ಸಿ.ಸಿ.ಟಿ.ವಿ. ಅಳವಡಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ

cctv installation and servicing
cctv installation and servicing

ಬೆಂಗಳೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಯುತ್ತಿರುವ ರುಡ್‌ಸೆಟ್ ಸಂಸ್ಥೆಯಿಂದ 2026ರ ಜನವರಿ 19 ರಿಂದ ಸಿ.ಸಿ.ಟಿ.ವಿ. ಅಳವಡಿಕೆ ಮತ್ತು ಸೇವಾ ಕಾರ್ಯಕ್ರಮ ಕುರಿತ 13 ದಿನಗಳ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕರು ಅರ್ಜಿ ಸಲ್ಲಿಸಬಹುದು.

ಇದನ್ನು ಮಿಸ್‌ ಮಾಡದೇ ಓದಿ: ಆನ್‌ಲೈನ್‌ನಲ್ಲಿ ಪ್ಯಾನ್‌ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವ ಹಂತ-ಹಂತದ ಪ್ರಕ್ರಿಯೆ ಹೀಗಿದೆ

ಇದನ್ನು ಮಿಸ್‌ ಮಾಡದೇ ಓದಿ: ಒಮ್ಮೆ ಹಣವನ್ನು ಹೂಡಿಕೆ ಮಾಡಿ, ನಂತರ ಬಡ್ಡಿಯಿಂದ ₹ 2 ಲಕ್ಷ ಗಳಿಸಿ

ಆಸಕ್ತರು 18 ರಿಂದ 50 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು.

cctv installation and servicing
cctv installation and servicing

ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು. ತರಬೇತಿಯ ಅವಧಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.

cctv installation and servicing
cctv installation and servicing

ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಥವಾ ಮೊಬೈಲ್ ಸಂಖ್ಯೆ: 9481506564, 9380162042, 9113880324 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಮನಗರ: 23ರಂದು ವಿದ್ಯುತ್ ವ್ಯತ್ಯಯ:  66/11ಕೆವಿ ಜಾಲಮಂಗಲ ವಿದ್ಯುತ್ ಉಪಕೇಂದ್ರದ ಮಾರ್ಗದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಜಾಲಮಂಗಲ, ತಾಳವಾಡಿ, ಕುರುಬರಹಳ್ಳಿ, ತಡಿಕವಾಗಿಲು, ಅಕ್ಕೂರು, ವಿರುಪಸಂದ್ರ, ಹೊಂಬೇಗೌಡನದೊಡ್ಡಿ, ತಿರುಮಲೇಗೌಡನದೊಡ್ಡಿ, ಕಾಂಚಿದೊಡ್ಡಿ, ವಿಜಯಪ್ಪನದೊಡ್ಡಿ, ಆದಿಶಕ್ತಿಹಳ್ಳಿ, ವೀರೇಗೌಡನದೊಡ್ಡಿ, ಚನ್ನೇಗೌಡನದೊಡ್ಡಿ, ನಾಗರಕಲ್ಲುದೊಡ್ಡಿ, ವಡ್ಡರದೊಡ್ಡಿ, ಆನಮನಹಳ್ಳಿ, ಕ್ಯಾಸಪುರ, ಚಾಮನಹಳ್ಳಿ, ಕಣ್ವ ಕಾಲೋನಿ, 11ಕೆವಿ ಐಪಿಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಡಿ.23 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂನ ರಾಮನಗರ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Applications invited for free training in CCTV installation