ಸಂಪತ್ತಿನ ಮಳೆಗರೆದ “ಕನಕಧಾರ” ಸ್ತೋತ್ರದ ಹಿನ್ನೆಲೆ

Background of the hymn "Kanakadhara" showered with wealth:-
Background of the hymn "Kanakadhara" showered with wealth:-

ಬಡತನ ನೀಗಿಸುವ ದಿವ್ಯ ಮಂತ್ರ “ಕನಕಧಾರ” ಸ್ತೋತ್ರ. ‘ಕನಕ’ ಅಂದರೆ ಬಂಗಾರ ‘ಧಾರಾ’ ಅಂದರೆ ಧಾರಾಕಾರ ಮಳೆಯಂತೆ ಸುರಿಯುವುದು. ಹಾಗೆ ಧಾರೆಯಂತೆ ಬಂಗಾರದ ಮಳೆಗರೆಸಿದವರು, ಜಗತ್ತು ಕಂಡ ಮಹಾನ್ ಶ್ರೇಷ್ಠರು, ದಿವ್ಯ ಜ್ಞಾನಿಗಳ ಲ್ಲೇ ಒಬ್ಬರಾದ, ಗುರುಗಳಿಗೆಲ್ಲ ಪ್ರಥಮ ಆದಿ ಗುರು ಶಂಕರಾಚಾರ್ಯರು. ಇವರು ಕೇರಳದ ಕಾಲಡಿ ಗ್ರಾಮದಲ್ಲಿ ಜನಿಸಿದರು.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ASTRO
ASTRO

ಅತೀ ಚಿಕ್ಕ ವಯಸ್ಸಿನಲ್ಲೇ ವೇದಾಧ್ಯ ಯನ, ಹಾಗೂ ಎಲ್ಲಾ ಶಾಸ್ತ್ರಗಳ ಅಧ್ಯಯನವನ್ನು ಮಾಡಿ ಸನ್ಯಾಸ ಸ್ವೀಕರಿಸಿ ಪರಿವ್ರಾಜಕಚಾರ್ಯರಾಗಿ ಇಡೀ ಭರತ ಭೂಮಿಯನ್ನು ಕಾಲ್ನಡಿಗೆಯಲ್ಲಿಯೇ ಮೂರು ಬಾರಿ ಸಂಚರಿಸಿ, ಅನ್ಯ ಧರ್ಮೀಯರು ತಮ್ಮ ಮತವನ್ನು ಸ್ಥಾಪಿಸಲು ಹವಣಿಸುತ್ತಿದ್ದ ಧರ್ಮಗಳನ್ನು ಖಂಡಿಸಿ, ಭಾರತದಲ್ಲಿ ಶಾಶ್ವತವಾದ ಸನಾತನ ಹಿಂದೂ ಧರ್ಮವನ್ನು ಪುನಃ ಪ್ರತಿಷ್ಠಾಪಿಸಿದ ಜಗದ್ಗುರು ಆದಿ ಶಂಕರಾಚಾರ್ಯರು.

