ಕರ್ನಾಟಕ ಸರ್ಕಾರದ 2026ರ ಸಾರ್ವತ್ರಿಕ ರಜಾ ದಿನಗಳ ಪೂರ್ಣ ಪಟ್ಟಿ ಇಲ್ಲಿದೆ

vidhana soudha
Image / Twitter

ಬೆಂಗಳೂರು : ರಾಜ್ಯ ಸರ್ಕಾರದ 2026ನೇ ಸಾಲಿನ 20 ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಒಟ್ಟು 20 ಸಾರ್ವತ್ರಿಕ ರಜೆ ದಿನ ಹಾಗೂ 21 ಪರಿಮಿತ ರಜಾ ದಿನಗಳ ಪಟ್ಟಿಗೆ ಮಂಜೂರಾತಿ ನೀಡಿದೆ.

ಭಾನುವಾರ ಬರುವ ಮಹಾ ಶಿವರಾತ್ರಿ (ಫೆ.15), ಮಹರ್ಷಿ ವಾಲ್ಮೀಕಿ ಜಯಂತಿ (ಅ.25), ಕನ್ನಡ ರಾಜ್ಯೋತ್ಸವ (ನ.1) ಹಾಗೂ ನರಕ ಚತುರ್ದಶಿ (ನ.8) ಮತ್ತು ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆಯನ್ನು (ಅ.10) ಸಾರ್ವತ್ರಿಕ ರಜೆ ದಿನಗಳ ಪಟ್ಟಿಯಲ್ಲಿ ನಮೂದಿಸಿಲ್ಲ.

 

ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತವೆ. ಕಛೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ತರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು.

ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗಧಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗಧಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.

ದಿನಾಂಕ:03.09.2026 (ಗುರುವಾರ) ಕೈಲ್ ಮೂಹೂರ್ತ, ದಿನಾಂಕ:18.10.2026 (ಭಾನುವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ:26.11.2026 (ಗುರುವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.

The state government has announced the list of 20 general holidays for the year 2026. A total of 20 general holidays and 21 limited holidays have been approved.