ರಾಯಚೂರು : ಶ್ರೇಷ್ಠ ಕೃಷಿಕ, ಕೃಷಿ ಮಹಿಳೆ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನ

University of Agricultural Sciences, Raichur
University of Agricultural Sciences, Raichur

ರಾಯಚೂರು: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು 2026ರ ಜನವರಿ ತಿಂಗಳಿನಲ್ಲಿ ರಾಯಚೂರು ಮುಖ್ಯ ಆವರಣದಲ್ಲಿ “ಕೃಷಿ ಮೇಳ” ಆಯೋಜಿಸುತ್ತಿದೆ. ಕೃಷಿಗೆ ಸಂಬAಧಿಸಿದ ಹೊಸ ತಂತ್ರಜ್ಞಾನಗಳ ಬಗ್ಗೆ ರೈತ ಬಾಂಧವರಿಗೆ ಮಾಹಿತಿ ಒದಗಿಸುವುದು ಹಾಗೂ ಅವುಗಳನ್ನು ಅಳವಡಿಸಲು ಪ್ರೇರೇಪಿಸುವ ಉದ್ದೇಶ ಈ ಮೇಳದ್ದಾಗಿದೆ. 

University of Agricultural Sciences, Raichur
University of Agricultural Sciences, Raichur

ಈ ಮೇಳದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರತಿ ಜಿಲ್ಲಾವಾರು ಶ್ರೇಷ್ಠ ಕೃಷಿಕ ಹಾಗೂ ಕೃಷಿ ಮಹಿಳೆಯನ್ನು ಗುರುತಿಸಿ ಪ್ರಮಾಣ ಪತ್ರವನ್ನು ನೀಡಿ ಸನ್ಮಾನಿಸಲಾಗುವುದು. ಇದರ ಪ್ರಯುಕ್ತ ಅರ್ಜಿ ನಮೂನೆಯನ್ನು ಆಯಾ ಜಿಲ್ಲೆಗಳ ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರುನ ವೆಬ್ ಸೈಟ್ https://uasraichur.karnataka.gov.in ನಲ್ಲಿ ದಿನಾಂಕ: 01.01.2026 ರಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಹಿರಿಯ ವಿಜ್ಞಾನಿ & ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ರಾಯಚೂರು, ಬೀದರ, ಕಲಬುರಗಿ, ರದ್ದೇವಾಡಗಿ, ಗಂಗಾವತಿ, ಕವಡಿಮಟ್ಟಿ, ಹಗರಿ ಮತ್ತು ಮುಖ್ಯಸ್ಥರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಭೀಮರಾಯನಗುಡಿ, ಲಿಂಗಸೂಗೂರು, ಕೊಪ್ಪಳ, ನಾಲವಾರ, ದೇವದುರ್ಗ ಮತ್ತು ಹೂವಿನಹಡಗಲಿ ಇವರನ್ನು ಸಂಪರ್ಕಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9480696314, 9480696315, 9480696316, 9480696317, 9480696318, 9480696319, 9480696334, 9480696335, 9480696336ಗಳಿಗೆ ಸಂಪರ್ಕಿಸಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಹಿಂತಿರುಗಿಸಲು ಜನವರಿ 16 ಕೊನೆಯ ದಿನವಾಗಿರುತ್ತದೆ. ಅರ್ಜಿಗಳನ್ನು ಆಯಾ ಜಿಲ್ಲೆಗಳ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳ ಕಚೇರಿಗೆ ಸಲ್ಲಿಸಲು ತಿಳಿಸಲಾಗಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Raichur: Applications invited for the Best Farmer and Farmer Woman Award