ಬೆಂಗಳೂರು: ನಟ, ನಿರ್ದೇಶಕ ಪ್ರೇಮ್ ಗೂ ವಿವಾದಗಳಿಗೂ ಗಳಸ್ಯ ಕಂಠಸ್ಯ ಸಂಬಂಧ ಎನ್ನುವುದು ಹಲವು ಬಾರಿ ಕಂಡು ಬರುತ್ತಿದೆ.
ತಮ್ಮ ಹೊಸ ಸಿನಿಮಾ ಕೆಡಿಯ ಜೋಡೆತ್ತು ಸಾಂಗ್ ರಿಲೀಸ್ ಆಗಿದ್ದು, ಹಾಡಿನಲ್ಲಿ ಬಳಕೆ ಮಾಡಿರುವ ಕೆಲವು ಪದಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಮಂದಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಹಾಡಿನಲ್ಲಿ ಬರುವ ರಂಡೆ-ಮುಂಡೆಯರು ಪದದ ಬಗ್ಗೆ ಹಲವು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನು ಮಿಸ್ ಮಾಡದೇ ಓದಿ: ಭಾರತದ ಸಂವಿಧಾನ ವಿಷಯ ಬೋಧಿಸಲು ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಈ ನಡುವೆ ಕಂಟ್ರೋಲ್ ಆಲ್ಟ್ ಡಿಲಿಟ್ ಎನ್ನುವ ಪೇಸ್‌ಬುಕ್ ಪೇಜಿನಲ್ಲಿ ತಗಡ್ ನನ್ಮಕ್ಕಳಿಗೆ ಅರ್ಥವೇ ಆಗಲ್ಲ ಅದ್ರಲ್ಲೇನ್ ತಪ್ಪದೆ ಅಂತ.ಮುಂಡೆ ಅನ್ನೋದು ತಪ್ಪಾಗಲ್ಲ. ವಿದವೆ ಅನ್ನೋದು ಅಲಂಕಾರಿಕ ಪದ, ಮುಂಡೆ ಅನ್ನೋದು ಆಡುಸೊಗಡು ಅಂತ ಒಪ್ಕೊಳೋಣ.
ಅವಳು ಮುಂಡೆ ಎಂಬುದಕ್ಕೂ, ಆ ಮುಂಡೆ ಕಣ್ಣು ಬೀಳಬಾರದು ಎಂಬುದಕ್ಕೂ ವ್ಯತ್ಯಾಸವಿದೆ ಅನ್ನೋದು ಅನೇಕರಿಗೆ ಗೊತ್ತಿಲ್ಲ.ರಂಡೆ-ಮುಂಡೆಯರು ಸಮಾಜದಲ್ಲಿ ಜನರ ನಡುವೆ ಬೆರೆಯಬಾರದು, ಅವರ ಕಣ್ಣು ಯಾರ ಮೇಲೂ ಬೀಳಬಾರದು ಎಂದು ಅವರನ್ನು ದೂರವಿಡುತ್ತಿದ್ದ ಕಾಲದ ಕಿಡಿನುಡಿಗಳನ್ನು ಈ ಕಾಲಕ್ಕೆ ತರಬಾರದು.
‘ಊರು ಅಂದ್ರೆ ಹೊಲಗೇರಿ ಇರುತ್ತೆ’ ಎಂಬ ಹಳೆ ಕಾಲದ ಗಾದೆ ಈಗಿನ ಕಾಲಕ್ಕೆ ಪ್ರಜ್ಞಾಪೂರ್ವಕವಾಗಿ ಬಳಸಬಾರದು, ಅಂತೆಯೇ ರಂಡೆ-ಮುಂಡೇರ ಕಣ್ಣು ಬೀಳಬಾರದು ಎಂಬುದು ಸಹ ದೌರ್ಜನ್ಯವೇ ಅಲ್ವಾ..?ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರಿಗೆ ತಲುಪೋತನಕ ಶೇರ್ ಮಾಡಿ ಪ್ರೆಂಡ್ಸ್. ಅಂತ ಬರೆದುಕೊಂಡಿದ್ದಾರೆ.
ಮತ್ತೊಬ್ಬರು ಪ್ರೇಮ್ ಸಿನಿಮಾದಲ್ಲಿ ಸಾಹಿತ್ಯ ಸಂಗೀತಕ್ಕೆ ಒಂದು ಜಾಗ ಇರತ್ತೆ, ವಿಶೇಷ ಇರತ್ತೆ! ಸಿನಿಮಾ ಹೆಚ್ಚು ಕಡಿಮೆ ಇದ್ರು, ಜಾನಪದ ಪದಗಳು, ಕೇಳಮ್ಮ, ಕೇಳಯ್ಯ, ಅಯ್ಯ, ಅಮ್ಮ ಅಂತ ಎಲ್ಲಾ ಇರತ್ತೆ, ಸಾಹಿತ್ಯ ಅವರದು ಅಲ್ಲಾ ಅಂದ್ರು ರಂಡೆ, ಮುಂಡೆ ಪದಗಳು ಬೇಕಿರಲಿಲ್ಲ ಅನಿಸ್ತು! ಪ್ರೆಮ್ಸ್ ಸಿನಿಮಾ ದಲ್ಲಿ ತಾಯಿಗೆ ಯಾವಾಗ್ಲೂ ವಿಶೇಷ ಸ್ಥಾನ ಇರತ್ತೆ, ತಂದೆ ಗಿಂತ! ಅನ್ನೋದು ನೆನಪಾಯ್ತು ಅಷ್ಟೇ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ ನಟ ಪ್ರೇಮ್‌ಗೂ ವಿವಾದಕ್ಕೂ ಆತ್ಮೀಯ ಸಂಬಂಧ ಇರೋದರಲ್ಲಿ ಅನುಮಾನವಿಲ್ಲ ಎನ್ನಲಾಗಿದೆ. ಪ್ರೇಮ್ ತಮ್ಮ ಸಿನಿಮಾಗಿಂತ ಹೆಚ್ಚು ಪಬ್ಲಿಸಿಟಿಗೆ ಸಲುವಾಗಿ ಈ ಹಿಂದೆ ಹಲವು ಸಾರಿ ಹೀಗೆ ಸದ್ದು ಮಾಡಿದ್ದಾರೆ. ಈಗ ಅದೇ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ತಮ್ಮ ವಿರುದ್ದು ಕೇಳಿ ಬರುತ್ತಿರುವ ಆರೋಪದ ಬಗ್ಗೆ ನಟ ಪ್ರೇಮ್ ಯಾವ ರೀತಿಯಲ್ಲಿ ಉತ್ತರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಗಮನಿಸಿ: ಇದು ಸಾಮಾಜಿಕ ಜಾಲತಣದಲ್ಲಿ ಕೇಳಿ ಬರುತ್ತಿರುವ ಸಂಗತಿಯಾಗಿದೆ ಹೊರತು, ಇದು ಯಾರ ವಿರುದ್ದವೂ ಅಲ್ಲ ಯಾರ ಪರವು ಅಲ್ಲ ಎನ್ನುವುದು ಗಮನಿಸಬೇಕಾಗಿದೆ.
Director Prem in controversy again, objection to the use of the word ‘KD’ in the song













Follow Me