ಹಾವೇರಿ: ಹಬ್ಬದ ವೇಳೆ ಹಿಂದೂಗಳು ಬಾರ್ನಲ್ಲಿ ಇರ್ತಾರೆ ಎನ್ನುವದ ಮೂಲಕ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಹೆಚ್. ಆಂಜನೇಯ ವಿವಾದತ್ಮಕ ಹೇಳಿಕೆ ನೀಡಿರುವುದು ಈಗ ವಿವಾದವನ್ನು ಎಬ್ಬಿಸಿದೆ.
ಅವರು ಇಂದು ಹಾವೇರಿಯಲ್ಲಿ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಹೇಳಿದರು. ಇನ್ನೂ ಏರ್‌ಪೋರ್ಟ್‌ನಲ್ಲಿ ಮುಸ್ಲಿಂರು ಸಾರ್ವಜನಿಕವಾಗಿ ನಮಾಜ್ ಮಾಡಿರುವ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಅವರು ಕೈನಲ್ಲಿ ಕೋಲು ಹಿಡಿದುಕೊಂಡಿಲ್ಲ. ಅವರು ಮಾಡಿರುವುದು ಪ್ರಾರ್ಥನೆ, ಅದು ಮಾಡಿರುವುದು ತಪ್ಪಲ್ಲ. ಅವರನ್ನು ನೋಡಿ ಕಲಿತುಕೊಳ್ಳಿ ಅಂತ ಹೇಳಿದರು. ಅವರು ಸಮಯದಲ್ಲಿ ನಮಾಜ್ ಮಾಡುತ್ತಿದ್ದಾರೆ ಅಂತ ಹೇಳಿದರು.

ಇನ್ನೂ ಇದೇ ವೇಳೆ ಅವರು ನಮಾಜ್ ಮಾಡಿರುವುದು ತಪ್ಪಲ್ಲ, ಕಳ್ಳತನ ಮಾಡಿಲ್ಲ, ಇವರ ಹಾಗೇ ನಾಮ ಹಾಕಿಕೊಂಡು, ತಟ್ಟೆಇಟ್ಟುಕೊಂಡು ಕಾಸು ಅಂತ ಕೇಳಿಲ್ಲ. ಇದರಲ್ಲಿ ವಿವಾದವಿಲ್ಲ, ಅವರು ಸರಿಯಾಗಿದ್ದಾರೆ. ಹಿಂದೂಗಳ ಅಚರಣೆ ಬೇರೆ ಮುಸ್ಲಿಂ ಅವರ ಆಚರಣೆ ಬೇರೆ ಯಾರ ಆಚರಣೆಯೂ ಕೂಡ ದಕ್ಕೆ ಯಾಗಬಾದರು ಅಂತ ಹೇಳಿದರು. ಹಬ್ಬದ ಸಮಯದಲ್ಲಿ ಹೈಕ್ಲಾಸ್ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳು ಹೌಸ್ಫುಲ್ ಆಗುತ್ತವೆ ಎಂದು ಅವರು ಹೇಳಿದರು. ಹಬ್ಬದ ಸಮಯದಲ್ಲಿ ಸಾವಿರಾರು ರೂ ದುಡ್ಡು ಆಗುತ್ತದೆ.














Follow Me