ ಮಂಜುನಾಥನ ದೇವಸ್ಥಾನಕ್ಕೆ ನಾನೊಬ್ಬನೇ ಹೊತ್ತುಕೊಂಡು ಹೋಗಿ ಕೊಟ್ಟು ಬರುತ್ತೇನೆ ಏಳು ಜನರಿಗೆ ಕೊಡುವಷ್ಟು ಆಹಾರ- ತಿಂಡಿ- ತಿನಿಸು, ಎಲೆ- ಅಡಿಕೆ ಎಲ್ಲಾ ನನಗೆ ಕೊಡಿ ಎಂದು ಕೇಳಿದನು.

ಮೈರಕ್ಕಿ ಹೇಳಿದಳು. ನೀನಿನ್ನು ಬಾಲಕ ಒಬ್ಬರು ಹೋರುವಷ್ಟು ಮಾತ್ರ ಹೊರಲು ಸಾಧ್ಯ. ಏಳು ಜನ ಹೋರುವಷ್ಟು ಒಬ್ಬನಿಂದ ಆಗುವುದಿಲ್ಲ ಎಂದರೆ ನಾನು ತೆಗೆದುಕೊಂಡು ಹೋಗುತ್ತೇನೆ ಎಂದು. ತನಿಯನ ದೃಢ ಸಂಕಲ್ಪ ಅವಳಿಗೆ ಗೊತ್ತಿತ್ತು ಆಕೆ ಒಪ್ಪಿದಳು. ಅವನು ಹೇಳಿದಂತೆ ಏಳು ಜನಕ್ಕೆ ಕೊಡುವಷ್ಟು ಊಟ -ತಿಂಡಿ- ಎಲೆ ಅಡಿಕೆ- ಹೆಂಡ ಎಲ್ಲಾ ಅವನು ಹೇಳಿದಂತೆ ಮಾಡಿ ಬಡಿಸಿದಳು. ಏಳು ಜನರದ್ದು ಅವನೊಬ್ಬನೇ ಒಬ್ಬನೇ ತಿಂದನು. ನಂತರ ಮೈರಕ್ಕಿ ಏಳು ಜನ ಹೊರುವ ಹೊರೆಯನ್ನು ಒಂದೇ ಕಟ್ಟುಕಟ್ಟಿ ಅವನ ತಲೆಯ ಮೇಲೆ ಹೋರಿಸಿದಳು. ಆದರೆ ಅವಳಿಗೆ ಮನಸ್ಸು ತಡೆಯಲಾಗಲಿಲ್ಲ. ಅವಳು ತನಿಯಗೆ ಬೇಡ ಮಗು ನೀನೊ ಬ್ಬನೇ ಹೊತ್ತುಕೊಂಡು ಹೋಗುವುದು ಕಷ್ಟ. ಮಂಜುನಾಥಗೆ ನಾನು ತಪ್ಪು ಕಾಣಿಕೆ ಕಟ್ಟುತ್ತೇನೆ ಎಂದಳು. ನೀನು ಚಿಂತೆ ಮಾಡಬೇಡ ಅಮ್ಮ ಧೈರ್ಯವಾಗಿರು ಎಂದು ಹೊರಡಲು ಸಿದ್ದನಾದಾಗ, ದುಃಖದಿಂದ ಮೈರಕ್ಕಿ ಕೇಳಿದಳು, ತನಿಯ ನಿಜ ಹೇಳು ಯಾರಪ್ಪ ನೀನು ಕೇಳಿದಳು. ತನಿಯ ಹೇಳಿದ! ಅಮ್ಮ ನಾನು ಯಾರು ಎಂದು ಸದ್ಯದಲ್ಲೇ ಗೊತ್ತಾಗುತ್ತದೆ. ನನ್ನನ್ನು ಕಳಿಸಿದ ಮೇಲೆ ಬೆನ್ನು ಮಾತ್ರ ನೋಡುತ್ತೀರಿ ನನ್ನ ಮುಖ ನೋಡಲು ಮುಂದೆ ಆಗುವುದಿಲ್ಲ. ನಾನು ಹೊರಟ ಮೇಲೆ ಮತ್ತೆ ಬರುವುದು ಖಚಿತವಿಲ್ಲ. ಆದರೆ ಅಮ್ಮ ನೀವು ನನ್ನ ಒಮ್ಮೆ ಕೂಗಿದರೆ, ನೀವಿದ್ದಲ್ಲಿ ಗೆ ನಾನು ಓಡಿ ಬಂದು ನಿಮ್ಮ ಎಲ್ಲಾ ಕಷ್ಟಗಳನ್ನು ಪರಿಹರಿಸುವೆ ಎಂದನು. ನಾನು ಎಂದೆಂದಿಗೂ ನಿಮ್ಮ ಮನಸ್ಸಿನಲ್ಲಿ ಇರುತ್ತೇನೆ ಎಂದು ಹೊರಟನು.