ASTRO
ASTRO

ಆಗಿನ್ನು ಶಂಕರರಿಗೆ 5 ವರ್ಷ. ಮೇಧಾವಿ ಪುಟ್ಟ ಬಾಲಕ. ಆಗಿನ ಕ್ರಮದಂತೆ ಅರಸನ ಮಕ್ಕಳೇ ಆಗಲಿ, ಸಾಮಾನ್ಯನ ಮಕ್ಕಳೇ ಆಗಲಿ, ಎಲ್ಲರೂ ಒಂದೇ ಎಂಬ ಭಾವ. ವಿದ್ಯಾರ್ಥಿ ಜೀವನವನ್ನು ಭಿಕ್ಷಾಟನೆ ಮಾಡಿಯೇ ವಿದ್ಯೆ ಕಲಿಯಬೇಕಾಗಿತ್ತು. ಅದರಂತೆ ಒಂದು ದಿನ ಬಾಲ ಶಂಕರ ಒಬ್ಬ ಬಡ ಮಹಿಳೆಯ ಗುಡಿಸಲ ಮುಂದೆ ನಿಂತು “ಭವತಿ ಭಿಕ್ಷಾಂದೇಹಿ” ಎಂದು ಕೂಗಿದ. ಆ ಮನೆಯ ಒಡತಿ ಹೊರಗೆ ಬಂದಳು. ಒಂದು ಕ್ಷಣ ಬಾಲಕನನ್ನು ನೋಡಿ ಆಕೆಯ ಮನಸ್ಸು ಪುಳಕ ಗೊಂಡಿತು. ಆದರೆ ಅವಳ ದೇಹ ಮುಖಭಾವ ಬಡತನವನ್ನೇ ಹಾಸಿ ಹೊದ್ದಂತಿತ್ತು. ಉಟ್ಟಿದ್ದ ಮಾಸಲು ಹರುಕಲು ಸೀರೆ, ಅವಳ ಹೀನ ಸ್ಥಿತಿಯನ್ನು ಎತ್ತಿ ತೋರಿಸುತ್ತಿತ್ತು. ಮುದ್ದಾದ ತೇಜಸ್ವಿ ಬಾಲಕನನ್ನು ನೋಡಿದ ಆಕೆಗೆ ಕೊಡಲು ಏನೂ ಇಲ್ಲವಲ್ಲ ಎಂದು ಒದ್ದಾಡಿದಳು. ಅವಳಿಗೇ ತಿನ್ನಲು ಇಲ್ಲದೆ ಎರಡು ದಿನಗಳೇ ಆಗಿತ್ತು. ನನ್ನ ಮನೆ ಬಾಗಿಲಿಗೆ ಬಂದ ಪುಟ್ಟ ಬಾಲಕನಿಗೆ ಕೊಡಲು ಏನೂ ಇಲ್ಲ. ಬಿಕ್ಷಾಟನೆಗೆ ಹೋಗಿರುವ ಪತಿ ಇನ್ನು ಮನೆಗೆ ಬಂದಿಲ್ಲ ಎಂದು ದುಃಖ ಒತ್ತರಿಸಿ ಬಂತು, ಒಂದು ಹಿಡಿಯಷ್ಟಾದರೂ ಕೊಡಲು ಏನಾದರೂ ಇದೆಯೇ ಎಂದು ಮನೆಯ ಸಂಧಿ ಮೂಲೆ ತಡಕಾಡಿದಳು. ಅವಳಿಗೆ ಸಿಗಲಿಲ್ಲ ಹಾಗೆ ಹಿತ್ತಲ ಬದಿ ಏನಾದರೂ ಸಿಕ್ಕಿತೇ ಎಂದು ಹೋದಳು. ಮರದಿಂದ ಬಿದ್ದ ನಾಲ್ಕಾರು ಒಣಗಿದ ನಲ್ಲಿಕಾಯಿ ಕಂಡಿತು. ಅವಳು ಅದನ್ನೇ ಹಿಡಿದು ಬಹಳ ಮುದುಡಿದ ಮನಸ್ಸಿನಿಂದ, ಮಗು ನನ್ನ ದುರವಸ್ಥೆ ನೋಡು, ನಿನ್ನ ಜೋಳಿಗೆಗೆ ಹಾಕಲು ಒಂದು ಹಿಡಿ ಅಕ್ಕಿ ಇಲ್ಲ. ಈಗ ನಿನಗೆ ಕೊಡಲು ಇರುವುದು ಈ ಒಣಗಿದ ನಲ್ಲಿಕಾಯಿ ಎಂದು ಪುಟ್ಟ ಶಂಕರನ ಜೋಳಿಗೆಗೆ ಹಾಕಿದಳು.

