ಬೆಂಗಳೂರು: ನಗರಾಭಿವೃದ್ಧಿ ಇಲಾಖೆಯ ಪೌರಾಡಳಿತ ನಿರ್ದೇಶನಾಲಯದ ವತಿಯಿಂದ ಮನೆಯಲ್ಲೇ ಕುಳಿತು ಅತಿ ಸರಳವಾಗಿ ಇ-ಖಾತಾವನ್ನು ಪಡೆಯಬಹುದು. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ನಿಗದಿತ ಕಾಲಾವಧಿಯೊಳಗೆ ಇ-ಖಾತಾ ಪಡೆಯಬಹುದು. ಕೆ-1 ಕೇಂದ್ರಗಳಲ್ಲೂ ಸಹ ನಾಗರಿಕರು ತಂತ್ರಾಂಶವನ್ನು ಬಳಸಿ ಸೇವೆಯನ್ನು ಪಡೆಯಬಹುದು.
ಇ-ಖಾತಾ ಪಡೆಯುವ ಮೂಲಕ ಸರಳವಾಗಿ ಆಸ್ತಿ ತೆರಿಗೆಯನ್ನು ಆನ್ಲೈನ್ ಮುಖಾಂತರ ಪಾವತಿಸಬಹುದು. ಆಸ್ತಿ ಕಣಜದಲ್ಲಿನ ಮಾಹಿತಿ ಆಧಾರದ ಮೇಲೆ ಕರಡು ಇ-ಖಾತಾವನ್ನು ಪ್ರಕಟಿಸಲಾಗಿದ್ದು, ಸಾರ್ವಜನಿಕರು ಈ ಮಾಹಿತಿಗಳನ್ನು ನೇರವಾಗಿ ವೀಕ್ಷಿಸಬಹುದು. ಈ ಮಾಹಿತಿಗಳ ಬಗ್ಗೆ ತಕರಾರಿದ್ದಲ್ಲಿ ಸಾರ್ವಜನಿಕರು ಇ-ಆಸ್ತಿç ತಂತ್ರಾಂಶದಲ್ಲಿ ಹೆಚ್ಚಿನ ಮಾಹಿತಿಯನ್ನು ನೇರವಾಗಿ ನಮೂದಿಸಬಹುದು. ನಮೂದಿಸಿದ ಮಾಹಿತಿಯ ನಿಖರತೆಯನ್ನು ನಗರ ಸ್ಥಳೀಯ ಸಂಸ್ಥೆಗಳು ಪರಿಶೀಲಿಸಿ, ಅನುಮೋದಿಸಲಾಗುವುದು. ಅಂತಿಮ ಇ-ಖಾತಾವನ್ನು ಸಾರ್ವಜನಿಕರು ತಮ್ಮ ಮನೆಗಳಲ್ಲೇ ಕುಳಿತು ಪಡೆಯಬಹುದು.
ಇದನ್ನು ಮಿಸ್ ಮಾಡದೇ ಓದಿ : ಗೃಹಲಕ್ಷ್ಮಿ ಹಣದ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರದಿಂದ ಗುಡ್ನ್ಯೂಸ್
ಇದನ್ನು ಮಿಸ್ ಮಾಡದೇ ಓದಿ : ರಾಜ್ಯ ಸರ್ಕಾರದಿಂದ 2026 ನೇ ಸಾಲಿನ ಜಯಂತಿ ಆಚರಣೆಗಳ ಪಟ್ಟಿ ಹಾಗೂ ಮಾರ್ಗಸೂಚಿ ಬಿಡುಗಡೆ
ದಾಖಲಾತಿಗಳ ವಿವರ: ಮಾಲೀಕರ ಭಾವಚಿತ್ರ ಮತ್ತು ಆಧಾರ್ ಕಾರ್ಡ್, ಆಸ್ತಿ ತೆರಿಗೆ ಎಸ್.ಎ.ಎಸ್. ಚಲನ್ ಸಂಖ್ಯೆ, ಸ್ವತ್ತಿನ ಕ್ರಯ/ನೋಂದಾಯಿತ ಪತ್ರ ಸಂಖ್ಯೆ (ಕಾವೇರಿ ತಂತ್ರಾಂಶದಿಂದ ವಿದ್ಯುನ್ಮಾನವಾಗಿ ಪಡೆದುಕೊಳ್ಳುತ್ತದೆ), ವಿದ್ಯುತ್ ಆರ್ಆರ್ ಸಂಖ್ಯೆ (ಖಾಲಿ ನಿವೇಶನಗಳಿಗೆ ಅಗತ್ಯವಿಲ್ಲ), ಸ್ವತ್ತಿನ ಛಾಯಾಚಿತ್ರ, ಇಸಿ ನಮೂನೆ 15/16 ಹಾಗೂ ಸ್ವತ್ತಿಗೆ ಸಂಬಂಧಿಸಿದ ಇತರೆ ಪೂರಕ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಇ-ಮೇಲ್ ವಿಳಾಸ: www.eaasthi.karnataka.gov.in ಅನ್ನು ಸಂಪರ್ಕಿಸಬಹುದಾಗಿದೆ.
