Cold wave | ರಾಜ್ಯದಲ್ಲಿ ತೀವ್ರ ‘ಶೀತಗಾಳಿ’ ಹಿನ್ನಲೆ: ಈ ಸಲಹೆಗಳನ್ನು ಪಾಲಿಸುವಂತೆ ಸರ್ಕಾರ ಸೂಚನೆ

cold in karnataka
cold in karnataka

ಬೆಂಗಳೂರು: ರಾಜ್ಯದಲ್ಲಿ ತೀವ್ರ ಶೀತಗಾಳಿ ಬಿಸುತ್ತಿದ್ದು ಈ ಮೂಲಕ ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ರಾಜ್ಯದ ನಾನಾ ಕಡೆಗಳಲ್ಲಿ ಅಲ್ಲಲ್ಲಿ ಚಳಿಯು ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಕೆಲ ಸಲಹೆಗಳನ್ನು ನೀಡಿದೆ. ಅವುಗಳನ್ನು ಚಳಿಯ ಈ ಸಮಯದಲ್ಲಿ ತಪ್ಪದೇ ಪಾಲಿಸುವಂತೆ ರಾಜ್ಯದ ಜನತೆಗೆ ಸೂಚಿಸಿದೆ.

ಈ ಕುರಿತಂತೆ ಸರ್ಕಾರವು ರಾಜ್ಯಾದ್ಯಂತ ಪ್ರಸ್ತುತ ಬೀಸುತ್ತಿರುವ ತೀವ್ರ ಶೀತಗಾಳಿಯು ಬೀಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅಗತ್ಯ ಮುನ್ನೆಚ್ಚರಿಕೆಯ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಇದನ್ನು ಮಿಸ್‌ ಮಾಡದೇ ಓದಿ: ‘ಗೃಹಲಕ್ಷ್ಮೀ’ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಇಂದಿನಿಂದ ಖಾತೆಗೆ 24ನೇ ಕಂತಿನ ಹಣ ಜಮೆ

ಇದನ್ನು ಮಿಸ್‌ ಮಾಡದೇ ಓದಿ: ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚ ಸುದೀಪ್‌ ದರ್ಶನ್ ಫ್ಯಾನ್ಸ್ ಸಮರ!

ಆದ್ದರಿಂದ ಶೀತಗಾಳಿಯಿಂದಾಗುವ ಆರೋಗ್ಯ ಸಮಸ್ಯೆಗಳು ಹಾಗೂ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಸಾರ್ವಜನಿಕರು ರಾಜ್ಯ/ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಈ ಕೆಳಗಿನಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಕೊಳ್ಳಲು ತಿಳಿಸಿದೆ.

ಈ ಸಲಹೆಗಳನ್ನು ತಪ್ಪದೇ ಪಾಲಿಸಿ:

ಬೆಚ್ಚಗಿರಿ: ದಪ್ಪನಾದ ಒಂದೇ ಬಟ್ಟೆಯ ಬದಲಿಗೆ, ಹಲವು ಪದರಗಳ ಸಡಿಲವಾದ, ಹಗುರವಾದ, ಉಣ್ಣೆಯ ಬಟ್ಟೆಗಳನ್ನು ಧರಿಸಿ.

ಕೈಕಾಲುಗಳನ್ನು ಸಂಪೂರ್ಣವಾಗಿ ಮುಚ್ಚಿ: ಟೋಪಿ/ಮಫ್ಲರ್ (ದೇಹದ ಮುಖ್ಯ ಶಾಖ ತಲೆಯ ಮೂಲಕ ನಷ್ಟವಾಗುತ್ತದೆ), ಬೆಚ್ಚಗಿನ ಕಾಲುಚೀಲಗಳು ಮತ್ತು ಜಲನಿರೋಧಕ (waterproof) ಶೂಗಳನ್ನು ಬಳಸಿ.

