ಬೆಂಗಳೂರು: ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಕೆಯು ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಲ್ಲಿ ಮೂಡಿಸುವ ನಿಟ್ಟಿನಲ್ಲಿ ಪ್ರೌಢಶಾಲಾ ವಿಭಾಗ, ಪದವಿಪೂರ್ವ ವಿಭಾಗ ಹಾಗೂ ಪದವಿ ಮತ್ತು ಸ್ನಾತಕೋತ್ರ ವಿಭಾಗಗಳಲ್ಲಿ ಪ್ರಬಂಧ ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು.
ಅದರಂತೆ ಪ್ರೌಢಶಾಲಾ ವಿಭಾಗದ ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ “ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಗಾಂಧೀಜಿಯವರ ಪಾತ್ರ ವಿಷಯದ ಕುರಿತು ಪ್ರಬಂಧ ಮಂಡಿಸಿದ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಬಿ.ಹೆಚ್.ಎಸ್. ಮೇದಿನಿ ಶಾಲೆಯ ಸಿದ್ದರಾಜು ಪ್ರಥಮ ಸ್ಥಾನ, “ಗಾಂಧೀಜಿಯವರ ಸ್ವಾತಂತ್ರಯದ ಕನಸು ನನ್ನ ಕಲ್ಪನೆ” ವಿಷಯ ಕುರಿತು ಪ್ರಬಂಧ ಮಂಡಿಸಿದ ಕೊಪ್ಪಳ ಜಿಲ್ಲೆಯ ಹಿರೇಬೊಮ್ಮನಾಳ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯ ಯಮನೂರ ಹೆಚ್.ಎ. ಅವರು ದ್ವಿತೀಯ ಸ್ಥಾನ ಹಾಗೂ “ಸ್ವಚ್ಛತೆಯ ಪಾಠ-ಗಾಂಧೀಜಿಯವರ ಸಂದೇಶ” ಪ್ರಬಂಧ ಮಂಡನೆಗೆ ಚಿತ್ರದುರ್ಗ ಜಿಲ್ಲೆ ಚಿತ್ರದುರ್ಗ ತಾಲ್ಲೂಕಿನ ಗೊಲ್ಲರಹಳ್ಳಿ, ಚವಲಿ ಹಳ್ಳಿಯ ಸರ್ಕಾರಿ ಪ್ರೌಢಶಾಳೆಯ ತನುಜ. ಜೆ ಅವರು ತೃತೀಯ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ.
ಪದವಿ ಪೂರ್ವ ವಿಭಾಗದ ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ “ಇಂದಿನ ಸಮಾಜದಲ್ಲಿ ಸವೋದಯ ಮತ್ತು ಅಂತ್ಯೋದಯದ ಪ್ರಾಸಂಗಿಕತೆ” ಪ್ರಬಂಧ ಮಂಡನೆಗೆ ಮಂಡ್ಯದ ಪದವಿಪೂರ್ವ ಕಾಲೇಜಿನ ಲಕ್ಷ್ಮೀ ಪ್ರಥಮ ಸ್ಥಾನ, “ಬದಲಾವಣೆ ನನ್ನಿಂದಲೇ ಆರಂಭ – ಗಾಂಧೀಜಿಯವರ ಪಾಠ” ಪ್ರಬಂಧ ಮಂಡನೆಗೆ ತುಮಕೂರಿನ ಕುಣಿಗಲ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಲೊಲಾಕ್ಷಿದೇವಿ ಎಲ್ ಅವರು ದ್ವಿತೀಯ ಸ್ಥಾನ ಮತ್ತು “ಅಸ್ಪøಶ್ಯತೆ ನಿವಾರಣೆಯಲ್ಲಿ ಗಾಂಧೀಜಿಯವರ ಹೋರಾಟ” ಪ್ರಬಂಧ ಮಂಡನೆಗೆ ಗದಗ ವಿ.ಡಿ.ಎಸ್. ಗಲ್ರ್ಸ್ ಪದವಿಪೂರ್ವ ಕಾಲೇಜಿನ ಐಶ್ವರ್ಯ ಎಂ ತಮ್ಮನಗೌಡ್ರು ಅವರು ತೃತೀಯ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ.
