ಬೆಳಗಾವಿ: 2025ಕ್ಕಿಂತ 2026ರಲ್ಲಿ ಕಷ್ಟಗಳು, ಸವಾಲುಗಳು ಹೆಚ್ಚಿರಲಿವೆ. 2026ಕ್ಕೆ ಜಗತ್ತೇ ಮುಳುಗುತ್ತೆ. ಶೇ.7-8% ನಷ್ಟು ಜಗತ್ತೇ 2026ರಲ್ಲಿ ಮುಳುಗಿ ಹೋಗುತ್ತದೆ ಎಂಬುದಾಗಿ ಹೊಸ ವರ್ಷ ಸಮೀಪಿಸುತ್ತಿರುವ ಸಂದರ್ಭದಲ್ಲೇ ಕೋಡಿಮಠ ಶ್ರೀಗಳು ಶಾಕಿಂಗ್ ಭವಿಷ್ಯವನ್ನು ನುಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಂಕ್ರಾಂತಿ ಫಲದಲ್ಲಿ ಸೂರ್ಯನು ಉತ್ತರಾಯಣದ ಕಡೆ ಹೋಗುತ್ತಾನೆ. ಇದು ರಾಜ-ಮಹಾರಾಜರು, ವ್ಯಾಪಾರಸ್ಥರಿಗೆ, ದುಡಿಮೆದಾರರಿಗೆ ಉತ್ತಮ ಲಾಭ ತಂದುಕೊಡಲಿದೆ ಎಂದಿದ್ದಾರೆ.
ಇದನ್ನು ಮಿಸ್ಮಾಡದೇ ಓದಿ: ಕೌನ್ಸಿಲಿಂಗ್ ಮೂಲಕ ಮುಖ್ಯ ಶಿಕ್ಷಕರ ಹುದ್ದೆಯ ಬಡ್ತಿಗೆ ವೇಳಾಪಟ್ಟಿ ಪ್ರಕಟ

2025ಕ್ಕಿಂತ 2026ರಲ್ಲಿ ಕಷ್ಟಗಳು, ಸವಾಲುಗಳು ಹೆಚ್ಚಾಗಿ ಇರಲಿದ್ದಾವೆ. ಯುಗಾದಿ ಕಳೆದ ಮೇಲೆ ಮಳೆ, ಬೆಳೆ ಬಗ್ಗೆ ರೈತರು, ಭೂಮಿ ಬಗ್ಗೆ ಹೇಳುತ್ತೇನೆ. ಆದರೇ 2026ರಲ್ಲಿ ಜಗತ್ತಿಗೆ ಕಷ್ಟಗಳ ಸರಮಾಲೆಯನ್ನೇ ತರಲಿದೆ ಎಂಬುದಾಗಿ ಶಾಕಿಂಗ್ ಭವಿಷ್ಯ ನುಡಿದರು.
2026ರಲ್ಲಿ ಭಾರೀ ಪ್ರಮಾಣದಲ್ಲಿ ಮಳೆ, ಪ್ರವಾಹ ಎದುರಾಗಲಿದೆ. ಆಪತ್ತಿನಿಂದಾಗಿ ಏಳೆಂಟು ಪರ್ಸೆಂಟ್ ಈ ಜಗತ್ತೇ ಮುಳುಗುವ ಲಕ್ಷಣ ಗೋಚರಲಾಗುತ್ತಿದೆ ಎಂಬುದಾಗಿ ಹೇಳುವ ಮೂಲಕ, ಜಗತ್ತು ಮುಳುಗೋ ಶಾಕಿಂಗ್ ವಿಷಯವನ್ನು ತಮ್ಮ ಭವಿಷ್ಯದಲ್ಲಿ ತೆರೆದಿಟ್ಟಿದ್ದಾರೆ. ಅಲ್ಲದೇ ಯುಗಾದಿಯ ನಂತ್ರ ನಿಖವಾದ, ವಿಸ್ತೃತ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಗದ್ದುಗೆಯ ಕಿತ್ತಾಟದ ನಡುವೆ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಕುರಿತು ಕೋಡಿಮಠದ ಶ್ರೀಗಳು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ರಾಜ್ಯ ರಾಜಕಾರಣದ ಬಗ್ಗೆ ಕೋಡಿಮಠ ಶ್ರೀ ನುಡಿದಂತ ಆ ಸ್ಪೋಟಕ ಭವಿಷ್ಯವನ್ನು ಮುಂದೆ ಓದಿ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು, ಹಾಲು ಮತದ ಸಮಾಜದವರಿಂದ ಅಧಿಕಾರ ಕಿತ್ತುಕೊಳ್ಳೋದು ಅಷ್ಟು ಸುಲಭವಾದುದ್ದಲ್ಲ. ಅದು ಕಷ್ಟವಾಗಿದೆ. ಸಿದ್ಧರಾಮಯ್ಯ ಅವರು ತಾವಾಗಿಯೇ ಅಧಿಕಾರ ಬಿಟ್ಟು ಕೊಟ್ರೆ ಮಾತ್ರವೇ ಬೇರೆಯವರಿಗೆ ಅವಕಾಶ ಸಿಗಬಹುದು ಎಂಬುದಾಗಿ ತಿಳಿಸಿದ್ದಾರೆ.
ಇನ್ನೂ ಸಿಎಂ ಆಗೋ ಕನಸಿನಲ್ಲಿದ್ದಂತ ಡಿಕೆ ಶಿವಕುಮಾರ್ ಅವರಿಗೆ, ಸಿದ್ಧರಾಮಯ್ಯ ತಾನಾಗಿಯೇ ಅಧಿಕಾರ ಬಿಟ್ಟುಕೊಟ್ಟರೆ ಮಾತ್ರವೇ ಅದು ಸಾಧ್ಯವಾಗಲಿದೆ. ಇಲ್ಲ ಅಂದರೇ ಡಿಕೆಶಿಗೆ ಅಧಿಕಾರ ಸಿಗೋದಿಲ್ಲ ಎಂಬುದಾಗಿ ಮಾರ್ಮಿಕವಾಗಿ ನುಡಿದಿದ್ದಾರೆ.
Kodi Shree Prediction On CM Post













Follow Me