ಹೊರ ಗುತ್ತಿಗೆ ಆಧಾರ ಮೇಲೆ ಸಖಿ ಒನ್ ಸ್ಟಾಪ್ ಸೆಂಟರ್ ನ ಹುದ್ದೆ ಭರ್ತಿಗಾಗಿ ಅರ್ಜಿ ಆಹ್ವಾನ

Sakhi One Stop Center
Sakhi One Stop Center

ಬೆಂಗಳೂರು ನಗರ ಜಿಲ್ಲೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ “ಸಖಿ” ಒನ್ ಸ್ಟಾಪ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸಲು ಗುತ್ತಿಗೆ ಆಧಾರ ಮೇಲೆ ಘಟಕ ಆಡಳಿತಾಧಿಕಾರಿಗಳು 03 ಹುದ್ದೆ, ಆಪ್ತ ಸಮಾಲೋಚಕರ 03 ಹುದ್ದೆ, ಸಮಾಜ ಸೇವಾ ಕಾರ್ಯಕರ್ತರ / ಕೇಸ್ ವರ್ಕರ್ 07 ಹುದ್ದೆ, ಕಾನೂನು ಸಲಹೆಗಾರರು, ವಕೀಲರು (ಪ್ಯಾರಾ ಲೀಗಲ್ ) 03 ಹುದ್ದೆ ಮತ್ತು ವಿವಿದೋದ್ದೇಶ ಸ್ವಚ್ಛತಗಾರರು / ಸೆಕ್ಯೂರಿಟಿ 08 ಹುದ್ದೆಗೆ ಆಯ್ಕೆ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇದನ್ನು ಮಿಸ್‌ ಮಾಡದೇ ಓದಿ: ಸಕಾಲದಲ್ಲಿ ಮಾಹಿತಿ ನೀಡಿ, ದಂಡದಿಂದ ಮುಕ್ತರಾಗಿ : ರಾಜ್ಯ ಮಾಹಿತಿ ಆಯೋಗದ ಆಯುಕ್ತರ ಸಲಹೆ

ಇದನ್ನು ಮಿಸ್‌ ಮಾಡದೇ ಓದಿ: ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ : ನ್ಯಾ.ರಾಜೇಶ್ ಎನ್.ಹೊಸಮನೆ

ವಿದ್ಯಾರ್ಹತೆ :  ಘಟಕ ಆಡಳಿತಾಧಿಕಾರಿಗಳು ಹುದ್ದೆಗೆ ಎಂ.ಎಸ್ ಡಬ್ಲೂ., ಸ್ನಾತಕೋತ್ತರ ಕಾನೂನು ಪದವಿ., ಎಂ.ಎಸ್.ಸಿ ಹೋಮ್ ಸೈನ್ಸ್ (ಹ್ಯೂಮನ್ ಡೆವೆಲಪ್ ಮೆಂಟ್ & ಫ್ಯಾಮಿಲಿರಿಲೇಷನ್) ಎಂ.ಎಸ್.ಸಿ. ಸೈಕಾಲಜಿ., ಎಂ.ಎಸ್.ಸಿ ಸೈಕಿಯಾಟ್ರಿ ಹೊಂದಿರಬೇಕು. ಸರ್ಕಾರಿ / ಸ್ವಯಂ ಸೇವಾಸಂಸ್ಥೆಗಳಲ್ಲಿ ಕನಿಷ್ಠ 05 ವರ್ಷಗಳ ಸಮಾಲೋಚನ ಅನುಭವ ಹೊಂದಿರಬೇಕು. ಕಂಪ್ಯೂಟರ್ ಬಳಕೆಯಲ್ಲಿ, ಕನ್ನಡ / ಇಂಗ್ಲೀಷ್ ಬೆರಳಚ್ಚು, ಗೂಗಲ್ ಶೀಟ್ ಎಂ.ಎಸ್. ಆಫೀಸ್ ಹಾಗೂ ಪಿ.ಪಿ.ಟಿ ಯಲ್ಲಿ ಪ್ರವೀಣ್ಯತೆ ಹೊಂದಿರಬೇಕು. ಸ್ಥಳೀಯ ಭಾಷೆ ಮತ್ತು ಆಂಗ್ಲ ಭಾಷೆಯಲ್ಲಿ ಪ್ರವೀಣ್ಯತೆ ಹೊಂದಿರಬೇಕು. 24/7 ಹುದ್ದೆಯಾಗಿರುತ್ತದೆ (Residential Staff). ಆಪ್ತ ಸಮಾಲೋಚಕರ ಹುದ್ದೆಗೆ ಎಂ.ಎಸ್ ಡಬ್ಲೂ., ಎಂ.ಎಸ್.ಸಿ ಹೋಮ್ ಸೈನ್ಸ್ (ಹ್ಯೂಮನ್ ಡೆವೆಲಪ್ ಮೆಂಟ್ & ಫ್ಯಾಮಿಲಿರಿಲೇಷನ್) ಎಂ.ಎಸ್.ಸಿ. ಸೈಕಾಲಜಿ., ಎಂ.ಎಸ್.ಸಿ ಸೈಕಿಯಾಟ್ರಿ ಪದವಿ ಹೊಂದಿರಬೇಕು. ಸರ್ಕಾರಿ / ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಠ 03 ವರ್ಷಗಳ ಸಮಾಲೋಚನ ಅನುಭವ ಹೊಂದಿರಬೇಕು. ಕಂಪ್ಯೂಟರ್ ಬಳಕೆಯಲ್ಲಿ, ಕನ್ನಡ / ಇಂಗ್ಲೀಷ್ ಬೆರಳಚ್ಚು, ಗೂಗಲ್ ಶೀಟ್ ಎಂ.ಎಸ್. ಆಫೀಸ್ ಹಾಗೂ ಪಿ.ಪಿ.ಟಿ ಯಲ್ಲಿ ಪ್ರವೀಣ್ಯತೆ ಹೊಂದಿರಬೇಕು.