karnataka weather

ಆಹಾರ ಮತ್ತು ನೀರು

ದೇಹವನ್ನು ಹೈಡ್ರೆಟ್ ಆಗಿಡಲು ಬೆಚ್ಚಗಿನ ದ್ರವಗಳನ್ನು (ನೀರು, ಗಿಡಮೂಲಿಕೆ ಚಹಾ ಮತ್ತು ಸೂಪ್ ಇತ್ಯಾದಿ) ನಿಯಮಿತವಾಗಿ ಕುಡಿಯಿರಿ, ಬಾಯಾರಿಕೆಗಾಗಿ ಕಾಯಬೇಡಿ. ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ದೇಹದ ಶಾಖವನ್ನು ಹೆಚ್ಚಿಸಲು ವಿಟಮಿನ್-ಸಿ ಸಮ್ರದ ಹಣ್ಣುಗಳು ಮತ್ತು ತರಕಾರಿಗಳಂತಹ ಆರೋಗ್ಯಕರ ಆಹಾರಗಳನ್ನು ಸೇವಿಸಿ.
ಆಶ್ರಯ ಮತ್ತು ಸುರಕ್ಷತೆ

ಸಾಧ್ಯವಾದಷ್ಟು ಮನೆಯೊಳಗೆ ಇರಿ, ವಿಶೇಷವಾಗಿ ಹೆಚ್ಚು ಚಳಿಯಿರುವಸಮಯದಲ್ಲಿ (ಬೆಳಗಿನ ಜಾವ ಮತ್ತುತಡರಾತ್ರಿ) ದುರ್ಬಲರ ಬಗ್ಗೆ ಗಮನ ಕೊಡಿ. ವೃದ್ಧರು, ಮಕ್ಕಳು ಮತ್ತು ಶಿಶುಗಳು ಸಾಕಷ್ಟು ಬೆಚ್ಚಗಿರಲು ನಿಯಮಿತವಾಗಿ ಅವರನ್ನು ಪರಿಶೀಲಿಸಿ.

ಆರೋಗ್ಯ ಅರಿವು

ಹೈಪೋ ಥ ರ್ಮಿಯಾ (ನಡುಕ, ಗೊಂದಲ, ತೊದಲುವಮಾತು) ಮತ್ತು ಫ್ರಾಸ್ಟ್‌ ಬೈಟ್ (ನಿಶೇಷತೆ, ಬಿಳಿ ಅಥವಾ ಮೇಣದಂತಹ ಚರ್ಮ) ನಂತಹ ಚಳಿ-ಸಂಬಂಧಿತ ಕಾಯಿಲೆಗಳ ಲಕ್ಷಣಗಳನ್ನು ತಿಳಿದುಕೊಳ್ಳಿ.

ಚಳಿ ಮತ್ತು ಒಣಗಾಳಿಯಿಂದ ಚರ್ಮಬಿರುಕು ಬಿಡುವುದನ್ನು ತಡೆಯಲು ಎಣ್ಣೆ, ಪೆಟ್ರೋಲಿಯಂಜೆಲ್ಲಿ ಅಥವಾ ಕ್ರೀಮ್‌ನಿಂದ ನಿಯಮಿತವಾಗಿ ಚರ್ಮವನ್ನು ತೇವಗೊಳಿಸಿ.

ದೂರದರ್ಶನ, ರೇಡಿಯೋ ಅಥವಾ ಪತ್ರಿಕೆಗಳ ಮೂಲಕ ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ದೈನಂದಿನ ಹವಾಮಾನ ಮಾಹಿತಿಯನ್ನು ಗಮನಿಸಿ.

