ಬೆಂಗಳೂರು: ಕರ್ನಾಟಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajneesh) ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ಎಂಎಲ್‌ಸಿ ಎನ್ ರವಿಕುಮಾರ್ (MLC N Ravikumar) ಅವರಿಗೆ ಜುಲೈ 8 ರವರೆಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಲಾಗಿದೆ.
ಇದನ್ನು ಮಿಸ್ ಮಾಡದೇ ಓದಿ: ಕರ್ನಾಟಕದಲ್ಲಿ ಹೃದಯಾಘಾತಕ್ಕೆ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆ ಇದು, ಫೋನ್ ನಂಬರ್ ಸೇವ್ ಮಾಡ್ಕೊಳ್ಳಿ!
ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಕರ್ನಾಟಕ ಹೈಕೋರ್ಟ್ (High Court of Karnataka) ಶುಕ್ರವಾರ ಬಿಜೆಪಿ ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ) ಎನ್. ರವಿಕುಮಾರ್ ಅವರಿಗೆ ಜುಲೈ 8 ರವರೆಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.
ನಡೆಯುತ್ತಿರುವ ತನಿಖೆಗೆ ಸಂಪೂರ್ಣವಾಗಿ ಸಹಕರಿಸುವಂತೆ ನ್ಯಾಯಾಲಯ (Court) ರವಿಕುಮಾರ್ ಅವರಿಗೆ ಸೂಚಿಸಿದೆ. ಎಫ್‌ಐಆರ್ (FIR ರದ್ದುಗೊಳಿಸುವಂತೆ ಕೋರಿ ರವಿಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್, ಪ್ರಕರಣಕ್ಕೆ ಸಂಪೂರ್ಣವಾಗಿ ತಡೆಯಾಜ್ಞೆ ನೀಡಲಿಲ್ಲ, ಆದರೆ ಸಾರ್ವಜನಿಕ ಭಾಷಣದಲ್ಲಿ ಚುನಾಯಿತ ಪ್ರತಿನಿಧಿಗಳು ಬಳಸುವ ಪದಗಳ ಆಯ್ಕೆಗಾಗಿ ಅವರನ್ನು ತರಾಟೆಗೆ ತೆಗೆದುಕೊಂಡರು. “ಇಂದು ರಾಜಕಾರಣಿಗಳು ಬಳಸುವ ಭಾಷೆ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿದಿರುವುದು ತುಂಬಾ ದುರದೃಷ್ಟಕರ. ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕ ಹೇಳಿಕೆಗಳಲ್ಲಿ ಸಂಯಮ ಮತ್ತು ಜವಾಬ್ದಾರಿಯನ್ನು ತೋರಿಸಬೇಕು” ಎಂದು ನ್ಯಾಯಾಧೀಶರು ಬುದ್ದಿ ಹೇಳಿದರು.
ಇದನ್ನು ಮಿಸ್ ಮಾಡದೇ ಓದಿ: ಈ ಆರೋಗ್ಯ ಸಮಸ್ಯೆ ಇರುವವರು ಕಾಫಿ ಕುಡಿಯಬೇಡಿ…!
ಇದನ್ನು ಮಿಸ್ ಮಾಡದೇ ಓದಿ: ವಾಹನ ಸವಾರರಿಗೆ ನೆಮ್ಮದಿಯ ಸುದ್ದಿ: ಟೋಲ್ ಶುಲ್ಕ ಶೇ.50 ರಷ್ಟು ಇಳಿಕೆ…!
Follow Me