How to get an E-Khatha from home

ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ
ರಾಮನಗರ : ಅಂತರರಾಷ್ಟ್ರೀಯ ವಾಣಿಜ್ಯ ಮೇಳ 2026 ಅನ್ನು ವಿಭಿನ್ನವಾಗಿ ಅಗ್ರಿಕಲ್ಚರ್ ಬಿಯಾಂಡ್ ಪ್ರಾಡಕ್ಷನ್ ಎಂಪವರಿಂಗ್ ಫಾರ್ಸ್ ಎಂಬ ಹೊಸ ಪರಿಕಲ್ಪನೆಯೊಂದಿಗೆ ಆಯೋಜಿಸಿರುವ ಮೇಳಕ್ಕೆ ಪೂರ್ವಭಾವಿಯಾಗಿ ಜಿಲ್ಲಾಮಟ್ಟದಲ್ಲಿ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ (ಲ್ಯಾಂಡ್ ರೇಸಸ್ ಪ್ರಾಡಕ್ಟ್) ಪಾಕಸ್ಪರ್ಧೆಯನ್ನು 2026ರ ಜನವರಿ 9ರಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಪಂಚಾಯತ್ ಭವನದ ಮೂರನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ: 303ರ ಕೃಷಿ ನಿರ್ದೆಶಕರ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಸ್ಪÀರ್ಧಿಗಳಿಗೆ ಸೂಚನೆಗಳು: ಪಾಕಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ತಾವೇ ಸಿದ್ಧಪಡಿಸಿರುವ ಸಿರಿ ಧಾನ್ಯಗಳ ಸಿಹಿ ಖಾದ್ಯ, ಖಾರ ಖಾದ್ಯ ಹಾಗೂ ಮರೆತು ಹೋದ ಖಾದ್ಯಗಳ ಪ್ರದರ್ಶನಕ್ಕಾಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೊಠಡಿ ಸಂಖ್ಯೆ 302, 3ನೇ ಮಹಡಿ, ಜಿಲ್ಲಾ ಪಂಚಾಯತ್ ಭವನ, ಬೆಂಗಳೂರು ದಕ್ಷಿಣ ಜಿಲ್ಲೆ. ಇಲ್ಲಿ ತಮ್ಮ ಹೆಸರು, ಗ್ರಾಮ, ತಾಲ್ಲೂಕು, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ತಯಾರಿಸುವ ಖಾದ್ಯದ ವಿಭಾಗದ ಮಾಹಿತಿಯನ್ನು ನೀಡಿ, ದಿನಾಂಕ:07.01.2026ರ ಸಂಜೆ 5.30 ರೊಳಗಾಗಿ ತಪ್ಪದೇ ನೊಂದಣಿ ಮಾಡಿಕೊಳ್ಳಬಹುದು ಅಥವಾ ಕ್ಯೂಆರ್ ಕೋಡ್ ಬಳಸಿಯು ನೋಂದಾಯಿಸಿಕೊಳ್ಳಬಹುದು. ನಂತರದಲ್ಲಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಸಿರಿಧಾನ್ಯ ಖಾದ್ಯಗಳು: ಸಿರಿಧಾನ್ಯಗಳಾದ ಜೋಳ, ರಾಗಿ, ನವಣೆ, ಸಜ್ಜೆ, ಹಾರಕ, ಬರಗು ಮತ್ತು ಸಾಮೆ ಬೆಳೆಗಳಿಂದ ಸಿಹಿ ಮತ್ತು ಖಾರ ಖಾದ್ಯಗಳನ್ನು ತಯಾರಿಸುವುದು.
ಮರೆತು ಹೋದ ಖಾದ್ಯಗಳು: ಸಿರಿಧಾನ್ಯಗಳನ್ನು ಹೊರತುಪಡಿಸಿ ಆಹಾರ ಮತ್ತು ಎಣ್ಣೆಕಾಳು ಬೆಳೆಗಳು / ತರಕಾರಿಗಳ ಬೆಳೆಗಳು ಮತ್ತು ಹಣ್ಣುಗಳ ದೇಶಿ ತಳಿಗಳ ಖಾದ್ಯಗಳನ್ನು ತಯಾರಿಸಬಹುದು.
ಪ್ರತಿ ಸ್ಪರ್ಧಿಗೆ ಒಂದೇ ತಿನಿಸು / ಖಾದ್ಯ (ಅಡುಗೆ) ಮಾಡಲು ಅವಕಾಶವಿರುತ್ತದೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಭಾಗವಹಿಸಲು ಅವಕಾಶವಿರುತ್ತದೆ. (ಷರಾ: ವಿದ್ಯಾರ್ಥಿಗಳು / ಕೃಷಿ ಇಲಾಖೆಯ ಅಧಿಕಾರಿ / ಸಿಬ್ಬಂದಿಗಳಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ), 2024-25ನೇ (ಹಿಂದಿನ) ಸಾಲಿನಲ್ಲಿ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಮೊದಲನೇ ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದ ಸ್ಪರ್ಧಿಗಳಿಗೆ ಪ್ರಸ್ತುತ ವರ್ಷದಲ್ಲಿ ಸಿರಿಧಾನ್ಯ ಪಾಕಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
ಮನೆಯಲ್ಲಿಯೇ ತಯಾರಿಸಿದ ಸಿರಿಧಾನ್ಯ / ಲ್ಯಾಂಡ್ ರೇಸಸ್ ಪ್ರಾಡಕ್ಟ್ ಖಾದ್ಯದ ತಿನಿಸು (ಅಡುಗೆ) ಪ್ರದರ್ಶಿಸಲು ಅವಕಾಶವಿರುತ್ತದೆ ಹಾಗೂ ಬಳಸುವ ಸಾಮಾಗ್ರಿಗಳ ಮಾದರಿಗಳನ್ನು (ಸಾಂಪಲ್) ಕಡ್ಡಾಯವಾಗಿ ಪ್ರದರ್ಶಿಸುವುದು (ವಿಶೇಷವಾಗಿ ದೇಸಿ ತಳಿಗಳು).
ತಯಾರಿಸಿದ ತಿನಿಸುಗಳ ಪ್ರದರ್ಶನ (ಡಿಸ್ಪ್ಲೇ), ತಯಾರಿಕೆಗೆ ಬಳಸಿದ ಪದಾರ್ಥಗಳು (ಇಂಗ್ರಡಿಯೆಂಟ್ಸ್), ತೋರಿಕೆ (ಅಪಿಯರೆನ್ಸ್), ರುಚಿ (ಟೇಸ್ಟ್), ಸುವಾಸನೆ (ಅರೋಮ) ಗಳ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ತೀರ್ಪುಗಾರರ ತೀರ್ಪು ಅಂತಿಮವಾಗಿರುತ್ತದೆ.
ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಿದ ಸಿರಿಧಾನ್ಯಗಳ ಸಿಹಿ, ಖಾರ ಮತ್ತು ಮರೆತು ಹೋದ ಖಾದ್ಯಗಳ ತಿನಿಸಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ತಲಾ 5,000 ರೂ.ಗಳು, 3,000 ರೂ.ಗಳು ಹಾಗೂ 2,000 ರೂ.ಗಳನ್ನು ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಬೆಂಗಳೂರು ದಕ್ಷಿಣ ಜಿಲ್ಲೆ. ದೂ.ಸಂಖ್ಯೆ: 9113058988, 8277932430, 7411604563, 9449756838 ಅಥವಾ ಇ-ಮೇಲ್: [email protected] ಅನ್ನು ಸಂಪರ್ಕಿಸುವಂತೆ ಬೆಂಗಳೂರು ದಕ್ಷಿಣ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
District level cooking competition of cereals and forgotten dishes













Follow Me