ತನಿಯ ಸಾಮಗ್ರಿಗಳನ್ನು ತೆಗೆದುಕೊಂಡು ಕದ್ರಿ ಮಂಜುನಾಥನ ದೇವಸ್ಥಾನಕ್ಕೆ ಬಂದನು. ಆದರೆ ದೇವಾಲಯದ ಪ್ರಮುಖರು, ತನಿಯ ಕೆಳಜಾತಿಯ ಕೊರಗ. ದೇವಾಲಯದ ಪ್ರವೇಶ ಮಾಡುವಂತಿಲ್ಲ ತಂದಿರುವ ಹೊರೆ ಕಾಣಿಕೆಯನ್ನು ಇಲ್ಲೇ ಇಡು ಎಂದರು. ಕೋಪಗೊಂಡ ತನಿಯ, ಹೌದು ನಾನು ಕೆಳ ಜಾತಿಯವನು, ಹಾಗಾದರೆ ನಾವು ತಂದು ಕೊಡುವ ವಸ್ತುಗಳು ದೇವರಿಗೆ ಬೇಕು. ಆದರೆ ನಾವು ಬೇಡವಾ? ಇದು ಯಾವ ನ್ಯಾಯ, ಜಾತಿಭೇದ ನೀವು ಏಕೆ ಮಾಡುತ್ತೀರಿ ಎಂದು ಪ್ರಶ್ನಿಸಿದನು. ಮನುಷ್ಯರೆಲ್ಲ ದೇವರ ಸೃಷ್ಟಿ. ಆದರೆ ಬಾಲಕನ ಮಾತು ಯಾರು ಕೇಳಲಿಲ್ಲ ಎಲ್ಲರೂ ತಿರಸ್ಕಾರದಿಂದ ನೋಡಿದರು.ಕೋಪಗೊಂಡ ತನಿಯ ತನ್ನ ತಲೆಯ ಮೇಲಿದ್ದ ಹೊರೆ ಕಾಣಿಕೆ ಕಟ್ಟನ್ನು ಎತ್ತಿ ಮಂಜುನಾಥ ಸ್ವಾಮಿ ನೆಲೆಸಿದ ಗುಡಿ ಒಳಗೆ ಬೀಳುವಂತೆ ಎಸೆದನು. ಆ ಕಾಣಿಕೆ ಹೋಗಿ ದೇವರ ಪಾದದ ಕೆಳಗೆ ಬಿತ್ತು. ಅಲ್ಲಿದ್ದವರಿಗೆಲ್ಲ ಆಶ್ಚರ್ಯವಾಯಿತು. ಇಲ್ಲಿಂದ ಎಸೆದ ಅಷ್ಟು ದೊಡ್ಡ ಹೊರೆ ಕಾಣಿಕೆ ಮಂಜುನಾಥನ ಪಾದದ ಕೆಳಗೆ ಬಿತ್ತು ಎಂದು ಚಕಿತಗೊಂಡರು.

