ಕರ್ನಾಟಕ ವಿಧಾನಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಅಂತಿಮ ಮತದಾರರ ಪಟ್ಟಿ ಪ್ರಕಟ

Karnataka Legislative Council North East Teachers' Constituency
Karnataka Legislative Council North East Teachers' Constituency

ಬಳ್ಳಾರಿ: ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಗನುಗುಣವಾಗಿ ಮಂಗಳವಾರ ಕರ್ನಾಟಕ ವಿಧಾನಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ. 

ಇದನ್ನು ಮಿಸ್‌ಮಾಡದೇ ಓದಿ: CBSE 10 ಮತ್ತು 12 ನೇ ತರಗತಿ ಪರೀಕ್ಷೆಗಳ ವೇಳಾಪಟ್ಟಿ ಪರಿಷ್ಕೃತ ಬಿಡುಗಡೆ

ಇದನ್ನು ಮಿಸ್‌ಮಾಡದೇ ಓದಿ : ರೈಹಾನ್ ವಾದ್ರಾ ಮದುವೆಯಾಗುತ್ತಿರುವ ಅವಿವಾ ಬೇಗ್ ಯಾರು

ಬಳ್ಳಾರಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಸಂಬAಧಿಸಿದAತೆ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 3302 ಮತದಾರರು ನೋಂದಣಿಯಾಗಿದ್ದಾರೆ.

*ಮತದಾರರ ವಿವರ:*

ಬಳ್ಳಾರಿ: ಗಂಡು-458, ಹೆಣ್ಣು-465 ಸೇರಿ ಒಟ್ಟು 923.
ಬಳ್ಳಾರಿ ನಗರ: ಗಂಡು-588, ಹೆಣ್ಣು-636 ಸೇರಿ ಒಟ್ಟು 1224.
ಕಂಪ್ಲಿ: ಗಂಡು-136, ಹೆಣ್ಣು-77 ಸೇರಿ ಒಟ್ಟು 213.
ಕುರುಗೋಡು: ಗಂಡು-93, ಹೆಣ್ಣು-26 ಸೇರಿ ಒಟ್ಟು 119.
ಸಂಡೂರು: ಗಂಡು-206, ಹೆಣ್ಣು-177 ಸೇರಿ ಒಟ್ಟು 383.
ಸಿರುಗುಪ್ಪ: ಗಂಡು-294, ಹೆಣ್ಣು-146 ಸೇರಿ ಒಟ್ಟು 440.

vidhana soudha
Image / Twitter

ಒಟ್ಟಾರೆ ಬಳ್ಳಾರಿ ಜಿಲ್ಲೆಯಲ್ಲಿ ಗಂಡು-1775, ಹೆಣ್ಣು-1527 ಸೇರಿ ಒಟ್ಟು 3302 ಮತದಾರರು ನೋಂದಾಯಿಸಿಕೊAಡಿದ್ದಾರೆ.

ಅತಿಮ ಮತದಾರರ ಪಟ್ಟಿಯ ಭೌತಿಕ ಪ್ರಕ್ರಿಯೆಯು ಸಂಬAಧಿಸಿದ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ಜಿಲ್ಲಾಧಿಕಾರಿಯವರ ಕಚೇರಿ, ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಆಯಾ ತಾಲ್ಲೂಕು ತಹಶೀಲ್ದಾರರ ಕಚೇರಿಯಲ್ಲಿ ಲಭ್ಯವಿದ್ದು, ಮತದಾರರು ಪರಿಶೀಲಿಸಿಕೊಳ್ಳಬಹುದಾಗಿದೆ.

ಇದನ್ನು ಹೊರತುಪಡಿಸಿಯೂ ಸಹ ಇದೊಂದು ನಿರಂತರ ನೋಂದಣಿ ಪ್ರಕ್ರಿಯೆಯಾಗಿರುವ ಹಿನ್ನೆಲೆಯಲ್ಲಿ, ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೂ ಅರ್ಹ ಮತದಾರರು ಅವಶ್ಯಕ ದಾಖಲೆಗಳೊಂದಿಗೆ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.