ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚ ಸುದೀಪ್‌ ದರ್ಶನ್ ಫ್ಯಾನ್ಸ್ ಸಮರ!

darshan and sudeep photo
darshan and sudeep photo

ಬೆಂಗಳೂರು: ಕೊಲೆ ಆರೋಪದ ಮೇಲೆ ಸದ್ಯ ಬೆಂಗಳೂರಿನ ಪರಪ್ಪನ ಆಗ್ರಹಾರದಲ್ಲಿರುವ ನಟ ದರ್ಶನ್ ಅಭಿಮಾನಿಗಳು ಈಗ ನಟ ಸುದೀಪ್‌ ವಿರುದ್ದ ತಿರುಗಿ ಬಿದ್ದಿದ್ದಾರೆ.

ಕಿಚ್ಚ ಸುದೀಪ್ ಹೇಳಿದ್ದೇನು: ಶನಿವಾರದಂದು ಹುಬ್ಬಳ್ಳಿಯಲ್ಲಿ ಮಾರ್ಕ್ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಲ್ಲಿ ಮಾತನಾಡಿರುವಂತ ಅವರು, ನಮ್ಮ ಅಭಿಮಾನಿಗಳು ನೀವು ಸುಮ್ಮನೇ ಇರಬೇಡಿ. ಈ ಕಾರ್ಯಕ್ರಮ ಯಾಕೆ ಹುಬ್ಬಳ್ಳಿಯಲ್ಲಿ ಮಾಡುತ್ತಿದ್ದೀವಿ ಅಂದ್ರೆ ಇಲ್ಲಿಂದ ಮಾತನಾಡಿದ್ರೆ ಕೆಲವೊಬ್ಬರಿಗೆ ತಟ್ಟುತ್ತೆ ಎಂದರು.

ಇದನ್ನು ಮಿಸ್‌ ಮಾಡದೇ ಓದಿ: ರೈಲ್ವೇ ಪ್ರಯಾಣಿಕರಿಗೆ ಬಿಗ್‌ಶಾಕ್‌: ಟಿಕೇಟ್‌ ದರದಲ್ಲಿ ಹೆಚ್ಚಳ

ಇದನ್ನು ಮಿಸ್‌ ಮಾಡದೇ ಓದಿ: ಬಿಪಿಎಲ್ ಕಾರ್ಡ್ ಆದಾಯ ಮಿತಿ 1.80 ಲಕ್ಷಕ್ಕೆ ಏರಿಕೆ

ಒಂದು ಕಡೆ ಪೈರಸಿ ಸ್ಯಾಂಡಲ್ ವುಡ್ ಗೆ ಮಾರಕವಾಗಿ ಪರಿಣಿಸಿದ್ದರೇ, ಮತ್ತೊಂದು ಕಡೆ ತಮ್ಮ ಸಿನಿಮಾ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವವರಿಗೆ ಖಡಕ್ ಸಂದೇಶವನ್ನು ನೀಡಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ನಟ ಸುದೀಪ್ ಮಾತನಾಡಿದಂತ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿದೆ.

Kiccha Sudeep Darshan fan battle on social media!
Kiccha Sudeep Darshan fan battle on social media!

ಸೋಷಿಯಲ್ ಮಿಡಿಯಾದಲ್ಲಿ ಡಿ ಫ್ಯಾನ್ಸ್ ಸಮರ: ಇನ್ನು ಕಿಚ್ಚ ಸುದೀಪ್ ಈ ಒಂದು ಹೇಳಿಕೆ ನೀಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ಅಭಿಮಾನಿಗಳು ನೀವೇ ಯುದ್ಧಕ್ಕೆ ಕರೆದರೆ ಬರದೇ ಇರುತ್ತಿವಾ ಅಂತ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬೆಂಬಲಿಸಿ ತಿರುಗೇಟು ನೀಡಿದ್ದಾರೆ ವಿಡಿಯೋ ಲಕ್ಷ್ಮಿ ಅವರ ಫೋಟೋ ಹಾಕಿ ಕೌಂಟರ್ ಕೊಟ್ಟಿದ್ದರೆ.

ಈ ನಡುವೆ ಸ್ಯಾಂಡಲ್ ವುಡ್ ನಲ್ಲಿ ಇದೀಗ ಮತ್ತೆ ಸ್ಟಾರ್ ವಾರ್ ಆರಂಭವಾಗಿದ್ದು ಕಿಚ್ಚನ ಯುದ್ಧದ ಮಾತಿಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇದೀಗ ಎಂಟ್ರಿ ಕೊಟ್ಟಿದ್ದಾರೆ. ದರ್ಶನ್ ಜೈಲಲ್ಲಿ ಇದ್ದಾಗ ಇವರು ವೇದಿಕೆ ಮೇಲೆ ಫ್ಯಾನ್ಸ್ ಬಗ್ಗೆ ಮಾತನಾಡುತ್ತಾರೆ. ಆದರೆ ದರ್ಶನ್ ಅವರು ಹೊರಗಡೆ ಇದ್ದಾಗ ಈ ರೀತಿ ಹೇಳಿಕೆ ನೀಡುವವರು ಬೆಂಗಳೂರಿನಲ್ಲಿ ಇದ್ದಾರೋ ಇಲ್ವೋ ಅಂತ ಇರುತ್ತಾರೆ ಎಂದು ಕಿಚ್ಚ ಸುದೀಪ್ ಗೆ ಟಾಂಗ್ ನೀಡಿದ್ದಾರೆ.

darshan and vijayalakshmi
darshan and vijayalakshmi

ದರ್ಶನ್ ಜೈಲಿನಲ್ಲಿ ಇದ್ದಾಗ ಕೆಲವರು ಹೇಳಿಕೆ ಕೊಡುತ್ತಾರೆ. ಫ್ಯಾನ್ಸ್ ಬಗ್ಗೆ ವೇದಿಕೆಯ ಮೇಲೆ ಮಾತನಾಡುತ್ತಾರೆ ಆದರೆ ದರ್ಶನ್ ಇದ್ದಾಗ ಮಾತ್ರ ಅವರೆಲ್ಲ ಬೆಂಗಳೂರಿನಲ್ಲಿ ಇದ್ದಾರ ಇಲ್ವಾ ಅಂತ ಗೊತ್ತಾಗದಂತೆ ಇರುತ್ತಾರೆ. ಕಿಚ್ಚ ಸುದೀಪ್ ಗೆ ದರ್ಶನ್ ಪತ್ನಿ ಇದೀಗ ಟಾಂಗ್‌ ನೀಡಿದ್ದಾರೆ. ದಾವಣಗೆರೆಯಲ್ಲಿ ಪತ್ನಿ ವಿಜಯ್ ಲಕ್ಷ್ಮಿ ಈ ವಿಚಾರವಾಗಿ ಮಾತನಾಡಿದರು ದರ್ಶನ್ ಬಗ್ಗೆ ಹೇಳುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ದರ್ಶನ್ ಅಭಿಮಾನಿಗಳು ತಲೆ ಕೆಡಿಸಿಕೊಳ್ಳಬೇಡಿ ಎಂದು ಟಾಂಗ್ ನೀಡಿದ್ದಾರೆ.

Kiccha Sudeep Darshan fan battle on social media!