ಮಂತ್ರಾಲಯಕ್ಕೆ ಭೇಟಿ ನೀಡಿ ಗುರುರಾಯರ ಆರ್ಶಿವಾದ ಪಡೆದ ರಿಷಬ್ ಶೆಟ್ಟಿ ದಂಪತಿ

Rishabh Shetty couple who visited Mantralaya and received Guru Raya Arshiva
Rishabh Shetty couple who visited Mantralaya and received Guru Raya Arshiva

ಮಂತ್ರಾಲಯ: ಕಾಂತಾರ ಯಶಸ್ಸಿನಲ್ಲಿರುವ ನಟ ರಿಷಬ್ ಶೆಟ್ಟಿ ಹಲವು ದೇವಾಲಗಳಿಗೆ ಭೇಟಿ ನೀಡುತ್ತಿರುವುದನ್ನು ಕಾಣಬಹುದಾಗಿದೆ.

ಈ ನಡುವೆ ನಟ, ನಿರ್ದೇಶಕ ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಅವರು ಬುಧವಾರ ಕುಟುಂಬ ಸಮೇತರಾಗಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಗುರುರಾಯರ ಆರ್ಶಿವಾದ ಪಡೆದುಕೊಂಡರು.

ಇದನ್ನು ಮಿಸ್‌ಮಾಡದೇ ಓದಿ: ವಿಜಯಲಕ್ಷ್ಮಿಗೆ ಕೆಟ್ಟ ಕಾಮೆಂಟ್‌ ಪೊಲೀಸರಿಗೆ ದೂರು ನೀಡಿದ ದರ್ಶನ್‌ ಪತ್ನಿ

ಇದನ್ನು ಮಿಸ್‌ಮಾಡದೇ ಓದಿ: ಅಂಜನಾದ್ರಿಯ ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್

ಬೆಳಿಗ್ಗೆ ಮಂತ್ರಾಲಯಕ್ಕೆ ಆಗಮಿಸಿದ ರಿಷಬ್ ಶೆಟ್ಟಿ ದಂಪತಿ, ಮೊದಲು ಗ್ರಾಮದೇವತೆ ಮಂಚಾಲಮ್ಮ ದೇವಿಯ ದರ್ಶನ ಪಡೆದುಕೊಂಡ ಬಳಿಕ ಅವರು ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಬಳಿಕ ಅವರು ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರ ಸನ್ನಿದಾಣಕ್ಕೆ ತೆರಳಿದ ವೇಳೆಯಲ್ಲಿ ರಿಷಬ್ ಶೆಟ್ಟಿ ದಂಪತಿಗೆ ಶ್ರೀಗಳು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನ ಮಾಡಿದರು.

Rishabh Shetty couple who visited Mantralaya and received Guru Raya Arshiva
Rishabh Shetty couple who visited Mantralaya and received Guru Raya Arshiva

ಇದೇ ವೇಳೆ ಶ್ರೀಗಳ ಜೊತೆಗೆ ನಟ ರಿಷಬ್ ಶೆಟ್ಟಿ, ಮಠದ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ವೇಳೆ ನೆಚ್ಚಿನ ನಟನನ್ನು ನೋಡುವುದಕ್ಕೆ ಅಭಿಮಾನಿಗಳು ಹಾಗೂ ಭಕ್ತರು ಮುಗಿ ಬಿದ್ದ ಸನ್ನಿವೇಶ ಕಂಡು ಬಂತು.

Rishabh Shetty couple who visited Mantralaya and received Guru Raya Arshiva