ರಾಜ್ಯದ ಎಲ್ಲಾ ಶಾಲೆ- ಕಾಲೇಜುಗಳಲ್ಲಿ ‘ರಸ್ತೆ ಸುರಕ್ಷತಾ ಮಾಸಾಚರಣೆ’ ಆಚರಿಸುವಂತೆ `ಶಿಕ್ಷಣ ಇಲಾಖೆ’ ಆದೇಶ

school of education karnataka
school of education karnataka

ಬೆಂಗಳೂರು : ಜನವರಿ 2026 ರ ಮಾಹೆಯಲ್ಲಿ ರಾಜ್ಯದ ಎಲ್ಲಾ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ “ರಸ್ತೆ ಸುರಕ್ಷತಾ ಮಾಸಾಚರಣೆ’ ಯನ್ನು ಹಮ್ಮಿಕೊಳ್ಳುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯದಲ್ಲಿ ರಸ್ತೆ ಸುರಕ್ಷತೆಯು ಜನಜೀವನದ ಅನಿವಾರ್ಯ ಅಂಶವಾಗಿದ್ದು, ಅದರ ಕುರಿತು ಸಮಗ್ರ ಜಾಗೃತಿ ಮೂಡಿಸುವುದು ಸರೆಕಾರದ ಪ್ರಮುಖ ಆದ್ಯತೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಪಘಾತಗಳ ಪ್ರಮಾಣದಲ್ಲಿ ಕಂಡುಬರುವ ಏರಿಕೆ, ಸಾರ್ವಜನಿಕರಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಸುರಕ್ಷಿತ ಸಂಚಾರದೆ ಅಭ್ಯಾಸಗಳನ್ನು ಬೆಳೆಸುವ ಅಗತ್ಯವನ್ನು ಒತ್ತಿ ಹೇಳುತ್ತದೆ. ವಿದ್ಯಾರ್ಥಿಗಳು ನಾಳೆಯ ಜವಾಬ್ದಾರಿಯುತ ನಾಗರಿಕರಾಗಿರುವುದರಿಂದ, ಅವರಿಗೆ ಬಾಲ್ಯದಲ್ಲೇ ರಸ್ತೆ ಸುರಕ್ಷತಾ ನಿಯಮಗಳು, ಜವಾಬ್ದಾರಿಯುತ ನೆಡೆ-ನುಡಿ ಮತ್ತು ಎಚ್ಚರಿಕೆಯಿಂದ ಸಂಚಾರ ಮಾಡುವ ವಿಧಾನಗಳನ್ನು ತಿಳಿಸುವುದು ಅತ್ಯಂತ ಮಹತ್ವದ್ದಾಗಿದೆ.

Education Department orders to celebrate 'Road Safety Month' in all schools and colleges in the state
Education Department orders to celebrate ‘Road Safety Month’ in all schools and colleges in the state

ಶಿಕ್ಷಣ ಇಲಾಖೆಯು ಶಾಲಾ ಮಕ್ಕಳಲ್ಲಿ ರಸ್ತೆ ಸುರಕ್ಷತಾ ಸಂಸ್ಕೃತಿಯನ್ನು ಬೆಳೆಸಲು, ಪ್ರಾಯೋಗಿಕ ಅಧಯನದ ಮೂಲಕ ನಿಯಮಪಾಲನೆಯ ಮಹತ್ತವನ್ನು ಮನವರಿಕೆ ಮಾಡಲು ಮತ್ತು ಸಮಗ್ರ ಸಮಾಜದಲ್ಲಿ ರಸ್ತೆ ಶಿಸ್ತು ಹೆಚ್ಚಿಸಲು ಈ ಅಭಿಯಾನವನ್ನು ಬಲವಾಗಿ ಬೆಂಬಲಿಸುತ್ತದೆ. ಉಲ್ಲೇಖ[1]ರ ದಿನಾಂಕ:06.12.20258 ಸಭೆಯಲ್ಲಿ ಚರ್ಚಿಸಿ ಸಮಿತಿಯು ಸೂಚಿಸಿದ ಅಂಶಗಳನ್ವಯ ರಾಜ್ಯದ ಎಲ್ಲಾ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಜನವರಿ 1 ರಿಂದ ಜನವರಿ 31, 2026 ರವರೆಗೆ ಒಂದುತಿಂಗಳ ಕಾಲ “ರಸ್ತೆ ಸುರಕ್ಷತಾ ಮಾಸಾಚರಣೆ” ಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಮಾಸಾಚರಣೆಯಲ್ಲಿನ ಚಟುವಟಿಕೆಗಳನ್ನು ವಿದ್ಯಾರ್ಥಿಗಳ ದಿನನಿತ್ತದ ಬೋಧನಾ ಪ್ರಕ್ರಿಯೆಗೆ ಯಾವುದೇ ತೊಂದರೆಯಾಗದಂತೆ, ಸರಳವಾಗಿ ನಡೆಸಲು ಸೂಚಿಸಲಾಗಿದೆ. ಯಶಸ್ವಿ ಅನುಷ್ಠಾನಕ್ಕಾಗಿ ಪ್ರತಿದಿನದ ಚಟುವಟಿಕೆ ಮತ್ತು ಅನುಷ್ಠಾನ ಕಾರ್ಯತಂತ್ರಗಳನ್ನು ಸ್ಪಷ್ಟಪಡಿಸಲಾಗಿದೆ. ಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು ಮತ್ತು ಸಿಬ್ಬಂದಿವರ್ಗದವರು ಈ ಚಟುವೆಟಿಕೆಗಳನ್ನು ಜವಾಬ್ದಾರಿಯತವಾಗಿ ಮತ್ತು ಕಡ್ಡಾಯವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.

ಈ ಸಂದರ್ಭದಲ್ಲಿ, ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಈ ಮಾಸಾಚರಣೆಯನ್ನು ಫಲಪ್ರದವಾಗಿ ಆಚರಿಸುವಂತೆ, ಜಾಗೃತಿಯ ಚಟುವಟಿಕೆಗಳನ್ನು ಯೋಜಿತವಾಗಿ ಕೈಗೊಳ್ಳುವಂತೆ ಮತ್ತು ವಿದ್ಯಾರ್ಥಿ-ಶಿಕ್ಷಕರು ಸಕ್ರಿಯವಾಗಿ ಭಾಗವಹಿಸುವಂತೆ ಈ ಸುತ್ತೋಲೆ ಮೂಲಕ ಇಲಾಖೆಯು ನಿರ್ದೇಶನಗಳನ್ನು ಜಾರಿಗೊಳಿಸಿದೆ.

ಜನವರಿ ತಿಂಗಳ ರಸ್ತೆ ಸುರಕ್ಷತೆ ಮಾಸಾಚರಣೆಯ ದಿನವಾರು ಚಟುವಟಿಕೆಗಳು (ಪ್ರತಿ ಚಟುವಟಿಕೆಯು 10 ರಿಂದ 15 ನಿಮಿಷಗಳ ಕಾಲಾವಧಿಗೆ ಸೀಮಿತಗೊಳಿಸಲಾಗಿದೆ).

Education Department orders to celebrate ‘Road Safety Month’ in all schools and colleges in the state