ಬೀದರ್ : ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಇದೀಗ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದೆ. ಬೀದರ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದೆ. ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಾಗಿದೆ.

ಉದ್ಯಮಿ ಸಂಜು ಕುಮಾರ್ ಸೂಗೂರೆ ದೂರನ್ನು ಆಧರಿಸಿ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಉದ್ಯಮಿ ಸಂಜುಕುಮಾರ ಸುಗುರೆ 99 ಲಕ್ಷ ಹಣ ಕೊಟ್ಟಿದ್ದರು. ಚುನಾವಣೆ ಸಮಯದಲ್ಲಿ ಶರಣು ಸಲಗರ ಸಂಜು ಕುಮಾರ್ ಸುಗುರೆ ಬಳಿ 99 ಲಕ್ಷ ಹಣ ಪಡೆದಿದ್ದಾರೆ. ಖಾಲಿ ಚಕ್ ಪಡೆದು ಸಂಜು ಕುಮಾರ್ 99 ಲಕ್ಷ ರೂಪಾಯಿ ಹಣ ಕೊಟ್ಟಿದ್ದಾರೆ. ಆದರೆ ಹಣ ವಾಪಸ್ ಕೊಡದ ಹಿನ್ನೆಲೆಯಲ್ಲಿ ಸಂಜು ಕುಮಾರ್ ಶರಣು ಸಲಗರ ವಿರುದ್ಧ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದಾರೆ. ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್ ಬೌನ್ಸ್ ಆಗಿದ್ದು, ಉದ್ಯಮಿ ಸಂಜೀವ್ ಕುಮಾರ್, ಶಾಸಕ ಶರಣು ಸಲಗರ ವಿರುದ್ಧ ದೂರು ನೀಡಿದ್ದಾರೆ.
FIR against BJP MLA Sharanu Salagar













Follow Me