KSRTC ಪ್ರಯಾಣಿಕರ ಸುರಕ್ಷತೆ ಹಲವಾರು ಕ್ರಮಗಳು ಹೀಗಿದೆ

ksrtc
ksrtc

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆ.ಎಸ್.ಆರ್.ಟಿ.ಸಿ) ಬಸ್ಸುಗಳಲ್ಲಿ ಪ್ರಯಾಣಿಸುವಾಗ ತುರ್ತು ಪರಿಸ್ಥಿತಿಗಳಲ್ಲಿ ಪ್ರಯಾಣಿಕರ ರಕ್ಷಣೆಗೆ ಅಗತ್ಯವಿರುವ ಹಲವಾರು ಸುರಕ್ಷತಾ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ.

ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ತೆಗೆದುಕೊಳ್ಳಬೇಕಾದ ಕ್ರಮಗಳು:  ಎಲ್ಲಾ ಬಸ್ಸುಗಳ ಒಳಭಾಗದಲ್ಲಿ ಪ್ಯಾನಿಕ್ ಬಟನ್ಗಕಳನ್ನು ಅಳವಡಿಸಲಾಗಿದೆ. ಅಗ್ನಿ ಅವಘಡ, ವೈದ್ಯಕೀಯ ತುರ್ತು ಪರಿಸ್ಥಿತಿ, ಪ್ರಯಾಣಿಕರ ಸುರಕ್ಷತೆಗೆ ಅಪಾಯ ಈ ತುರ್ತು ಸಂದರ್ಭಗಳಲ್ಲಿ ಮಾತ್ರ ಪ್ಯಾನಿಕ್ ಬಟನ್ ಒತ್ತಬೇಕು. ಪ್ಯಾನಿಕ್ ಬಟನ್ ಒತ್ತಿದ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ತಲುಪುತ್ತದೆ.

ಇದನ್ನು ಮಿಸ್‌ ಮಾಡದೇ ಓದಿ: ನಿಮ್ಮ ಮಕ್ಕಳು ಹುಟ್ಟಿದಾಗಿನಿಂದ-16 ವರ್ಷದವರೆಗೂ ಈ ಲಸಿಕೆಗಳನ್ನು ತಪ್ಪದೇ ಹಾಕಿಸಿ

ಇದನ್ನು ಮಿಸ್‌ ಮಾಡದೇ ಓದಿ: ಈ ದಿಕ್ಕಿಗೆ ತಲೆಯಿಟ್ಟು ಮಲಗುವುದು ಅತ್ಯಂತ ಶುಭ

ಅಗ್ನಿ ನಂದಕ (ಫೈರ್ ಎಕ್ಸಿಂಗ್ಲಿಷರ್): ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ ಅಗ್ನಿ ನಂದಕಗಳನ್ನು ಒದಗಿಸಲಾಗಿದೆ. ಅಗ್ನಿ ಅವಘಡ ಸಂಭವಿಸಿದಲ್ಲಿ ತಕ್ಷಣ ಚಾಲಕರಿಗೆ ಮಾಹಿತಿ ನೀಡಬೇಕು. ತರಬೇತಿ ಪಡೆದಿದ್ದರೆ ಅಗ್ನಿ ನಂದಕವನ್ನು ಸಿಬ್ಬಂದಿಯ ಸೂಚನೆಗಳನ್ನು ಶಾಂತವಾಗಿ ಅನುಸರಿಸಬೇಕು.

ತುರ್ತು ನಿರ್ಗಮನ ದ್ವಾರ: ತುರ್ತು ನಿರ್ಗಮನ ದ್ವಾರಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಸಾಮಾನ್ಯ ಬಾಗಿಲುಗಳು ತೆರೆಯಲು ಆಗದಿದ್ದಾಗ ಅಥವಾ ಸೂಚನೆ ದೊರೆತಾಗ ಮಾತ್ರ ತುರ್ತು ನಿರ್ಗಮನ ದ್ವಾರವನ್ನು ಬಳಸಬೇಕು. ತುರ್ತು ನಿರ್ಗಮನ ದ್ವಾರವನ್ನು ಸಿಬ್ಬಂದಿಗಳಾಗಲಿ ಅಥವಾ ಪ್ರಯಾಣಿಕರಾಗಲಿ ಲಗ್ಗೇಜುಗಳಿಂದ ಮುಚ್ಚಬಾರದು.

ತುರ್ತು ಹ್ಯಾಮರ್ (ಸುತ್ತಿಗೆ): ಬಸ್ಸುಗಳಲ್ಲಿ ಕಿಟಕಿಗಳ ಬಳಿ ತುರ್ತು ಹ್ಯಾಮರ್ಗ್ಳನ್ನು ಅಳವಡಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಮಾತ್ರ ಕಿಟಕಿಯ ಗಾಜನ್ನು ಒಡೆಯಲು ಬಳಸಬೇಕು. ಗಾಜು ಸುಲಭವಾಗಿ ಒಡೆಯಲು ಅದರ ಮೂಲೆ ಭಾಗದಲ್ಲಿ ಹೊಡೆಯಬೇಕು.

ಪ್ರಯಾಣಿಕರ ಸುರಕ್ಷತಾ ಸೂಚನೆಗಳು: ಬಸ್ ಚಲಿಸುತ್ತಿರುವಾಗ ಅಸನದಲ್ಲೇ ಕುಳಿತುಕೊಳ್ಳಬೇಕು, ಸಿಬ್ಬಂದಿಯಿಂದ ನೀಡಲಾಗುವ ಸೂಚನೆಗಳನ್ನು ಅನುಸರಿಸಬೇಕು. ತುರ್ತು ಸಂದರ್ಭಗಳಲ್ಲಿ ಮಕ್ಕಳು, ವೃದ್ಧರು ಹಾಗೂ ಅಂಗವಿಕಲರಿಗೆ ಸಹಾಯ ಮಾಡಬೇಕು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಚಾಲಕರಿಗೆ ಮಾಹಿತಿ ನೀಬೇಕು. ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರೊಂದಿಗೆ ಸಹಕರಿಸಬೇಕು.

ಕೆ.ಎಸ್.ಆರ್.ಟಿ.ಸಿ ಬದ್ಧತೆ: ಕೆ.ಎಸ್.ಆರ್.ಟಿ.ಸಿ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಅರಾಮದಾಯಕ ಪ್ರಯಾಣವನ್ನು ಒದಗಿಸಲು ಬದ್ಧವಾಗಿದೆ. ಪ್ರಯಾಣಿಕರ ಜಾಗೃತೆ ಮತ್ತು ಸಹಕಾರದಿಂದ ಎಲ್ಲರಿಗೂ ಸುರಕ್ಷಿತ ಪ್ರಯಾಣ ಸಾಧ್ಯ. ಕೆ.ಎಸ್. ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Following are several measures for the safety of KSRTC passengers