ಕೆಎಸ್‍ಒಯು: 2025-26ನೇ ಸಾಲಿನ ಜನವರಿ ಆವೃತ್ತಿಯ ಪ್ರವೇಶಾತಿ ಪ್ರಾರಂಭ

open university mysore
open university mysore

ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು 2025-26ರ ಜನವರಿ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಿದೆ.

ಸ್ನಾತಕ ಕೋರ್ಸುಗಳಾದ ಬಿ.ಎ., ಬಿ.ಕಾಂ., ಬಿ.ಬಿ.ಎ., ಬಿ.ಸಿ.ಎ., ಬಿ.ಎಸ್.ಡಬ್ಲ್ಯೂ., ಬಿ.ಎಸ್ಸಿ., ಬಿ.ಲಿಬ್.ಐ. ಎಸ್ಸಿ. ಮತ್ತು ಸ್ನಾತಕೋತ್ತರ ಕೋರ್ಸುಗಳಾದ ಎಂ.ಎ., ಎಂ.ಕಾಂ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್.ಡಬ್ಲ್ಯೂ., ಎಂ.ಎಸ್ಸಿ., ಎಂ.ಲಿಬ್.ಐ.ಎಸ್ಸಿ. ಹಾಗೂ ಯುಜಿ/ಪಿಜಿ ಡಿಪ್ಲ್ಲೊಮಾ ಮತ್ತು ಸರ್ಟಿಫಿಕೇಟ್ ಶಿಕ್ಷಣ ಕ್ರಮಗಳಿಗೆ ಜನವರಿ 09 ರಿಂದ ಬೆಂಗಳೂರು ಪ್ರಾದೇಶಿಕ ಕೇಂದ್ರ-01, ಬಾಪೂಜಿನಗರ ಇಲ್ಲಿ ಆನ್ ಲೈನ್ ಮೂಲಕ ಪ್ರವೇಶಾತಿಯನ್ನು ಪ್ರಾರಂಭಿಸಲಾಗಿದೆ. ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ ಸೈಟ್ www.ksoumysuru.ac.in ನಲ್ಲಿ ಲಭ್ಯವಿರುವ ವಿವರಣಾ ಪುಸ್ತಕದಲ್ಲಿ ಎಲ್ಲಾ ವಿವರಗಳನ್ನು ನೀಡಿದ್ದು, ಪ್ರವೇಶಾತಿಗೆ ಲಾಗಿನ್ ಮಾಡಿ ಮಾಹಿತಿ ಪಡೆಯಬಹುದಾಗಿದೆ.

ಇದನ್ನು ಮಿಸ್‌ ಮಾಡದೇ ಓದಿ : ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷೆಗಳಿಗೆೆ ತರಬೇತಿ : ಹೆಸರು ನೋಂದಣಿಗೆ ಆಹ್ವಾನ

ಇದನ್ನು ಮಿಸ್‌ ಮಾಡದೇ ಓದಿ : ಸ್ವಾಮಿ ವಿವೇಕಾನಂದ ಯುವ ಶಕ್ತಿ-ವೀರ ಸನ್ಯಾಸಿ : ಎಸ್ ಎನ್ ಚನ್ನಬಸಪ್ಪ

open university mysore
open university mysore

ಆಸಕ್ತ ಅರ್ಹ ವಿದ್ಯಾರ್ಥಿಗಳು ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಿ ನಂತರ ಅಗತ್ಯ ದಾಖಲಾತಿಗಳೊಂದಿಗೆ ಪ್ರಾದೇಶಿಕ ಕೇಂದ್ರಕ್ಕೆ ಭೇಟಿ ನೀಡಿ ಪ್ರವೇಶಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬಹುದು.

ಹೆಚ್ಚಿನ ವಿವರಗಳಿಗೆ ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು ಪ್ರಾದೇಶಿಕ ಕೇಂದ್ರ-01, ಮೊದಲನೇ ಮಹಡಿ, ಕೆ.ಎಸ್.ಆರ್.ಟಿ.ಸಿ. ಸ್ಯಾಟಲೈಟ್ ಬಸ್ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು-26, ಕಛೇರಿ ದೂರವಾಣಿ ಸಂಖ್ಯೆ: 080-26603664 ಹಾಗೂ 98805-26439/90195-26439 ಅನ್ನು ಸಂಪರ್ಕಿಸಬಹುದಾಗಿದೆ ಎಂದು ನಿರ್ದೇಶಕರಾದ ಡಾ. ರೋಹಿತ್ ಹೆಚ್.ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

KSOU : Admissions for January edition of 2025-26 begin

ಇ.ಎಸ್.ಐ ಅಡಿಯಲ್ಲಿ ನೋಂದಾವಣೆಯಾಗಿರದ ಕಾರ್ಖಾನೆ/ ಘಟಕಗಳು ಸ್ಪ್ರೀ ಯೋಜನೆಯಡಿ ನೋಂದಣಿಗೆ ಜನವರಿ 31 ರವರೆಗೆ ಅವಧಿ ವಿಸ್ತರಣೆ

