ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಧ್ರುವಂತ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.
ಇದನ್ನು ಮಿಸ್ ಮಾಡದೇ ಓದಿ: ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶ
ಇದನ್ನು ಮಿಸ್ ಮಾಡದೇ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ 2026ರ ‘ಗಳಿಕೆ ರಜೆ ನಗದೀಕರಣ’ ಮಹತ್ವದ ಆದೇಶ
ಬಿಗ್ ಬಾಸ್ ಮನೆ ಜರ್ನಿ ಇನ್ನೇನು ಮೂರು ನಾಲ್ಕು ದಿನದಲ್ಲಿ ಮುಗಿಯಲಿದ್ದು, ಈ ಹಂತದಲ್ಲಿ ಬಿಗ್ ಬಾಸ್ ಮನೆಯಿಂದ ಹಲವು ಮಂದಿ ಮಿಡ್‌ನೈಟ್‌ನಲ್ಲಿ ಹೊರ ಬರಲಿದ್ದಾರೆ ಎನ್ನಲಾಗಿದೆ.ಬಿಗ್ ಬಾಸ್ ಮನೆಯಿಂದ ರಕ್ಷಿತಾ ಹಾಗೂ ಧ್ರುವಂತ್ ಸೀಕ್ರೆಟ್ ಮನೆಗೆ ತೆರಳಿ ಒಂದು ವಾರಗಳ ಕಾಲ ಅಲ್ಲೇ ಇದ್ದು ಬಿಗ್ ಬಾಸ್ ಮನೆಯಲ್ಲಿ ಏನೆಲ್ಲ ನಡೆಯುತ್ತದೆ ಎನ್ನುವುದನ್ನು ನೋಡುತ್ತಿದ್ದರು ಬಳಿಕ ಅವರು ಮನೆಗೆ ವಾಪಸ್ಸು ಆಗಿದ್ದರು ಕೂಡ.

ಈಗ ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಪ್ರಕಾರ ಧ್ರುವಂತ್ ಔಟ್ ಆಗಿದ್ದಾರೆ ಎನ್ನಲಾಗ್ತಿದೆ. ಆದರೆ ಎಲಿಮಿನೇಷನ್ ಬಗ್ಗೆ ಅಂತಿಮವಾಗಿ ಏನಾಗುತ್ತದೆ ಎಂಬುದು ಅಧಿಕೃತ ಎಪಿಸೋಡ್ ಪ್ರಸಾರವಾದ ಮೇಲೆ ಮಾತ್ರ ಮಾತ್ರ ಅಧಿಕೃತವಾಗಿ ತಿಳಿದು ಬರಲಿದೆ.ಪ್ರಸ್ತುತ ಮನೆಯಲ್ಲಿ ಏಳು ಮಂದಿ ಸ್ಪರ್ಧಿಗಳು ಉಳಿದಿದ್ದಾರೆ. ಈ ನಡುವೆ, ಫಿನಾಲೆ ವೇದಿಕೆ ಏರುವ ಮೊದಲೇ ಮತ್ತೊಬ್ಬ ಸ್ಪರ್ಧಿ ಮನೆಯಿಂದ ಹೊರಬಂದವರು ಯಾರು ಎನ್ನುವುದನ್ನು ಕಾದು ನೋಡಬೇಕಾಗಿದೆ.
ಸದ್ಯ ಧ್ರುವಂತ್ ಹೊರಬಂದರೆ ಎನ್ನುವ ಮಾಹಿತಿ ಅಧಿಕೃತವಾದರೇ ಮನೆಯಲ್ಲಿ ಉಳಿದ ಅಶ್ವಿನಿ, ಗಿಲ್ಲಿ, ರಘು, ರಕ್ಷಿತಾ, ಕಾವ್ಯಾ ಮತ್ತು ಧನುಶ್ ಬಿಗ್ ಬಾಸ್ ಗೆಲ್ಲುವ ರೇಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವೆಲ್ಲದರ ನಡುವೆ ಇಂದು ಬಿಗ್ ಬಾಸ್ ಮನೆಯಿಂದ ಯಾರು ಹೊರ ಬರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
Bigg Boss Kannada season 12













Follow Me