Heart Attack: ಕರ್ನಾಟಕದಲ್ಲಿ ಹೃದಯಾಘಾತಕ್ಕೆ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆ ಇದು, ಫೋನ್‌ ನಂಬರ್ ಸೇವ್ ಮಾಡ್ಕೊಳ್ಳಿ!

Madhusudan Sai Medical and Research Institute

ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿಗೆ ದಿನದಿಂದ ದಿನಕ್ಕೆ ಹೃದಯಘಾತದ (Heart Attack) ಸಂಖ್ಯೆ ಹೆಚ್ಚಳವಾಗಿದ್ದು, ಜನತೆಯಲ್ಲಿ ಆತಂಕದ ವಾತವಾರಣವನ್ನು ನಿರ್ಮಾಣ ಮಾಡುತ್ತಿದೆ.

ಇದಲ್ಲದೇ ಇಂತಹ ಸನ್ನಿವೇಶದಲ್ಲಿ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಕೂಡ ಬೇಕಾಗುತ್ತದೆ. ಈ ನಡುವೆ ರಾಜ್ಯದ ಒಂದು ಆಸ್ಪತ್ರೆ (Hospital) ಉಚಿತ ಚಿಕಿತ್ಸೆ ನೀಡುತ್ತಿದೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಈ ಬಗ್ಗೆ ನಾವು ಮಾಹಿತಿಯನ್ನು ನೀಡುತ್ತಿದ್ದೇವೆ. ಮಧುಸೂದನ ಸಾಯಿ ವೈದ್ಯಕೀಯ ಹಾಗೂ ಸಂಶೋಧನಾ ಸಂಸ್ಥೆಯು ಹೃದ್ರೋಗ (heart disease) ವಿಭಾಗದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಹೃದ್ರೋಗ ತಜ್ಞರು ಕೆಲಸ ಮಾಡುತ್ತಿದ್ದು, ಎಲ್ಲ ವರ್ಗದ ಜನರಿಗೆ ಯಾವುದೇ ಶುಲ್ಕವಿಲ್ಲದೆಯೇ ಸಂಪೂರ್ಣ ಉಚಿತವಾಗಿ ಚಿಕಿತ್ಸೆ (Free treatment) ನೀಡಲಾಗುತ್ತಿದೆ.

ಇದನ್ನು ಮಿಸ್‌ ಮಾಡದೇ ಓದಿ: ನಿಮ್ಮ ಆರ್‌ಸಿ ಕಳೆದುಹೋಗಿದೆಯೇ? ಕೇವಲ 2 ನಿಮಿಷಗಳಲ್ಲಿ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ..!

Madhusudan Sai Medical and Research Institute heart

ಇಲ್ಲಿ ಈಗಾಗಲೇ ರಾಜ್ಯ, ಹೊರ ರಾಜ್ಯದ ಮಕ್ಕಳು, ನಾಗರಿಕರು ಕೂಡ ಸೇವೆಯನ್ನು ಪಡೆದುಕೊಡಿದ್ದು, ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ.

ಇದನ್ನು ಮಿಸ್‌ ಮಾಡದೇ ಓದಿ: ಈ ಆರೋಗ್ಯ ಸಮಸ್ಯೆ ಇರುವವರು ಕಾಫಿ ಕುಡಿಯಬೇಡಿ…!

Madhusudan Sai Medical and Research Institute heart

ಅಂದ ಹಾಗೇ ಇಲ್ಲಿ ಪೇಸ್ ಮೇಕರ್ ಆಂಜಿಯೋಗ್ರಫಿ, ಆಂಜಿಯೋಪ್ಲಾಸ್ಟಿ, ಬೈಪಾಸ್ ಶಸ್ತ್ರಚಿಕಿತ್ಸೆ, , ಕವಾಟ ದುರಸ್ತಿ ಮತ್ತು ಬದಲಿ ಅವಯವಗಳ ಶಸ್ತ್ರಚಿಕಿತ್ಸೆ, ಜನ್ಮಜಾತ ಹೃದ್ರೋಗ ಶಸ್ತ್ರಚಿಕಿತ್ಸೆ (Cardiac surgery) ಸೇರಿದಂತೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಉಚಿತವಾಗಿ ನೀಡಲಾಗುತ್ತಿದೆಯಂತೆ. ಸಂಪರ್ಕ ಸಂಖ್ಯೆ ಹೀಗಿದೆ: 08156–275811 (ಬೆಳಿಗ್ಗೆ 10ರಿಂದ ಸಂಜೆ 4). ವೆಬ್‌ಸೈಟ್: www.smsimsr.org ವಿಳಾಸ: SMSIMSR, ಸತ್ಯ ಸಾಯಿ ಗ್ರಾಮ, ಮುದ್ದೇನಹಳ್ಳಿ, ಜಿಲ್ಲೆ, ಚಿಕ್ಕಬಳ್ಳಾಪುರ, ಕರ್ನಾಟಕ 562101.

ಇದನ್ನು ಮಿಸ್‌ ಮಾಡದೇ ಓದಿ: ರೈತರಿಗೆ ಕುರಿ, ಕೋಳಿ, ಮೇಕೆ ಸಾಕಾಣಿಕಲು ಕೇಂದ್ರ ಸರ್ಕಾರದಿಂದ ಸಿಗಲಿದೆ 50 ಲಕ್ಷ ತನಕ ಧನಸಹಾಯ..!

ಈ ಸುದ್ದಿಯನ್ನು ಹೆಚ್ಚಿನ ಜನರಿಗೆ ಹಂಚಿಕೆ ಮಾಡಿ ಸಹಾಯವಾಗುವುದು.