ಗೃಹಲಕ್ಷ್ಮಿ ಹಣ ಬಂದಿಲ್ವಾ , ಈ ನಂಬರ್‌ಗೆ ಕರೆ ಮಾಡಿ ಬೇಗ

gruhalakshmi yojana
gruhalakshmi yojana

ಬೆಂಗಳೂರು : ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿಗೃಹಲಕ್ಷ್ಮಿಯೋಜನೆ ಪ್ರಮುಖವಾಗಿದ್ದು, ಬಿಪಿಎಲ್‌ ಕುಟುಂಬದ ಮಹಿಳೆಯರಿಗೆ ಸರಕಾರ ಮಾಸಿಕ 2 ಸಾವಿರ ರೂ.ಗಳನ್ನು ನೇರ ಅವರ ಖಾತೆಗೆ ವರ್ಗಾವಣೆ ಮಾಡುತ್ತದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವುದು ಇದರ ಉದ್ದೇಶ.ಆದರೆ ಇತ್ತೀಚಿಗೆ ಗೃಹಲಕ್ಷ್ಮಿ ಹಣ ಖಾತೆಗೆ ಬಂದಿಲ್ಲ ಎಂದು ಯಜಮಾನಿಯರು ದೂರಿದ್ದಾರೆ. ಇದೀಗ ಖಾತೆಗೆ 24ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಹಾಗಾದ್ರೆ ಹಣ ಜಮೆ ಆಗಿದೆಯೋ ಇಲ್ವೋ ಅನ್ನೋದಕ್ಕೆ ಇಲ್ಲಿದೆ ಮಾಹಿತಿ. 

ಇದನ್ನು ಮಿಸ್‌ ಮಾಡದೇ ಓದಿ: ಪುಷ್ಯ ಪುತ್ರದಾ ಏಕಾದಶಿ 2025ರ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ, ಮಂತ್ರ

ಇದನ್ನು ಮಿಸ್‌ ಮಾಡದೇ ಓದಿ: ಟೀ ಬಿಸಿ ಮಾಡಿ ಕುಡಿಯುವುದು ವಿಷಕ್ಕೆ ಸಮ

ಇದನ್ನು ಮಿಸ್‌ ಮಾಡದೇ ಓದಿ: ಅಂಚೆ ಇಲಾಖೆಯಿಂದ 30,000 ಹುದ್ದೆಗಳಿಗೆ ಶೀಘ್ರದಲ್ಲಿ ಅರ್ಜಿ ಆಹ್ವಾನ

ಹೌದು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲವೇ? ಯಾವಾಗ ಬರುವುದೋ ಎಂದು ಅಧಿಕಾರಿಗಳ ಬಳಿ ಅಲೆದು ಬೇಸತ್ತಿದ್ದೀರಾ? ಇನ್ನು ಮುಂದೆ ಯಾರ ಬಳಿಯೂ ಹೋಗಬೇಕಿಲ್ಲ. ಇದಕ್ಕಾಗಿ ಬಂದಿದೆ ಸಹಾಯವಾಣಿ! ಹೌದು, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ‘181’ ಸಂಖ್ಯೆಯ ಸಹಾಯವಾಣಿಯನ್ನು ತೆರೆದಿದ್ದು, ಇದರಡಿ ಇದೇ ಮೊದಲ ಬಾರಿಗೆ ಗೃಹಲಕ್ಷ್ಮಿಯನ್ನೂ ತರಲಾಗಿದೆ.

gruhalakshmi yojana
gruhalakshmi yojana

ಆದರೆ, ಕೆಲವೊಮ್ಮೆ ಎರಡು ತಿಂಗಳು, ಮೂರು ತಿಂಗಳಾದರೂ ಗೃಹಲಕ್ಷ್ಮಿ ಹಣ ಬಂದಿರುವುದಿಲ್ಲ. ಇಂತಹ ಸಂದರ್ಭದಲ್ಲಿಫಲಾನುಭವಿ ಮಾತ್ರವಲ್ಲದೆ, ಮನೆಯ ಬಹುತೇಕ ಸದಸ್ಯರು ಆಗಾಗ್ಗೆ ಖಾತೆ ಹಾಗೂ ಮೊಬೈಲ್‌ನಲ್ಲಿಸಂದೇಶ ಪರಿಶೀಲಿಸುತ್ತಾರೆ. ಆಗಲೂ ಸಮಾಧಾನವಾಗದೆ, ತಮ್ಮ ನೆರೆಹೊರೆಯವರನ್ನು ಕೇಳುವುದು, ಇಲ್ಲವೇ ಕಚೇರಿಗಳಿಗೆ ಭೇಟಿ ನೀಡಿ ‘ಇನ್ನೂ ಗೃಹಲಕ್ಷ್ಮಿ ಹಣ ಬಂದಿಲ್ಲ. ಯಾವಾಗ ಬರುತ್ತದೆ’ ಎಂದು ಕೇಳಿ ವಾಪಸ್ಸಾಗುತ್ತಿರುತ್ತಾರೆ. ಇನ್ನು ಮುಂದೆ ಎಲ್ಲಿಯೂ ಹೋಗಬೇಕಿಲ್ಲ. ನಿಮ್ಮ ಮೊಬೈಲ್‌ನಿಂದಲೇ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

gruhalakshmi
gruhalakshmi

ಕೆಲವೊಮ್ಮೆ ತಾಂತ್ರಿಕ ದೋಷಗಳಿಂದಲೋ ಅಥವಾ ಇ-ಕೆವೈಸಿ ಮಾಡಿಸದಿದ್ದರೆ ಇಲ್ಲವೇ ತೆರಿಗೆ ಪಾವತಿಸುತ್ತಿದ್ದರೆ ಇಂತಹ ಸಂದರ್ಭದಲ್ಲಿಗೃಹಲಕ್ಷ್ಮಿ ಹಣ ನಿಲ್ಲಿಸಲಾಗಿರುತ್ತದೆ. ಈ ಬಗ್ಗೆ ಸಹಾಯವಾಣಿಗೆ ಕರೆ ಮಾಡುವ ಮೂಲಕ ನಿಖರವಾದ ಮಾಹಿತಿ ಪಡೆಯಬಹುದು. 181ಕ್ಕೆ ಕರೆ ಮಾಡಿದರೆ ಅಲ್ಲಿನ ಆಪರೇಟರ್‌ಗಳು ದೂರುದಾರರಿಂದ ಮಾಹಿತಿ ಪಡೆಯುತ್ತಾರೆ. ನಂತರ ದೂರುದಾರರು ಯಾವ ತಾಲೂಕಿಗೆ ಬರುವರೋ ಆ ತಾಲೂಕಿನ ಸಂಬಂಧಪಟ್ಟ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸುವರು. ಅವರಿಂದ ಮಾಹಿತಿ ಪಡೆದು, ಫಲಾನುಭವಿಗಳಿಗೆ ತಲುಪಿಸುವರು.

If the money is not deposited or there are any deficiencies, call 181 If the money has not been received for 2-3 months, call immediately and get the information Operators who receive complaints from those who call 181 will forward the information to the Women’s Welfare Department