Karnataka Weather Report
Karnataka Weather Report

ಶೀತಗಾಳಿಯ ವೇಳೆ ಏನು ಮಾಡಬಾರದು (The DON’Ts): ತಪ್ಪಿಸ ಬೇಕಾದ ನಿರ್ದಿಷ್ಟ ಕ್ರಮಗಳು

ಆರೋಗ್ಯ ಅಪಾಯಗಳು:  ಮದ್ಯಪಾನ ಮಾಡಬೇಡಿ. ಇದು ಬೆಚ್ಚಗಿನ ಭಾವನೆಯನ್ನು ನೀಡುತ್ತದೆ ಎಂಬುದು ಸುಳ್ಳು. ಆದರೆ ವಾಸ್ತವವಾಗಿ ನಿಮ್ಮ ದೇಹದ ಮುಖ್ಯ ತಾಪಮಾನವನ್ನು ಕಡಿಮೆ ಮಾಡುತ್ತದೆ. ಹೈಪೋಥರ್ಮಿಯಾದ ಅಪಾಯವನ್ನು ಹೆಚ್ಚಿಸುತ್ತದೆ.

ನಡುಕವನ್ನು ನಿರ್ಲಕ್ಷಿಸಬೇಡಿ. ಇದು ನಿಮ್ಮ ದೇಹವು ಶಾಖವನ್ನು ಕಳೆದುಕೊಳ್ಳುತ್ತಿದೆ ಎಂಬುದರ ಮೊದಲ ಚಿಹ್ನೆ, ತಕ್ಷಣ ಮನೆಯೊಳಗೆ ಹೋಗಿ.
ಫ್ರಾಸ್ಟ್‌ ಬೈಟ್ ಆರೈಕೆ : ಫ್ರಾಸ್ಟ್ ಬೈಟ್ ಅಥವಾ ಚಳಿಯಿಂದ ಮರಗಟ್ಟಿದ ಚರ್ಮದ ಪ್ರದೇಶವನ್ನು ಉಜ್ಜಬೇಡಿ ಅಥವಾ ಮಸಾಜ್ಞಾಡಬೇಡಿ. ಇದು ತೀವ್ರವಾದ ಅಂಗಾಂಶ ಹಾನಿಯನ್ನು ಉಂಟುಮಾಡಬಹುದು.

ಫ್ರಾಸ್ಟ್ ಬೈಟ್ ಆದಚರ್ಮವನ್ನು ಬೆಚ್ಚಗಾಗಿಸಲು ನೇರವಾದ, ತೀವ್ರವಾದ ಶಾಖವನ್ನು (ಹೀಟಿಂಗ್ಸ್‌ಾಡ್, ಬೆಂಕಿ ಅಥವಾ ಬಿಸಿನೀರು ಬಳಸಬೇಡಿ, ಏಕೆಂದರೆ ನಿಶ್ಲೇಷಗೊಂಡ ಪ್ರದೇಶವು ಸುಲಭವಾಗಿ ಸುಟ್ಟು ಹೋಗಬಹುದು.

ಒಳಾಂಗಣ ಸುರಕ್ಷತೆ : ಗಾಳಿಯಿಲ್ಲದ ಮುಚ್ಚಿದ ಕೋಣೆಯಲ್ಲಿ ಕಲ್ಲಿದ್ದಲು, ಕಟ್ಟಿಗೆ ಅಥವಾ ಕ್ಯಾಂಡಲ್‌ಗಳನ್ನು ಉರಿಸಬೇಡಿ. ಇದು ಮಾರಣಾಂತಿಕ ಕಾರ್ಬನ್ಮಾನಾಷಕ್ಕೆ
ಕಾರಣವಾಗಬಹುದು. ಬೆಂಕಿ ಅಥವಾ ತಾಪನ ಸಾಧನವನ್ನು ಗಮನಿಸದೆ ಬಿಡಬೇಡಿ.

ಹೊರಾಂಗಣ ಚಟುವಟಿಕೆ: ಹೆಚ್ಚು ದೈಹಿಕ ಶ್ರಮ ಮಾಡಬೇಡಿ (ಉದಾಹರಣೆಗೆ, ತೀವವಾದ ಹೊರಾಂಗಣ ಕೆಲಸ) ಹೆಚ್ಚು ಬೆವರುವಿಕೆಯು ನಿಮ್ಮ ಬಟ್ಟೆಗಳನ್ನು ಒದ್ದೆ ಮಾಡಿ ವೇಗವಾಗಿ ತಣ್ಣಗಾಗಲು ಕಾರಣವಾಗಬಹುದು