ಅನಧಿಕೃತವಾಗಿ ಗೃಹಬಳಕೆ ಸಿಲಿಂಡರ್‌ಗಳನ್ನು ಉಪಯೋಗಿಸಿದರೆ ಸೂಕ್ತ ಕ್ರಮ

gas cylinder
gas cylinder

ರಾಮನಗರ : ಚನ್ನಪಟ್ಟಣ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಲ್ಯಾಣ ಮಂಟಪಗಳು, ಹೋಟೆಲ್‌ಗಳು, ಬೇಕರಿಗಳು, ಬೀದಿ ಬದಿಯ ತಿನಿಸು ವ್ಯಾಪಾರದ ಗಾಡಿಗಳಲ್ಲಿ ಗೃಹಬಳಕೆ ಸಿಲಿಂಡರ್‌ಗಳನ್ನು ಉಪಯೋಗಿಸುತ್ತಿರುವುದು ತಿಳಿದುಬಂದಿದೆ. ಇದು ಲಿಕ್ವಿಪೈಯ್ಡ್ ಪೆಟ್ರೋಲಿಂ ಗ್ಯಾಸ್ (ರೆಗುಲೇಷನ್ ಆಫ್ ಸಪ್ಲೆöÊ ಮತ್ತು ಡಿಸ್ಟಿçಬ್ಯೂಷನ್) ಆರ್ಡರ್-2000 ಅನ್ನು ಉಲ್ಲಂಘಿಸಿದಂತಾಗುತ್ತದೆ.

ಆದ್ದರಿಂದ ಎಲ್ಲಾ ಕಲ್ಯಾಣ ಮಂಟಪಗಳು, ಹೋಟೆಲ್‌ಗಳು, ಬೇಕರಿಗಳು, ಬೀದಿ ಬದಿಯ ತಿನಿಸು ವ್ಯಾಪಾರದ ಗಾಡಿಗಳ ಮಾಲೀಕರು/ವ್ಯವಸ್ಥಾಪಕರು ಯಾವುದೇ ಕಾರಣಕ್ಕೂ ಗೃಹ ಬಳಕೆ ಸಿಲಿಂಡರ್‌ಗಳನ್ನು ಉಪಯೋಗಿಸುವಂತಿಲ್ಲ. ಇದು ಕಾನೂನು ಬಾಹಿರವಾಗಿರುತ್ತದೆ.

lpg gas cylinder
lpg gas cylinder

ಈ ರೀತಿ ಗೃಹ ಬಳಕೆ ಸಿಲಿಂಡರ್‌ಗಳನ್ನು ಉಪಯೋಗಿಸುತ್ತಿರುವ ಬಗ್ಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ತನಿಖೆ ನಡೆಸಲಾಗುವುದು. ಆ ವೇಳೆಯಲ್ಲಿ ಗೃಹಬಳಕೆ ಸಿಲಿಂಡರ್‌ಗಳನ್ನು ಉಪಯೋಗಿಸುತ್ತಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಇದು ಲಿಕ್ವಿಪೈಯ್ಡ್ ಪೆಟ್ರೋಲಿಂ ಗ್ಯಾಸ್ (ರೆಗುಲೇಷನ್ ಆಫ್ ಸಪ್ಲೆöÊ ಮತ್ತು ಡಿಸ್ಟಿçಬ್ಯೂಷನ್) ಆರ್ಡರ್-2000 ಆದೇಶದಂತೆ ಕ್ರಮ ತೆಗೆದುಕೊಂಡು ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಲಾಗುವುದು. ಆದ್ದರಿಂದ ಎಲ್ಲಾ ಕಲ್ಯಾಣ ಮಂಟಪಗಳು, ಹೋಟೆಲ್‌ಗಳು, ಬೇಕರಿಗಳು, ಬೀದಿ ಬದಿಯ ತಿನಿಸು ವ್ಯಾಪಾರದ ಗಾಡಿಗಳಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಮಾತ್ರ ಉಪಯೋಗಿಸುವಂತೆ ಚನ್ನಪಟ್ಟಣ ತಾಲ್ಲೂಕಿನ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಿಡ್‌ಕರ್ ವಸ್ತುಗಳ ಮೇಲೆ ಶೇ.20ರಷ್ಟು ರಿಯಾಯಿತಿ

ರಾಮನಗರ: ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃಧ್ಧಿ ನಿಗಮದ ರಾಮನಗರ (ಕಂದಾಯ ಭವನದ ಆವರಣದಲ್ಲಿರುವ) ಮಾರಾಟ ಮಳಿಗೆಯಲ್ಲಿ ಹೊಸವರ್ಷ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜ. 18ರ ವರೆಗೆ ಮಳಿಗೆಯಲ್ಲಿರುವ ಪುರುಷ ಮತ್ತು ಮಹಿಳೆಯರ ಚರ್ಮದ ಶೂಗಳು, ಚಪ್ಪಲಿಗಳು ಹಾಗೂ ಮಹಿಳೆಯರ ವ್ಯಾನಿಟಿ ಬ್ಯಾಗ್‌ಗಳು, ಸ್ಲಿಂಗ್ ಬ್ಯಾಗ್, ವ್ಯಾಲೆಟ್ ಇನ್ನು ಇತರೆ ಅಪ್ಪಟ ಚರ್ಮ ವಸ್ತುಗಳ ಮೇಲೆ ಶೇ. 20ರಷ್ಟು ರಿಯಾಯಿತಿಯಂತೆ ಮಾರಾಟ ಮಾಡಲಾಗುತ್ತದೆ.

ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಸದುಪಯೋಗ ಪಡೆದುಕೊಳ್ಳಬೇಕೆಂದು ರಾಮನಗರ ಮಾರಾಟ ಮಳಿಗೆಯ ವ್ಯವಸ್ಥಾಪಕ ಚಿದಾನಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.