ಹಾಸನ : ಸ್ಯಾಂಡಲ್‌ವುಡ್‌ನ ಕೊತ್ತಲವಾಡಿ ಸಿನಿಮಾ ನಿರ್ಮಾಪಕಿ ಹಾಗೂ ನಟ ಯಶ್ ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ ಅವರು ಅಕ್ರಮವಾಗಿ ನಿರ್ಮಿಸಿದ್ದ ಅಕ್ರಮ ಕಾಂಪೌಂಡ್ ತೆರವು ಮಾಡಿರುವ ಘಟನೆ ನಡೆದಿದೆ.
ಘಟನೆ ಹಿನ್ನಲೆ : ಪುಷ್ಪಾ ಅರುಣ್‌ಕುಮಾರ್ ಅವರು ಹಾಸನ ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ತಮ್ಮ ನಿವಾಸದ ಪಕ್ಕದಲ್ಲಿದ್ದ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಅಲ್ಲಿ ಕಾಂಪೌಂಡ್‌ನ್ನು ನಿರ್ಮಿಸಿಕೊಂಡಿದ್ದರು ಎನ್ನುವ ಆರೋಪ ಕೇಳಿ ಬಂದಿತು.

ಪ್ರಕರಣ ಸಂಬಂಧ ಕಾಂಪೌಂಡ್‌ನ್ನು ಭೂಮಾಲೀಕ ದೇವರಾಜು ಎನ್ನುವವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ದೇವರಾಜು ಅವರಿಗೆ ಲಕ್ಷ್ಮಮ್ಮ ಎನ್ನುವವರು ಜಿಪಿಎ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ಈ ನಡುವೆ ಅವರು ಸುಮಾರು ಒಂದೂವರೆ ಸಾವಿರ ಅಡಿ ಜಾಗದಲ್ಲಿ ಅಕ್ರಮವಾಗಿ ಕಾಂಪೌಂಡ್ ಹಾಕಿದ್ದಾರೆ ಎಂದು ದೇವರಾಜು ಆರೋಪಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ರು. ಇನ್ನೂ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ದೇವರಾಜು ಪರವಾಗಿ ತೀರ್ಪು ನೀಡಿದೆ. ನಾವು ನ್ಯಾಯಾಲಯದ ತೀರ್ಪಿನಂತೆ ಅಕ್ರಮವಾಗಿ ಕಟ್ಟಿದ್ದ ಕಾಂಪೌಡ್ ಅನ್ನು ತೆರುವು ಗೊಳಿಸಿದ್ದೇವೆ ಅಂತ ದೇವರಾಜು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನೂ ಪುಷ್ಪಾ ಅರುಣ್ ಕುಮಾರ್ ಸ್ಯಾಂಡಲ್‌ವುಡ್ ಯಾಗಿ ಗುರುತಿಸಿಕೊಂಡಿದ್ದರು, ಅವರು ಕೊತ್ತಲವಾಡಿ ಸಿನಿಮಾದ ಮೂಲಕ ನಿರ್ಮಾಪಕಿಯಾಗಿ ಕಾಣಿಸಿಕೊಂಡಿದ್ದರು, ಸಿನಿಮಾದ ಪ್ರಚಾರದ ವೇಳೆ ಅವರು ನೀಡಿದ್ದ ಕೆಲವು ಹೇಳಿಕೆಗಳು ವಿವಾದವನ್ನು ಎಬ್ಬಿಸಿದ್ದವು ಕೂಡ, ಸಿನಿಮಾ ಹೆಚ್ಚು ಸದ್ದು ಮಾಡದೇ ಹೋದರು ಕೂಡ ಪುಷ್ಪಾ ಅರುಣ್ ಕುಮಾರ್ ಅವರ ಮಾತುಗಳು ವೈರಲ್ ಆಗಿದ್ದು ಸುಳ್ಳಲ್ಲ. ಖುದ್ದು ತಮ್ಮ ತಂಗಿ ಮಗಳಾದ ದೀಪಿಕಾ ದಾಸ್ ಬಗ್ಗೆ ಹೇಳಿದ್ದ ಮಾತು ನಾನಾ ಸ್ವರೂಪವನ್ನು ಪಡೆದುಕೊಂಡಿತ್ತು, ಅದಾದ ಬಳಿಕ ದೀಪಿಕಾ ದಾಸ್ ಕೂಡ ತಮ್ಮ ದೊಡ್ಡಮ್ಮ ಅವರಿಗೆ ಟಾಂಗ್ ನೀಡಿದ್ದರು. ಬಳಿಕ ಎಲ್ಲವೂ ಕೂಡ ತಣ್ಣಾಗಿದೆ.
Hassan: There has been an incident where Pushpa Arunkumar, the producer of Kotthalwadi movie of Sandalwood and mother of actor Yash, has vacated the illegal compound.













Follow Me