ಪ.ಜಾ/ಪ.ಪಂ.ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ

Sewing Machine
Sewing Machine

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ 2019-20 ರಿಂದ 2024-25 ನೇ ಸಾಲಿನವರೆಗೂ ಎಸ್.ಎಫ್.ಸಿ ಯೋಜನೆಯಡಿ ಬಾಕಿ ಉಳಿದಿರುವ ಅನುದಾನದಲ್ಲಿ ಹೊಲಿಗೆ ಯಂತ್ರ ಪಡೆಯಲು ಅಸಕ್ತರಿಂದ ಅರ್ಜಿ ಅಹ್ವಾನಿಸಿದೆ. 

ಇದನ್ನು ಮಿಸ್‌ ಮಾಡದೇ ಓದಿ: ಜನವರಿ 1 ರಿಂದ ಜಾರಿಗೆ ಬರಲಿದೆ ಹೊಸ ನಿಯಮಗಳು, ನೀವು ಇವುಗಳನ್ನು ತಿಳಿದಿರಬೇಕು

ಇದನ್ನು ಮಿಸ್‌ ಮಾಡದೇ ಓದಿ: ಅಯೋಧ್ಯೆಗೆ 30 ಕೋಟಿ ರೂ. ವಜ್ರಖಚಿತ ರಾಮನ ವಿಗ್ರಹ ದಾನ ನೀಡಿದ ಕರ್ನಾಟಕದ ವ್ಯಕ್ತಿ

ಆಸಕ್ತರು ಅರ್ಜಿಯನ್ನು ಪಟ್ಟಣ ಪಂಚಾಯಿತಿ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ದಿ: 07/01/2026ರೊಳಗಾಗಿ ಸಲ್ಲಿಸುವಂತೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ www.hosanagaratown.mrc.gov.in ವೆಬ್‌ಸೈಟ್‌ನ್ನು ಹಾಗೂ ಕಚೇರಿಯ ವಿಷಯ ನಿರ್ವಾಹಕರನ್ನು ಸಂಪರ್ಕಿಸುವುದು.

ಶಿವಮೊಗ್ಗ: ವಿದ್ಯುತ್ ವ್ಯತ್ಯಯ

power supply cut
power supply cut

ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ. 26 ರಂದು ಬೆಳಗ್ಗೆ 9.00 ರಿಂದ ಸಂಜೆ 5.00 ರವರೆಗೆ ಸೋಮಿನಕೊಪ್ಪ, ಹೊಂಗಿರಣ ಲೇಔಟ್, ಗೋಕುಲ್ ಲೇಔಟ್, ಸಹ್ಯಾದ್ರಿನಗರ, ಮುನಿಯಪ್ಪ ಲೇಔಟ್, ಸಂಗೊಳ್ಳಿ ರಾಯಣ್ಣ ಲೇಔಟ್, ವೆಟರ‍್ನರಿ ಕಾಲೇಜು ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Application Invitation for Sewing Machine