ಮೊಟ್ಟೆ ಸೇವನೆ ಸಂಪೂರ್ಣ ಸುರಕ್ಷಿತ : ಸ್ಯಾಂಪಲ್ ಟೆಸ್ಟ್ ನಲ್ಲಿ ವರದಿ ಬಹಿರಂಗ

egg cancer news
egg cancer news

 ಬೆಂಗಳೂರು : ಇತ್ತೀಚಿಗೆ ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಬಾರಿ ವೈರಲ್ ಆಗಿತ್ತು. ಅದರ ಬೆನ್ನಲ್ಲೆ ಅಲರ್ಟ್ ಆದ ಆರೋಗ್ಯ ಇಲಾಖೆ ಮೊಟ್ಟೆ ಟೆಸ್ಟ್ ಮಾಡಲು ಮುಂದಾಗಿದ್ದು, ಸಚಿವ ದಿನೇಶ್ ಗುಂಡೂರಾವ್ ವಿವಿಧ ಮಾದರಿ ಮೊಟ್ಟೆ ಟೆಸ್ಟ್ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಇದೀಗ ಮೊಟ್ಟೆ ಸ್ಯಾಂಪಲ್ ರಿಪೋರ್ಟ್ ಬಹಿರಂಗ ಆಗಿದ್ದು ವರದಿಯಲ್ಲಿ ಮೊಟ್ಟೆ ಸೇವನೆ ಸುರಕ್ಷಿತ ಎಂದು ತಿಳಿದುಬಂದಿದೆ. 27 ಮೊಟ್ಟೆಗಳ ಸ್ಯಾಂಪಲ್ ಟೆಸ್ಟಿಗೆ ಆರೋಗ್ಯ ಇಲಾಖೆ ಒಳಪಡಿಸಿತ್ತು. ಇದೀಗ ವರದಿಯಲ್ಲಿ ಮೊಟ್ಟೆ ಸೇವನೆ ಸುರಕ್ಷಿತ ಎಂದು ವರದಿ ಬಂದಿದೆ. ಸುಮಾರು 60 ಆಯಾಮಗಳಲ್ಲಿ ಮೊಟ್ಟೆ ಟೆಸ್ಟ್ ಮಾಡಲಾಗಿತ್ತು. ಸ್ಯಾಂಪಲ್ ಸಂಗ್ರಹಿಸಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಟೆಸ್ಟ್ ನಡೆಸಿತ್ತು.

ಇದನ್ನು ಮಿಸ್‌ ಮಾಡದೇ ಓದಿ: ಆಂಜನೇಯನ ಪತ್ನಿ ಮತ್ತು ಮಗನ ಬಗ್ಗೆ ನಿಮಗೆ ಗೊತ್ತೇ

ಇದನ್ನು ಮಿಸ್‌ ಮಾಡದೇ ಓದಿ: 2026 ರ ಯು19 ವಿಶ್ವಕಪ್ ಭಾರತ ತಂಡ ಪ್ರಕಟ

ಬೆಂಗಳೂರು ಸೇರಿ ರಾಜ್ಯಾದ್ಯಂತ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿತ್ತು. ರಾಜ್ಯದಲ್ಲಿ 200 ಕ್ಕೂ ಹೆಚ್ಚು ಮೊಟ್ಟೆಗಳ ಸ್ಯಾಂಪಲ್ ಸಂಗ್ರಹಿಸಿದ್ದರು ರಾಜಧಾನಿ ಬೆಂಗಳೂರಿನಲ್ಲಿ 50 ಸ್ಯಾಂಪಲ್ ಕಲೆಕ್ಟ್ ಮಾಡಿದರು. ಇದರಲ್ಲಿ ಇಲಾಖೆಯ ಅಧಿಕಾರಿಗಳ ಕೈ ಸೇರಿದ ನಾಲ್ಕು ಮೊಟ್ಟೆಗಳ ವರದಿಯಲ್ಲಿ ಮೊಟ್ಟೆ ಸೇವನೆಯಿಂದ ಯಾವುದೇ ರೋಗ ಹರಡುವುದಿಲ್ಲ ಎಂದು ದೃಡಪಟ್ಟಿದೆ.

EGG

ಇದಲ್ಲದೇ ಭಾರತದ ಆಹಾರ ನಿಯಂತ್ರಕ ಸಂಸ್ಥೆಯಾದ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಇತ್ತೀಚೆಗೆ ಭಾರತದಲ್ಲಿ ಲಭ್ಯವಿರುವ ಮೊಟ್ಟೆಗಳು ಮಾನವ ಸೇವನೆಗೆ ಸುರಕ್ಷಿತವೆಂದು ಸ್ಪಷ್ಟಪಡಿಸಿದೆ ಮತ್ತು ಮೊಟ್ಟೆ ಸೇವನೆಯು ಕ್ಯಾನ್ಸರ್ ಕಾರಕ ಅಥವಾ ಕ್ಯಾನ್ಸರ್ ಉಂಟುಮಾಡುವ ಗುಣ ಹೊಂದಿದೆ ಎಂಬ ಸಾಮಾಜಿಕ ಮಾಧ್ಯಮದಲ್ಲಿ ಹೇಳಲಾಗುತ್ತಿದ್ದ ಹೇಳಿಕೆಗಳನ್ನು ತಳ್ಳಿಹಾಕಿದೆ.

EGG
EGG

FSSAI ತನ್ನ ಅಧಿಕೃತ ಹೇಳಿಕೆಯಲ್ಲಿ, ಮೊಟ್ಟೆಗಳನ್ನು ಕ್ಯಾನ್ಸರ್ ಅಪಾಯಕ್ಕೆ ಜೋಡಿಸುವುದು ದಾರಿತಪ್ಪಿಸುವ, ವೈಜ್ಞಾನಿಕವಾಗಿ ಬೆಂಬಲಿತವಲ್ಲದ ಮತ್ತು ಅನಗತ್ಯ ಸಾರ್ವಜನಿಕ ಎಚ್ಚರಿಕೆಯನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದೆ.

Egg consumption is completely safe Sample test report reveals