ದರ್ಶನ್‌ ಬಗ್ಗೆ ಮೌನ ಮುರಿದ ಸುದೀಪ್‌ ಟ್ವಿಟರ್‌ನಲ್ಲಿ ಹೇಳಿದ್ದೇನು ಗೊತ್ತಾ?

darshan and sudeep photo
darshan and sudeep photo

ಬೆಂಗಳೂರು: ನಟ ದರ್ಶನ್‌ ಮತ್ತು ನಟ ಸುದೀಪ್ ಅವರ ಫ್ಯಾನ್‌ ನಡುವೆ ವಾರ್ ನಡೆಯುತ್ತಿದೆ. ಈ ನಡುವೆ ಇಂದು ತಮಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದವರ ವಿರುದ್ದ ನಟ ದರ್ಶನ್ ಪತ್ನಿ ವಿಜಯ ಲಕ್ಷ್ಮಿ ಅವರು ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಕಿರಾತಕರ ವಿರುದ್ದ ಪೋಲಿಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು ಕಿಡಿಗೇಡಿಗಳಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.

ಈ ನಡುವೆ ಕಿಚ್ಚ ಸುದೀಪ್‌ ಅವರು ಟ್ವಿಟರ್‌ನಲ್ಲಿ ʻಆಸ್ಕ್‌ ಮಿ ಎನಿಥಿಂಗ್‌ʼ ಸೆಷನ್‌ ನಡೆಸಿದ್ದಾರೆ. ಒಬ್ಬ ಅಭಿಮಾನಿ ಸುದೀಪ್‌ ಹಾಗೂ ದರ್ಶನ್‌ ಜೊತೆಗಿನ ಫೋಟೋವೊಂದನ್ನ ಹಂಚಿಕೊಂಡಿದ್ದು, ಇವರ ಬಗ್ಗೆ ಒಂದು ಮಾತು ಹೇಳಿ ಅಂತ ಹೇಳಿದ್ದಾರೆ. ಇದಕ್ಕೆ ಮರು ಉತ್ತರ ನೀಡಿರು ನಟ ಸುದೀಪ್ ಅವರು ಅವರಿಗೆ ಯಾವಾಗಲೂ ಒಳ್ಳೆಯದನ್ನೇ ಭಯಸುತ್ತೀನಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ಮಿಸ್‌ ಮಾಡದೇ ಓದಿ: ಕಿಷ್ಕಿಂದ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಕರೆ

ಇದನ್ನು ಮಿಸ್‌ ಮಾಡದೇ ಓದಿ: ಗ್ರಾಹಕರ ಹಕ್ಕು, ಜವಾಬ್ದಾರಿ ಅರಿವು ಹೊಂದಿ, ನ್ಯಾ. ರಾಜೇಶ್ ಎನ್.ಹೊಸಮನೆ

Darshan's wife is Vijayalakshmi
Darshan’s wife is Vijayalakshmi

ಇನ್ನೂ ಹುಬ್ಬಳ್ಳಿ ಪ್ರೀ-ರಿಲೀಸ್‌ ಈವೆಂಟ್‌ನಲ್ಲಿ ಸುದೀಪ್‌ ʻಯುದ್ದಕ್ಕೆ ಸಿದ್ದʼ ಇನ್ನೋದು ಪಡೆ ಎನ್ನುವ ಪದಗಳ ಬಳಕೆ ದರ್ಶನ್‌ ಅಭಿಮಾನಿಗಳಲ್ಲಿ ಆಕ್ರೋಶ ಮೂಡಿಸಿತ್ತು, ಅದಕ್ಕೆ ಸುದೀಪ್ ತಮ್ಮ ಹೇಳಿಕೆ ಬಗ್ಗೆ ನೇರವಾಗಿ ಅದು ಯಾರಿಗೆ ಹೇಳಲಾಗಿದೆ ಎನ್ನುವುದನ್ನು ತಿಳಿಸಿದ್ದರು, ಆದರೂ ಕೂಡ ದರ್ಶನ್ ಅಭಿಮಾನಿಗಳು ಅದನ್ನು ಒಪ್ಪಲು ಸಿದ್ದರಾಗಿಲ್ಲ. ಇದಲ್ಲದೇ ನಟ ದರ್ಶನ್ ಪತ್ನಿ ವಿಜಯ ಲಕ್ಷ್ಮಿ ಕೂಡ ಸುದೀಪ್‌ ಅವರನ್ನು ಹೆಸರಿಸದೇ ಹೇಳಿದ್ದ ಹೇಳಿಕೆ ಸುದೀಪ್‌ ಅಭಿಮಾನಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಅದು ಮೀತಿ ಮೀರಿ ನಡೆದುಕೊಳ್ಳುತ್ತಿದೆ ಕೂಡ.

darshan and vijayalakshmi
darshan and vijayalakshmi

ಕೆಲವು ಹಿರಿಯ ನಟರು ಮತ್ತು ಸುದೀಪ್‌ ಮತ್ತು ದರ್ಶನ್ ಆಪ್ತರು ಕೂಡ ಇಬ್ಬರ ನಡುವೆ ಏನಿಲ್ಲ…ಏನಿಲ್ಲ ಅಂತ ಹೇಳಿದ್ದರು ಇಬ್ಬರ ಅಭಿಮಾನಿಗಳು ಸುಮ್ನೆ ಆಗುತ್ತಿಲ್ಲ. ಈಗ ಸುದೀಪ್ ಅವರು ʻಆಸ್ಕ್‌ ಮಿ ಎನಿಥಿಂಗ್‌ʼ ಸೆಷನ್‌ ನಲ್ಲಿ ಅವರಿಗೆ ಯಾವಾಗಲೂ ಒಳ್ಳೆಯದನ್ನೇ ಭಯಸುತ್ತೀನಿ ಹೇಳಿರುವುದು ಈಗ ಅಭಿಮಾನಿಗಳಲ್ಲಿ ಸಮಾಧಾನವಾಗಲಿದ್ಯಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

Do you know what Sudeep said on Twitter after breaking his silence about Darshan