ಆ ತಾಯಿಯ ನಿಸ್ವಾರ್ಥ ಪ್ರೇಮವನ್ನು ಕಂಡ ಪುಟ್ಟ ಬಾಲಕ ಶಂಕರನ ಹೃದಯ ಮರುಗಿತು. ಏಕೆಂದರೆ ಆಕೆಗೆ ತಿನ್ನಲು ಇಲ್ಲದಿದ್ದರೂ, ಸಿಕ್ಕಿದ್ದನ್ನು ತಾನು ಇಟ್ಟುಕೊಳ್ಳ ದೆ ಅದನ್ನು ದಾನ ಮಾಡಿದಳಲ್ಲ. ಬಾಲ ಶಂಕರ ಆಕಾಶದತ್ತ ದಿಟ್ಟಿಸಿ ಕೈ ಎತ್ತಿ ಮುಗಿದು ತಾಯಿ “ಮಹಾಲಕ್ಷ್ಮಿ” ಸ್ತೋತ್ರವನ್ನು ಸ್ತುತಿಸಿದನು. ಆ ಸ್ತೋತ್ರವೇ 22 ಶ್ಲೋಕಗಳನ್ನೊಳಗೊಂಡ ಪ್ರಸಿದ್ಧವಾದ “ಕನಕಧಾರಾ” ಸ್ತೋತ್ರ.ಅದನ್ನು ಹೇಳಿದಾಗ, ಸಾಕ್ಷಾತ್ ಮಹಾಲಕ್ಷ್ಮಿ ಪುಟ್ಟ ಬಾಲಕನ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷಳಾದಳು. ಕೈ ಮುಗಿದು ನಿಂತ ಶಂಕರನಿಗೆ ಶಂಕರ ನಿನ್ನ ಭಕ್ತಿಗೆ ಮೆಚ್ಚಿ ಬಂದಿರುವೆ. ಆದರೆ ಇಲ್ಲಿಗೆ ಬರಲು ಇಷ್ಟವಿಲ್ಲ ಏಕೆಂದರೆ ಪೂರ್ವ ಜನ್ಮದಲ್ಲಿ ಈ ಮಹಿಳೆ ಯಾವ ದಾನವನ್ನು ಮಾಡಿರ ಲಿಲ್ಲ. ಅದಕ್ಕಾಗಿ ಈ ಜನ್ಮ ಪೂರ್ತಿ ಇವಳ ಹಣೆಬರಹದಲ್ಲಿ ಬಡತನವೇ ಬರೆದಿದೆ ಕರ್ಮವನ್ನು ಮೀರಲು ನನ್ನಿಂದಲೂ ಸಾಧ್ಯವಿಲ್ಲ ಎಂದಳು.

ASTRO
ASTRO

ಆದರೆ ಪುಟ್ಟ ಶಂಕರ ಬಿಡದೆ, ಲಕ್ಷ್ಮಿಯ ಜೊತೆ ವಾದ ಮಾಡಿದ, ಅಮ್ಮಾ ನೀನು ಹೇಳಿದ್ದು ಸರಿ. ಆದರೆ ಈ ಸಮಯವನ್ನು ನೋಡು ಈ ತಾಯಿ ತನಗೆ ಇಲ್ಲದಿದ್ದರೂ, ತನ್ನಲ್ಲಿದ್ದ ಒಂದು ವಸ್ತುವನ್ನು ತಾನು ಇಟ್ಟುಕೊಳ್ಳದೆ ನಿಸ್ವಾರ್ಥದಿಂದ ನನಗೆ ದಾನ ಮಾಡಿದ್ದಾಳೆ.‌ ಇದಕ್ಕಿಂತ ಬೇರೆ ದಾನದ ಪುಣ್ಯ ಬೇಕೇ, ಈಕೆ ಪೂರ್ವದಲ್ಲಿ ಮಾಡಿದ ಕರ್ಮಗಳೆಲ್ಲ ಈ ತಾಯಿಯ ತ್ಯಾಗದಲ್ಲಿ ಸುಟ್ಟು ಹೋಗಲಿ, ನೀನು ಈ ತಾಯಿ ಯನ್ನು ಅನುಗ್ರಹಿಸಬೇಕು ಎಂದರು. ಪುಟ್ಟ ಬಾಲಕ ಶಂಕರನ ಪ್ರಾರ್ಥನೆ- ಮತ್ತು ಸಮ್ಮತವಾದ ವಾದ, ಬಡ ತಾಯಿಯ ತ್ಯಾಗಕ್ಕೆ ಮಹಾಲಕ್ಷ್ಮಿ ಸೋತಳು. ಕ್ಷಣ ಮಾತ್ರವೇ ಆಕಾಶದಲ್ಲಿ ಮೋಡ ಕವಿಯಿತು. ಆ ತಾಯಿಯ ಮನೆ ಅಂಗಳದಲ್ಲಿ ಮಳೆಯ ಬದಲಾಗಿ ಚಿನ್ನದ ನಲ್ಲಿಕಾಯಿ ಮಳೆಗರೆಯಿತು. ಮಹಿಳೆಯ ಬಡತನ ಹೇಳ ಹೆಸರಿಲ್ಲದಂತೆ ಮಾಯವಾಯಿತು. ಶಂಕರ ಮುಂದಿನ ಮನೆಗೆ ಹೊರಟನು.