ಹೊರಡಲು ಹಿಂತಿರುಗಿದಾಗ ದೇವಸ್ಥಾನದ ಮೆಟ್ಟಿಲ ಮೇಲೆ ನಿಂತಿದ್ದ ಅವನಿಗೆ ನಿಂಬೆ ಹಣ್ಣಿನ ಗಿಡ ಕಾಣಿಸಿತು ಗಿಡದ ತುಂಬಾ ನಿಂಬೆಹಣ್ಣು ಬಿಟ್ಟಿತ್ತು. ಒಮ್ಮೆ ಮೈರಕ್ಕಿ ತಾಯಿ ಮಾವಿನ ಮಿಡಿ ಉಪ್ಪಿನಕಾಯಿ ಹಾಕಲು ನೋಡಿದಾಗ ಅದು ಮುಗಿದು ಹೋಗಿತ್ತು. ಉಪ್ಪಿನಕಾಯಿ ಮುಗಿದುಹೋಗಿದೆ ಎಂದುಕೊಂಡಿದ್ದು ಅವನಿಗೆ ನೆನಪಾಯಿತು. ನನ್ನ ಅಮ್ಮನಿಗೆ ನಿಂಬೆ ಉಪ್ಪಿನಕಾಯಿ ತುಂಬಾ ಇಷ್ಟ ನಿಂಬೆಹಣ್ಣು ತೆಗೆದುಕೊಂಡು ಹೋಗಿ ಕೊಡಬೇಕು ಎಂದು ನಿಂಬೆಹಣ್ಣಿನ ಗಿಡವನ್ನು ಹತ್ತುತ್ತಾನೆ ( ಸಣ್ಣ ಮರದಷ್ಟೇ ದೊಡ್ಡದಾಗಿರುತ್ತದೆ) ಮರದ ಎಲ್ಲಾ ದಿಕ್ಕಿನಲ್ಲಿದ್ದ ಹಣ್ಣುಗಳನ್ನು ಕಿತ್ತನು ಕೊನೆಗೆ ಬಡಗು ದಿಕ್ಕಿನ ಕಡೆ ತಿರುಗುತ್ತಾನೆ. ಆ ಕೊಂಬೆ ಒಂದು ದೈವದ ದೇವಾಲಯದ ಚಾವಣಿ ಮೇಲೆ ಹರಡಿತ್ತು. ಅವನು ನಿಂಬೆಹಣ್ಣು ಕೀಳುತ್ತಾ ಹೋದಂತೆ ಕಾಲು ಇಡಲು ಜಾಗವಿಲ್ಲದೆ ದೈವ ನೆಲೆಯ ಚಾವಣಿ ಮೇಲೆ ಕಾಲನ್ನು ಇಟ್ಟಾಗ ಅಲ್ಲಿರುವ ದೈವಕ್ಕೆ ತನ್ನ ನೆಲೆಯ ಚಾವಣಿ ಮೇಲೆ ಕಾಲಿಟ್ಟ ಇವನು ಸಾಮಾನ್ಯ ನಲ್ಲ ಎಂದು ತಿಳಿದು ಹಾಗೆ ಕೋಪ ಬಂದಿತು. ತನಿಯನನ್ನು ಹಿಡಿದು ಎತ್ತಿ ಆಕಾಶಕ್ಕೆ ಒಗೆದಾಗ ಕೊರಗ ತನಿಯ ಅಲ್ಲಿ ಮಾಯವಾದನು. ಈ ರೀತಿ ಮಾಯವಾದ ತನಿಯ ದೈವ ಕೊರಗಜ್ಜನಾಗಿ ಮಾರ್ಪಾಡಾದನು.

ದೈವವಾಗಿ ಮಾರ್ಪಾಡಾದ ಕೊರಗತನಿಯನಿಗೆ ವಿಶೇಷವಾದ ರೂಪ ಬಂದಿತ್ತು. ಮುಖದಲ್ಲಿ ದೈವ ಕಳೆ, ತಲೆಯಲ್ಲಿ ಬೆಳ್ಳಿ ಕೂದಲು, ಹಗುರವಾದ ಶರೀರ, ಅಜ್ಜನಾಗಿ ಕೊರಗಜ್ಜನಂತೆ ಕಾಣಿಸಿದರು. ತನ್ನ ದೇಹ ನೋಡಿ ಕೊರಗಜ್ಜನಿಗೆ ಆಶ್ಚರ್ಯವಾಗು ತ್ತದೆ ಹೀಗೆಕಾಯಿತು ಎಂದು ಯೋಚಿಸಿದಾಗ, ಈ ಧರೆಯಲ್ಲಿ ನಾನು ಮಾಡಬೇಕಾ ದ್ದು ಬಹಳಷ್ಟಿದೆ ಎಂದು ಗೋಚರವಾಯಿತು. ಇತ್ತ ಮನೆಯಲ್ಲಿ ಮೈರಕ್ಕಿ ಹೊರೆ ಕಾಣಿಕೆ ಹೊತ್ತು ಹೋದ ನನ್ನ ಮಗ ಇನ್ನು ಏಕೆ ಬಂದಿಲ್ಲಾ ಎಂದು ಕಣ್ಣೀರು ಹಾಕುತ್ತಿದ್ದಳು. ಇದು ಕೊರಗಜ್ಜನಿಗೆ ತಿಳಿದು, ಕೂಡಲೇ ಮಾಯವಾಗಿ ಮೈರಕ್ಕಿ ಇದ್ದಲ್ಲಿಗೆ ಹೋಗುತ್ತಾನೆ. ತನಿಯನ ‘ಅಮ್ಮಾ’ ಎಂಬ ಕೂಗು ಬೇರೆ ಬೇರೆ ಕಡೆ ಯಿಂದ ಕೇಳುತ್ತದೆ. ಆದರೆ ಕಣ್ಣಿಗೆ ಕಾಣುತ್ತಿಲ್ಲ. ಆಗೊಂದು ಧ್ವನಿ! ಅಮ್ಮ ಎಂದಿಗೂ ನಿಮಗೆ ನನ್ನ ತಲೆ ಕಾಣಿಸುವುದಿಲ್ಲ ಎಂದು ಕೇಳುತ್ತದೆ. ನಾನು ಹೊರೆ ಕಾಣಿಕೆ ಹೊತ್ತು ಕದ್ರಿ ಮಂಜು ನಾಥನ ಸಾನಿಧ್ಯಕ್ಕೆ ಹೋದಾಗ ಇಷ್ಟೆಲ್ಲ ಆಯಿತು. ನಿಮ್ಮ ಇಚ್ಛೆ ಪೂರೈಸಲು ನಿಂಬೆಹಣ್ಣು ಕೊಯ್ಯಲು ಮರ ಹತ್ತಿದ್ದೆ ಆ ಕೊಂಬೆ ದೈವದ ನೆಲೆ ಇರುವ ಮಾಳಿಗೆಗೆ ಹಬ್ಬಿತ್ತು . ನಿಂಬೆ ಹಣ್ಣು ಕೀಳುವಾಗ ನನ್ನ ಕಾಲು ದೇವಾಲಯದ ಮಾಳಿಗೆ ಮೇಲೆ ಇಟ್ಟೆನು. ದೈವಕ್ಕೆ ಕೋಪ ಬಂದು ನನ್ನನ್ನು ಮಾಯ ಮಾಡಿತು ಈಗ ನಾನು ಮಾಯಗಾರ ದೈವವಾಗಿದ್ದೇನೆ. ನಿಮ್ಮ ಕಷ್ಟಕಾಲದಲ್ಲಿ ನನ್ನನ್ನು ಕರೆ ಯಿರಿ. ನಾನು ಬಂದು ನಿಮ್ಮ ಕಷ್ಟ ಪರಿಹರಿಸುತ್ತೇನೆ ಈಗ ನನಗೆ ಹೊಟ್ಟೆ ತುಂಬಾ ಬಡಿಸಿ ಎಂದು ತನಗೆ ಬೇಕು ಬೇಕಾದ ಎಲ್ಲವನ್ನು ಸರಿಯಾಗಿ ಮಾಡಿಸಿಕೊಂಡು ಊಟ ಮಾಡಿ, ಅಲ್ಲಿಂದ ಹೊರಟು ನೇರವಾಗಿ ಬಂದು ಈಗ ನೆಲೆಸಿರುವ ಮಂಗಳೂರಿನ ಕುತ್ತಾರು ಪ್ರದೇಶದಲ್ಲಿ ಕುಳಿತು ವಿಶ್ರಾಂತಿ ಪಡೆದು ಅಲ್ಲಿಯೇ ನೆಲೆಸಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

“ಕೊರಗಜ್ಜನ” ನಿಗೆ ನಡೆವವರಿಂದ ಕೊರಗಜ್ಜನ ಕಥೆ ಅಲ್ಪಸ್ವಲ್ಪ ಕೇಳಿದ್ದೆ. ಇನ್ನಷ್ಟು ಸಂಗ್ರಹಿಸಿ ಈ ಲೇಖನದಲ್ಲಿ ಬರೆದಿರುವೆ. ಇದಿಷ್ಟೂ ಹೀಗೆ ಅಂತ ಖಚಿತವಾಗಿ ಅಲ್ಲದೇ ಬಹುದು. ಕೊರಗಜ್ಜನ ಕಥೆಯ ಸಾರಾಂಶವಂತು ಹೀಗೆ ಇದೆ.
ನಂಬಿದರೆ ಭಯವಿಲ್ಲ, ನಂಬದಿರೆ ಬಾಳಿಲ್ಲ
ಅಂಬಿಗನೇ ನೀ ನಡೆಸು ಈ ಬಾಳ ನೌಕೆ
ಯಾವ ನೋವೇ ಬರಲಿ, ಎದೆಗುಂದದಿರಲಿ
ಸತ್ಯಮಾರ್ಗದಿ ನಡೆವ ಶಕ್ತಿ ಕೊಡು ತಂದೆ!!
ನಿನ್ನೊಲುಮೆ ನಮಗಿರಲಿ ತಂದೆ
ಕೈ ಹಿಡಿದು ನೀ ನಡೆಸು ಮುಂದೆ!!
The story of Koragajjana from those who walked for “Koragajjana”













Follow Me