Sakhi One Stop Center
Sakhi One Stop Center

ಸಮಾಜ ಸೇವಾ ಕಾರ್ಯಕರ್ತರ / ಕೇಸ್ ವರ್ಕರ್ ಹುದ್ದೆಗೆ ಬಿ.ಎಸ್.ಡಬ್ಲ್ಯೂ, ಬಿ.ಎ (ಸೋಷಿಯಾಲಜಿ, ಮಹಿಳಾ ಅಧ್ಯಯನ) ಪದವಿ ಹೊಂದಿರಬೇಕು. ಸರ್ಕಾರಿ / ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಠ 02 ವರ್ಷಗಳ ಸಮಾಜ ಕಾರ್ಯ ಅನುಭವ ಹೊಂದಿರಬೇಕು. ಕಂಪ್ಯೂಟರ್ ಬಳಕೆಯಲ್ಲಿ, ಕನ್ನಡ / ಇಂಗ್ಲೀಷ್ ಬೆರಳಚ್ಚು, ಗೂಗಲ್ ಶೀಟ್ ಎಂ.ಎಸ್. ಆಫೀಸ್ ಹಾಗೂ ಪಿ.ಪಿ.ಟಿ ಯಲ್ಲಿ ಪ್ರವೀಣ್ಯತೆ ಹೊಂದಿರಬೇಕು. ಕಾನೂನು ಸಲಹೆಗಾರರು, ವಕೀಲರು (ಪ್ಯಾರಾ ಲೀಗಲ್ ) ಹುದ್ದೆಗೆ ಕಾನೂನು ಪದವಿ ಹೊಂದಿರಬೇಕು. ಕಾನೂನು ಸೇವೆಯಲ್ಲಿ 02 ವರ್ಷಗಳ ಅನುಭವ ಹೊಂದಿರಬೇಕು. ಕನ್ನಡ ಭಾಷೆ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ವಿವಿದೋದ್ದೇಶ ಸ್ವಚ್ಛತಗಾರರು / ಸೆಕ್ಯೂರಿಟಿ (ರಾತ್ರಿ ಕಾವಲು) ಹುದ್ದೆಗೆ 7ನೇ ತರಗತಿ ವಿದ್ಯಾರ್ಹತೆ ಹೊಂದಿದ್ದು, ಸಂಬಂಧಿಸಿದ ಅನುಭವ ಹೊಂದಿರಬೇಕು. ವಯೋಮಿತಿ : 18 ರಿಂದ 45 ವರ್ಷ ಒಳಗಿರಬೇಕು. ಸ್ಥಳೀಯ ಅಭ್ಯರ್ಥಿಗಳಿಗೆ ಅದ್ಯತೆ ನೀಡಲಾಗುವುದು.

ಆಸಕ್ತ ಮಹಿಳಾ ಅಭ್ಯರ್ಥಿಗಳು ಉಪ ನಿರ್ದೇಶಕರವರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಡಾ.ಎಂ.ಹೆಚ್. ಮರಿಗೌಡ ರಸ್ತೆ, ಬೆಂಗಳೂರು -560029 ಇಲ್ಲಿಗೆ ತಮ್ಮ ವ್ಯಕ್ತಿಗತ ವಿವರ (Resume) ಅನ್ನು ಎಲ್ಲಾ ದಾಖಲೆಗಳೊಂದಿಗೆ ಜನವರಿ 30 ರೊಳಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 080-29578688 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Application invited for filling up the post of Sakhi One Stop Center on Outsourcing basis