ASTRO
ASTRO

ಈ ಸುದ್ದಿ ಕ್ಷಣದಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಆ ಬಡ ತಾಯಿ ಶಂಕರರ ಗುರುಗ ಳಲ್ಲಿಗೆ ಬಂದು ನಡೆದ ಸಂಗತಿಯನ್ನು ತಿಳಿಸಿ, ಬಂಗಾರವನ್ನು ಗುರುಗಳಿಗೆ ಒಪ್ಪಿ ಸಲು ಮುಂದಾದಳು. ಆದರೆ ಗುರುಗಳು ಸ್ವಲ್ಪ ತಡಿ, ಈಗ ಶಂಕರ ಬರುತ್ತಾನೆ. ಆಮೇಲೆ ವಿಚಾರಿಸೋಣ ಎನ್ನುತ್ತಿದ್ದಂತೆ ಅಂದಿನ ಭಿಕ್ಷಾಟನೆಯ ಭಿಕ್ಷೆಯನ್ನು ಗುರು ಪತ್ನಿಗೆ ಒಪ್ಪಿಸಿ. ಗುರುಗಳ ಬಳಿ ಬಂದು ನಿಂತನು. ಗುರು ಹೇಳಿದರು ಶಂಕರ ನಿನಗೆ ಬಡ ಗೃಹಿಣಿಯ ಮನೆ ಭಿಕ್ಷೆಗೆ ಹೋಗಬೇಡ ಎಂದು ಹೇಳಿದ್ದೆ ಮತ್ತೇಕೆ ಹೋದೆ ನಿಧಾನವಾಗಿ ಕೇಳಿದರು. ಶಂಕರ ಹೇಳಿದ ಪಾಪ ಆ ತಾಯಿಯ ಬಡತನ ಗೊತ್ತಿದ್ದೂ ಸಹ ಅಲ್ಲಿಯೇ ಭಿಕ್ಷೆಗೆ ಹೋಗಬೇಕು ಎನಿಸಿತು ಹೋಗಿದ್ದೆ ಆ ತಾಯಿಗೆ ಕೊಡಲು ಏನೂ ಇರಲಿಲ್ಲ. ಆದರೆ ತನಗೆ ಇಲ್ಲದಿದ್ದರೂ ಮನೆಯಲ್ಲಿದ್ದ ಒಣಗಿದ ನಾಲ್ಕು ನಲ್ಲಿ ಕಾಯಿಗಳನ್ನೇ ನನ್ನ ಜೋಳಿಗೆಗೆ ಹಾಕಿದಳು. ನಾನು ಮನಸ್ಸಿನಲ್ಲಿ ಮಹಾಲಕ್ಷ್ಮಿ ಯನ್ನು ನೆನೆದು ಈ ಬಡ ತಾಯಿಯ ಮನೆಗೆ ಕೃಪೆ ತೋರು ಎಂದು ಲಕ್ಷ್ಮಿಯ ಸ್ತೋತ್ರ ಪಟಿಸಿ ಪ್ರಾರ್ಥಿಸಿ ಹೊರಟೆ ಎಂದು ಹೇಳಿ, ನನ್ನನ್ನು ಕ್ಷಮಿಸಿ ಎಂದ ಶಂಕರ.

ಗುರುಗಳು ಕೇಳಿದರು, ಶಂಕರ ಅಲ್ಲಿ ನೀನು ಯಾವ ಸ್ತೋತ್ರವನ್ನು ಹೇಳಿದೆ ಎಂದಾಗ

“ಅಂಗಂ ಹರೇ: ಪುಲಕ ಭೂಷಣ ಮಾಶ್ರಯಂತೀ
ಭೃಂಗಾಂಗನೇವ ಮುಕುಲಾಭರಣಂ ತಮಾಲಂ!
ಅಂಗೀಕೃತಾಖಿಲ ವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಲದೇವತಾಯಾ:

