ಬೆಂಗಳೂರು: ಸಾಮಾಜಿ ಜಾಲತಾಣದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಕೆಟ್ಟ ಕಾಮೆಂಟ್ ಬರುತ್ತಿರುವ ಹಿನ್ನಲೆಯಲ್ಲಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಇಂದು ಬೆಂಗಳೂರು ಪೊಲೀಸ್ ಅಯುಕ್ತರ ಕಚೇರಿಗೆ ಅವರು ಇಂದು ಮಧ್ಯಾಹ್ನ ಭೇಟಿ ನೀಡಿ ದೂರು ನೀಡಿದ್ದಾರೆ ಎನ್ನಲಾಗಿದೆ. ವಿಜಯಲಕ್ಷ್ಮಿಗೆ ಕೆಟ್ಟ ಕಾಮೆಂಟ್ ಮತ್ತು ಕೆಟ್ಟ ಸಂದೇಶವನ್ನು ಕಳುಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಅವುಗಳನ್ನು ಪಟ್ಟಿ ಮಾಡಿ ದೂರು ನೀಡಿದ್ದರು ಎನ್ನಲಾಗಿದೆ.
ಇದನ್ನು ಮಿಸ್ ಮಾಡದೇ ಓದಿ: ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿಗೆ ಲೋಕಾಯುಕ್ತ ಶಾಕ್
ಇದನ್ನು ಮಿಸ್ ಮಾಡದೇ ಓದಿ: ಮೈಸೂರಿನಲ್ಲಿ ಅಹಿಂದ ಸಮಾವೇಶಕ್ಕೆ ಮಹೂರ್ತಕ್ಕೆ ದಿನಾಂಕ ಫಿಕ್ಸ್
ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ವಾರ್: ಸುದೀಪ್ ನೀಡಿದ್ದ ಹೇಳಿಕೆಯೊಂದು ಬಾರಿ ಬಿರುಗಾಳಿಯನ್ನು ಎಬ್ಬಿಸಿತ್ತು, ಬಳಿಕ ವಿಜಯಲಕ್ಷ್ಮಿಕೂಡ ಹೆಸರನ್ನು ಉಲ್ಲೇಖಸದೇ ಸುದೀಪ್ ಅವರಿಗೆ ಅವಾಜ್ ಹಾಕಿದ್ದಾರೆ ಆಂತ ಸುದೀಪ್ ಅಭಿಮಾನಿಗಳು ಗುಟುರು ಹಾಕುತ್ತ ಇದ್ದರು. ದರ್ಶನ್ ಮತ್ತು ವಿಜಯಲಕ್ಷ್ಮಿಸಾಂಸಾರಿಕ ಜೀವನ ಕೆಟ್ಟಾಗಿ ನೆರವಿಗೆ ಬಂದದ್ದು ಸುದೀಪ್ ಅಂತ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಈ ನಡುವೆ ವಿಜಯಲಕ್ಷ್ಮಿ ಹೇಳಿದ್ದ ಹೇಳಿಕೆಗೆ ಅವರು ನನಗೆ ಹೇಳಿದ್ದರೆ, ನಾನು ನಲಪಾಡ್ ಮತ್ತು ರಾಜುಗೌಡ ಆ ಬಗ್ಗೆ ಹೇಳುತ್ತೇನೆ ಅಂತ ಹೇಳಿದ್ದರು.

ಈ ಹಿಂದೆ ನಟ ದರ್ಶನ್ ಬಗ್ಗೆ ಮಾತನಾಡಿದ್ದ ಸ್ಯಾಂಡಲ್‌ವುಡ್ ತಾರೆ ನಟಿ ರಮ್ಯರಿಗೆ ನಟ ದರ್ಶನ್ ಅಭಿಮಾನಿಗಳು ಅಂತ ಹೇಳಿಕೊಂಡಿದ್ದ ಹಲವು ಮಂದಿ ಕೆಟ್ಟ ಕಾಮೆಂಟ್ ಹಾಗೂ ಸಂದೇಶವನ್ನು ಕಳುಹಿಸಿದ್ದರು, ಈ ಬಗ್ಗೆ ನಟಿ ರಮ್ಯಾ ಅವರು ಪೊಲೀಸರಿಗೆ ದೂಉ ನೀಡಿದ್ದರು, ದೂರು ಪಡೆದುಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಚಾರ್ಚ್ ಶೀಟ್ ಸಲ್ಲಿದ್ದಾರೆ. ಸದ್ಯ ಪ್ರಕರಣ ನ್ಯಾಯಾಲದಯಲ್ಲಿದೆ ಎನ್ನುವದನ್ನು ಸ್ಮರಿಸಿಕೊಳ್ಳಬಹುದಾಗಿದೆ. ಸದ್ಯ ಸುದೀಪ್ ಅಭಿಮಾನಿಗಳು ಎನ್ನಲಾಗುತ್ತಿರುವವ ವಿರುದ್ದ ಕೂಡ ದೂರು ದಾಖಲಾಗಿದ್ದು, ಪೋಲಿಸರ ತನಿಖೆ ಬಳಿಕ ಮಾತ್ರ ಸತ್ಯ ತಿಳಿದು ಬರಲಿದೆ.

ಇದಲ್ಲದೇ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಮೆಂಟ್ ಮಾಡಿದವರ ವಿರುದ್ಧ ಎಫ್ಐಆರ್ ಮಾಡಲಾಗಿತ್ತು.
Darshan’s wife complained to the police about Vijayalakshmi’s bad comment













Follow Me