ಪದವಿ ಮತ್ತು ಸ್ನಾತಕೋತ್ತರ ವಿಭಾಗದ ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ “ಮೌಲ್ಯಧಾರಿತ ನಾಯಕತ್ವ ಹಾಗೂ ನೈತಿಕ ರಾಜಕರಣ ಯುವಕರಿಗೆ ಗಾಂಧೀಜಿಯವರ ಪಾಠ” ಪ್ರಬಂಧ ಮಂಡನೆಗೆ ಮಂಗಳೂರು ರಥಬೀದಿ ಡಾ. ಪಿ.ದಯಾನಂದ ಪೈ ಪಿ. ಸತೀಶ್ ಪೈ ಪ್ರಥಮ ದರ್ಜೆ ಕಾಲೇಜಿನ ಮೇಘಾ ಅವರು ಪ್ರಥಮ ಸ್ಥಾನ, “ಗಾಂಧೀಜಿ ಕಂಡ ನ್ಯಾಯಸಮ್ಮತ ರಾಜಕೀಯ ವ್ಯವಸ್ಥೆ” ಪ್ರಬಂಧ ಮಂಡನೆಗೆ ಬೀದರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪೀಟರ್ ಅವರು ದ್ವಿತೀಯ ಸ್ಥಾನ ಮತ್ತು “ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ –ತತ್ವಗಳ ಹೋಲಿಕೆ” ಪ್ರಬಂಧ ಮಂಡನೆಗೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅನನ್ಯ. ಜಿ.ಪಿ ಅವರು ಮೂರನೇ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ.
ಗಾಂಧಿ ವ್ಯಕ್ತಿ ವಿಚಾರಗಳ ಬಗ್ಗೆ, ಅರಿವಿದ್ದವರಿಗೆ ಗಾಂಧೀಜಿ ಇಂದು ಮಾತ್ರ ಪ್ರಸ್ತುತವಲ್ಲ ಮನುಕುಲ ಇರುವರೆಗೂ ಪ್ರಸ್ತುತ ಎನ್ನುವ ಖಚಿತ ನಿಲುವಿಗೆ ಬರುತ್ತಾರೆ. ಚಿಂತಕರೊಬ್ಬರ ಪ್ರಕಾರ ಗಾಂಧೀಜಿ ಯಾರೂ ಸಾಯಿಸಲಾರದ ಮನುಷ್ಯ ಜೀವನದ ಮೌಲ್ಯಗಳು ಕುಸಿಯುತ್ತಿರುವ ಇಂದಿನ ಆಧುನಿಕ ಜಗತ್ತಿನಲ್ಲಿ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಯುವಜನರಲ್ಲಿ ಬಿತ್ತುವ ಉದ್ದೇಶದಿಂದ ರಾಜ್ಯದಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ವಿಚಾರಗಳನ್ನು ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಪರಿಚಯಿಸುವ ಪ್ರಯತ್ನವಾಗಿ ಪ್ರೌಢಶಾಲಾ ವಿಭಾಗದಲ್ಲಿ 1. ಸ್ವಚ್ಛತೆಯ ಪಾಠ-ಗಾಂಧೀಜಿಯವರ ಸಂದೇಶ 2. ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಗಾಂಧೀಜಿಯವರ ಪಾತ್ರ 3. ಗಾಂಧೀಜಿಯವರ ಸ್ವಾತಂತ್ರ್ಯದ ಕನಸು-ನನ್ನ ಕಲ್ಪನೆ ಪದವಿ ಪೂರ್ವ ವಿಭಾಗದಲ್ಲಿ 1. ಅಸ್ಪøಶ್ಯತೆ ನಿವಾರಣೆಯಲ್ಲಿ ಗಾಂಧೀಜಿಯವರ ಹೋರಾಟ 2. ಇಂದಿನ ಸಮಾಜದಲ್ಲಿ ಸರ್ವೋದಯ ಮತ್ತು ಅಂತ್ಯೋದಯದ ಪ್ರಾಸಂಗಿಕತೆ 3. ಬದಲಾವಣೆ ನನ್ನಿಂದಲೇ ಆರಂಭ- ಗಾಂಧೀಜಿಯವರ ಪಾಠ ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ 1. ಗಾಂಧೀಜಿ ಕಂಡ ನ್ಯಾಯಸಮ್ಮತ ರಾಜಕೀಯ ವ್ಯವಸ್ಥೆ 2. ಗಾಂಧೀಜಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್- ತತ್ವಗಳ ಹೋಲಿಕೆ 3. ಮೌಲ್ಯಧಾರಿತ ನಾಯಕತ್ವ ಹಾಗೂ ನೈತಿಕ ರಾಜಕಾರಣ- ಯುವಕರಿಗೆ ಗಾಂಧೀಜಿಯವರ ಪಾಠ ವಿಷಯಗಳ ಕುರಿತು ಮೂರು ಪ್ರತ್ಯೇಕ ವಿಭಾಗಗಳಲ್ಲಿ ರಾಜ್ಯ ಮಟ್ಟಲ್ಲಿ ಆಯೋಜಿಸಲಾಗಿತ್ತು.
ಮೂರು ವಿಭಾಗಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್ ಹಾಗೂ ಜಂಟಿ ನಿರ್ದೇಶಕರಾದ ಸಿ.ಆರ್. ನವೀನ್ ಅವರು ಶುಭಾಷಯಗಳನ್ನು ಕೋರಿದ್ದಾರೆ.
Students who won the state-level essay competitions organized by the Information and Public Relations Department as part of Mahatma Gandhi Jayanti













Follow Me