ಇದು 22 ಶ್ಲೋಕಗಳ ಕಾವ್ಯಧಾರೆ (ಕೆಲವು ಕಡೆ 21 ಎನ್ನುತ್ತಾರೆ ನನ್ನ ಹತ್ತಿರ 22 ಶ್ಲೋಕಗಳಿವೆ) ಇದನ್ನು ಹೇಳಿದೆ ಎಂದನು. ಗುರುಗಳು ಅತ್ಯಂತ ಸಂತೋಷದಿಂದ ಶಂಕರನನ್ನು ಅಪ್ಪಿಕೊಂಡು ಮಗು ನೀನು ಹೇಳಿದ ಈ ಸ್ತೋತ್ರದ ಮಹಿಮೆ ಏನು ಅಂತ ನಿನಗೆ ಗೊತ್ತೇ ಎಂದು ಕೇಳಿದರು. ಇಲ್ಲ ಗುರುಗಳೇ ಆ ಬಡ ತಾಯಿಯ ಕಷ್ಟವನ್ನು ಪರಿಹರಿಸಲಿ ಎಂಬ ಉದ್ದೇಶ ಮಾತ್ರ ನನ್ನದಾಗಿತ್ತು ಎಂದನು. ಗುರುಗಳು, ಮಗು ಶಂಕರ ನಿನ್ನಂಥ ಮೇಧಾವಿ ವಿದ್ಯಾರ್ಥಿಯನ್ನು ಪಡೆದ ನಾನೇ ಧನ್ಯ. ತಾಯಿ ಮಹಾಲಕ್ಷ್ಮಿಯನ್ನು ಕರೆದ ನಿನ್ನ ಸ್ತೋತ್ರದಿಂದ ಈ ಬಡ ಗೃಹಿಣಿಯ ಮನೆಯಲ್ಲಿ ಮಹಾಲಕ್ಷ್ಮಿ ಚಿನ್ನದ ನೆಲ್ಲಿಕಾಯಿಯ ಮಳೆಯನ್ನೇ ಧಾರಾಕಾರವಾಗಿ ಸುರಿಸಿದ್ದಾಳೆ. ಇನ್ನು ಮುಂದೆ ನೀನು ಪಟಿಸಿದ ಈ ಸ್ತೋತ್ರ “ಕನಕಧಾರ ಸ್ತೋತ್ರ” ಎಂದೇ ಪ್ರಸಿದ್ಧಿ ಆಗಲಿ. ಯಾರು ಈ ಸ್ತೋತ್ರವನ್ನು ಭಕ್ತಿ ಶ್ರದ್ಧೆಯಿಂದ ಪಠಿಸಿ ಆರಾಧಿಸುತ್ತಾರೋ ಅವರಿಗೆ ತಾಯಿ ಮಹಾಲಕ್ಷ್ಮಿ ಅನುಗ್ರಹಿಸಲಿ ಎಂದು ಹರಸಿ ದರು. ಅಂದಿನಿಂದ ಯಾರಿಗೆ ಯಾವುದೇ ಕಷ್ಟ ಕಾರ್ಪಣ್ಯಗಳಿದ್ದರೂ, ಬಾಲಕ ಶಂಕರಾಚಾರ್ಯ ರಚಿಸಿದ ಕನಕಧಾರ ಸ್ತೋತ್ರವನ್ನು ಭಕ್ತಿಯಿಂದ ಕ್ರಮವಾಗಿ (ಮಂಡಲ ಕ್ರಮದಲ್ಲಿ)ಪಠಿಸಿದರೆ ಅವರಿಗೆ ಸಕಲ ಐಶ್ವರ್ಯಗಳು ಒದಗಲಿ ಅವರ ಕಷ್ಟಗಳು ಪರಿಹಾರವಾಗಲಿ ಎಂದು ಹಾರೈಸಿದ್ದು ,ಇಂದಿಗೂ ಎಂದೆಂದಿಗೂ, ಎಲ್ಲರೂ ಮಹಾಲಕ್ಷ್ಮಿಯನ್ನು ಸ್ತುತಿಸಿ ಲಕ್ಷ್ಮೀಯ ಕೃಪಾಕಟಾಕ್ಷವನ್ನು ಪಡೆಯುವ ಅಪೂರ್ವವಾದ ಅವಕಾಶ ಒದಗಿ ಬಂದಿತು.

ಕನಕಧಾರಾ ಸ್ತೋತ್ರಮ್:-
ಧ್ಯಾನಮ್ !

ವಂದೇ ವಂದಾರು ಮಂದಾರಮಿಂದಿರಾನಂದಕಂದಲಮ್!
ಅಮಂದಾನಂದಸಂದೋಹಬಂಧುರಂ ಸಿಂಧುರಾನನಮ್!!

ಅಂಗಂ ಹರೇ: ಪುಲಕ ಭೂಷಣ ಮಾಶ್ರಯಂತೀ
ಭೃಂಗಾಂಗನೇವ ಮುಕುಲಾಭರಣಂ ತಮಾಲಂ!
ಅಂಗೀಕೃತಾಖಿಲ ವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಲದೇವತಾಯಾ!!

ASTRO
ASTRO

ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564

Background of the hymn “Kanakadhara” showered with wealth:-