ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ: ಸಾಧನೆ ಯೋಜನೆಯಡಿ ಅರ್ಜಿ ಆಹ್ವಾನ

Application Invitation
Application Invitation

ಬಳ್ಳಾರಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2025-26ನೇ ಸಾಲಿಗೆ ಸಾಧನೆ ಯೋಜನೆಯಡಿ ಆನ್‌ಲೈನ್ ಮೂಲಕ ಅರ್ಹ ವಿಶೇಷಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ವಿಶೇಷ ಚೇತನ ಫಲಾನುಭವಿಗಳು ಆನ್‌ಲೈನ್ ಸೇವಾಸಿಂಧು ತಂತ್ರಾAಶದ ಮೂಲಕ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಅಥವಾ ನೇರವಾಗಿ ಆನ್‌ಲೈನ್ ಸೇವಾಸಿಂಧು ಪೋರ್ಟಲ್ https://sevasindhuservivices.karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನವಾಗಿದೆ.

Application i
Application i

ಅರ್ಜಿ ಸಲ್ಲಿಸಿದ ಜೆರಾಕ್ಸ್ ಪ್ರತಿಯ ಜೊತೆಗೆ ಅಗತ್ಯ ದಾಖಲಾತಿಗಳೊಂದಿಗೆ ನಗರದ ಕಂಟೋನ್ ಮೆಂಟ್ ಪ್ರದೇಶದ ಶಾಂತಿಧಾಮ ಆವರಣದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರು: ಬಳ್ಳಾರಿ, ಕಂಪ್ಲಿ-8880875620, ಸಿರುಗುಪ್ಪ-9743509698, ಸಂಡೂರು-9632052270, ಕುರುಗೋಡು-9538000887 ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿ.ಆರ್.ಡಬ್ಲೂö್ಯ ಹಾಗೂ ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯು.ಆರ್.ಡಬ್ಲೂö್ಯಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಮಿಸ್‌ ಮಾಡದೇ ಓದಿ : ಉಳಿತಾಯ ಖಾತೆಯಿಂದ ಹಣ ಕಡಿತ : ಸೇವಾನ್ಯೂನ್ಯತೆ ಎಸಗಿದ ಕೆನರಾ ಬ್ಯಾಂಕಿಗೆ ದಂಡ

ಇದನ್ನು ಮಿಸ್‌ ಮಾಡದೇ ಓದಿ : ಇಂದು ಹುಣ್ಣಿಮೆ 8 ರಾಶಿಯವರಿಗೆ ಶನೇಶ್ವರನ ಕೃಪೆ 108 ವರ್ಷಗಳ ನಂತರ ಗುರುಬಲ ರಾಜಯೋಗ ಶುಕ್ರದೆಸೆ ಆರಂಭ!

ಮಸ್ಜಿದ್ ಎ ಅಬುಬಕ್ಕರ್(ಸುನ್ನಿ) ವಕ್ಫ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಚುನಾವಣೆ ವೇಳಾಪಟ್ಟಿ ಪ್ರಕಟ

ಬಳ್ಳಾರಿ: ನಗರದ ಕೌಲ್ ಬಜಾರ್ ವ್ಯಾಪ್ತಿಯಲ್ಲಿ ಬರುವ ವಕ್ಫ್ ಸಂಸ್ಥೆಯಾದ ಮಸ್ಜಿದ್ ಎ ಅಬುಬಕ್ಕರ್(ಸುನ್ನಿ) ಸಂಸ್ಥೆಗೆ ಹೊಸ ಸಮಿತಿ ರಚಿಸುವ ನಿಮಿತ್ತ ಜ.03 ರಿಂದ 24 ರವರೆಗೆ ಚುನಾವಣಾ ಪ್ರಕ್ರಿಯೆಯು ನಡೆಯಲಿದೆ.

ಅರ್ಹ ಅಭ್ಯರ್ಥಿಗಳು ಚುನಾವಣಾ ನಾಮಪತ್ರವನ್ನು ಜ.05 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 02.30 ಗಂಟೆಯವರೆಗೆ ಬಳ್ಳಾರಿ ನಗರದ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ಜ.12 ರಂದು ಮಧ್ಯಾಹ್ನ 02.30 ರೊಳಗೆ ಸಲ್ಲಿಸಬೇಕು.

ನಾಮಪತ್ರ ಪರಿಶೀಲನೆ ಜ.13 ರ ಬೆಳಿಗ್ಗೆ 11.30 ರಿಂದ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಜ.14 ರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 03 ಗಂಟೆಯ ವರೆಗೆ ಅವಕಾಶ. ಅದೇ ದಿನ ಮಧ್ಯಾಹ್ನ 03.30 ರ ನಂತರ ಚುನಾವಣಾ ಚಿನ್ಹೆಗಳನ್ನು ಹಂಚಿಕೆ ಮಾಡಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.

ಜ.24 ರಂದು ಶನಿವಾರ ಬೆಳಿಗ್ಗೆ 09 ರಿಂದ ಮಧ್ಯಾಹ್ನ 04 ಗಂಟೆಯವರೆಗೆ ಕೌಲ್ ಬಜಾರ್ ಮಸ್ಜಿದ್ ಎ ಅಬುಬಕ್ಕರ್(ಸುನ್ನಿ) ವಕ್ಫ್ ಸಂಸ್ಥೆಗೆ ಚುನಾವಣೆ ನಡೆಸಿ, ಅದೇ ದಿನ ಸಂಜೆ 05 ಗಂಟೆಯಿAದ ಮತ ಎಣಿಕೆ ನಡೆಸಲಾಗುವುದು ಎಂದು ಕೌಲ್ ಬಜಾರ್ ನ ಮಸ್ಜಿದ್ ಎ ಅಬುಬಕ್ಕರ್ (ಸುನ್ನಿ) ಚುನಾವಣಾಧಿಕಾರಿ ಆದ ಕಲಬುರುಗಿ ವಿಭಾಗೀಯ ವಕ್ಫ್ ಅಧಿಕಾರಿ ನೂರ್ ಪಾಷಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Department of Empowerment of Persons with Disabilities and Senior Citizens Application Invitation under Sadha Yojana