ಬೆಂಗಳೂರು: ಕಾರ್ಮಿಕರ ರಾಜ್ಯ ವಿಮಾ ನಿಗಮ (ESIC), ಉಪ ಪ್ರಾದೇಶಿಕ ಕಚೇರಿ, ಬೊಮ್ಮಸಂದ್ರ, ಕಛೇರಿಯು ಎಲ್ಲಾ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಅನುಕೂಲವಾಗಲು ವಿವಿಧ ಫಲಾನುಭವಿಗಳಿಂದ ಬಂದ ವಿನಂತಿಗಳ ಆಧಾರದ ಮೇಲೆ, ಕಾರ್ಮಿಕರ ರಾಜ್ಯ ವಿಮಾ ನಿಗಮ ವತಿಯಿಂದ ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಸ್ಪ್ರೀ ಯೋಜನೆಯನ್ನು 01 ಜನವರಿ 2026 ರಿಂದ 31 ಜನವರಿ 2026 ರವರೆಗೆ ವಿಸ್ತರಿಸಲಾಗಿದೆ.

ಈ ವಿಸ್ತರಣಾವಧಿಯು ಇದುವರೆಗೆ ಇಎಸ್‍ಐ ವ್ಯಾಪ್ತಿಗೆ ಒಳಪಡದ ಹಾಗೂ ನೋಂದಣಿ ಮಾಡಿಸದ ಘಟಕಗಳಿಗೆ ಸುವರ್ಣಾವಕಾಶವಾಗಿದ್ದು, ಅರ್ಹ ಉದ್ಯೋಗಿಗಳನ್ನು ಇಎಸ್‍ಐ ಕಾಯ್ದೆಯ ಅಡಿಯಲ್ಲಿ ವ್ಯಾಪ್ತಿಗೊಳಪಟ್ಟು ವೈದ್ಯಕೀಯ ಚಿಕಿತ್ಸೆ ಮತ್ತು ನಗದು ಸೌಲಭ್ಯಗಳೊಂದಿಗೆ ಸಮಗ್ರ ಸಾಮಾಜಿಕ ಭದ್ರತೆ ಒದಗಿಸಲು ಸಹಕಾರಿಯಾಗಿದೆ.

ಈ ಒಂದು ಬಾರಿಯ ಅವಕಾಶ, ಅರ್ಹ ಉದ್ಯೋಗದಾರರು ಹಿಂದಿನ ಅವಧಿಗೆ ಸಂಬಂಧಿಸಿದಂತೆ ಯಾವುದೇ ದಂಡಾತ್ಮಕ ಕ್ರಮಗಳಿಲ್ಲದೆ (ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು) ತಮ್ಮ ಸಂಸ್ಥೆಗಳು ಮತ್ತು ಉದ್ಯೋಗಿಗಳನ್ನು ನೋಂದಣಿ ಮಾಡಬಹುದು. ಇದರಿಂದ ಉದ್ಯೋಗದಾತರು ಕಾನೂನು ಬದ್ಧ ಅನುಸರಣೆಯ ಜೊತೆಗೆ ಉದ್ಯೋಗಿಗಳ ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಯನ್ನು ಖಚಿತ ಪಡಿಸಬಹುದು.

ಉದ್ಯೋಗದಾತರು ಕೊನೆಯ ಕ್ಷಣದ ಗೊಂದಲವನ್ನು ತಪ್ಪಿಸಲು ನೋಂದಣಿ ಪ್ರಕ್ರಿಯೆಯನ್ನು ಆದಷ್ಟು ಮುಂಚಿತವಾಗಿ ಪೂರ್ಣಗೊಳಿಕೊಳ್ಳುವುದು.

ಕಾರ್ಮಿಕರ ರಾಜ್ಯ ವಿಮಾ ನಿಗಮದ ಉಪ ಪ್ರಾದೇಶಿಕ ಕಚೇರಿಯು ಇದುವರೆಗೆ ವ್ಯಾಪ್ತಿಗೆ ಒಳಪಡದ ಉದ್ಯೋಗದಾತರು ಹಾಗೂ ಅರ್ಹ ಉದ್ಯೋಗಿಗಳಿಗೆ ಈ ವಿಸ್ತರಿತ ಅವಧಿಯ ಪ್ರಯೋಜನ ಪಡೆದುಕೊಳ್ಳುವಂತೆ ಮತ್ತು ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯತ್ತ ಕೈಜೋಡಿಸುವಂತೆ ವಿನಂತಿಸಿದೆ. ಆನ್‍ಲೈನ್ ನೋಂದಣಿಗಾಗಿ ಅಗತ್ಯ ಮಾರ್ಗದರ್ಶನ ಮತ್ತು ಸಹಾಯವನ್ನು ಕಾರ್ಮಿಕರ ರಾಜ್ಯ ವಿಮಾ ನಿಗಮದ ಅಧಿಕಾರಿಗಳು ಮುಖ್ಯ ಕಛೇರಿಯ ನಿರ್ದೇಶನದಂತೆ ಒದಗಿಸಲಿದೆ.

ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕರ ರಾಜ್ಯ ವಿಮಾ ನಿಗಮ ಉಪ ಪ್ರಾದೇಶಿಕ ಕಚೇರಿ, ಬೊಮ್ಮಸಂದ್ರ ಹಾಗೂ ಇ-ಮೇಲ್: [email protected] ಅಥವಾ ದೂರವಾಣಿ: 080-26786393 / 080-26786391 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.