ರಾಜ್ಯದಲ್ಲಿ ರೈಲ್ವೇ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧ : ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ

ರಾಮನಗರ: ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕರ್ನಾಟಕ ರಾಜ್ಯದಲ್ಲಿ ಸುಮಾರು 45 ಸಾವಿರ ಕೋಟಿ ರೂ.ಗಳ ರೈಲ್ವೇ ಕಾಮಗಾರಿಗಳು ಅನುಮೋದನೆಗೊಂಡು, ಪ್ರಾರಂಭಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 11,800 ಕೋಟಿ ರೂ.ಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕೆಲವೇ ದಿನಗಳಲ್ಲಿ ಅವುಗಳು ಪೂರ್ಣಗೊಳ್ಳಲಿದೆ. ತುಮಕೂರು-ದಾವಣಗೆರೆ ಕಾಮಗಾರಿಗಳನ್ನು ಸಹ ಕೈಗೆತ್ತಿಕೊಳ್ಳಲಾಗಿದೆ. ರೈಲ್ವೇ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಸದಾ ಬದ್ಧವಾಗಿದೆ ಎಂದು ಎಂದು ಕೇಂದ್ರದ ರೈಲ್ವೇ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವರಾದ ವಿ. ಸೋಮಣ್ಣ (V. Somanna) ಅವರು ತಿಳಿಸಿದರು.

ಅವರು ಡಿ. 26ರ ಶುಕ್ರವಾರ ರಾಮನಗರದ ರೈಲು ನಿಲ್ದಾಣದಲ್ಲಿ ಅಮೃತ್ ಭಾರತ್ (Amrit Bharat) ನಿಲ್ದಾಣ ಕಾಮಗಾರಿಗಳ ಪರಿಶೀಲನೆ ನಡೆಸಿ, ಮಾತನಾಡಿದರು.

ಇದನ್ನು ಮಿಸ್‌ಮಾಡದೇ ಓದಿ: ಆಂಜನೇಯನ ಪತ್ನಿ ಮತ್ತು ಮಗನ ಬಗ್ಗೆ ನಿಮಗೆ ಗೊತ್ತೇ

ಇದನ್ನು ಮಿಸ್‌ಮಾಡದೇ ಓದಿ: ಮೊಟ್ಟೆ ಸೇವನೆ ಸಂಪೂರ್ಣ ಸುರಕ್ಷಿತ : ಸ್ಯಾಂಪಲ್ ಟೆಸ್ಟ್ ನಲ್ಲಿ ವರದಿ ಬಹಿರಂಗ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು (Central and state governments) ಒಂದು ನಾಣ್ಯದ ಎರಡು ಮುಖಗಳಾಗಿ ಕೆಲಸ ಮಾಡಿದರೆ ಸಾಧನೆ ಎಂಬ ದಿಕ್ಸೂಚಿಯನ್ನು ಕಾಣಬಹುದು. ಗ್ರಾಮ ಪಂಚಾಯಿತಿ, ಹೋಬಳಿ, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದು ಪ್ರಧಾನಮಂತ್ರಿಯವರ ಆಶಯವಾಗಿದೆ. ಜನರಿಗೆ ಸರ್ಕಾರದ ಸವಲತ್ತುಗಳನ್ನು ಒದಗಿಸುವುದು ಕೇಂದ್ರ ಸರ್ಕಾರದ ದೂರ ದೃಷ್ಠಿಯ ಚಿಂತನೆಯಾಗಿದೆ ಎಂದರು.

ರೈಲ್ವೇ (Railway) ಅಭಿವೃದ್ಧಿಯ ಸಂಕೇತ, ಸುಮಾರು ವರ್ಷಗಳಿಂದ ಕೆಲವು ಎಕ್ಸ್ಪ್ರೆಸ್ ರೈಲುಗಳು ರಾಮನಗರದಲ್ಲಿ ನಿಲ್ಲಬೇಕೆಂಬುದು ಸ್ಥಳೀಯರ ಬೇಡಿಕೆಯಾಗಿತ್ತು, ಅದನ್ನು ಅರಿತ ರೈಲ್ವೇ ಇಲಾಖೆ ಜನರ ಬೇಡಿಕೆಯನ್ನು ಇನ್ನೊಂದು ತಿಂಗಳೊಳಗೆ ಈಡೇರಿಸಲಾಗುವುದು. ರಾಮನಗರದ ರೈಲ್ವೇ ಅಂಡರ್‌ಪಾಸ್ ಅಭಿವೃದ್ಧಿಗೆ ಸ್ಥಳೀಯ ಶಾಸಕರು ಬೇಡಿಕೆಯಿಟ್ಟಿದ್ದಾರೆ. ಇದನ್ನು ಸಹ ಆದಷ್ಟು ಬೇಗ ಕ್ರಮಕೈಗೊಳ್ಳಲಾಗುವುದು, ರಾಮನಗರದ ರೈಲು ನಿಲ್ದಾಣದಲ್ಲಿ ಕಾಯುವಿಕೆ ಕೊಠಡಿ, ಪಾರ್ಕಿಂಗ್, ಸುಸ್ಸಜಿತ ಕಟ್ಟಡವನ್ನು ಅಭಿವೃದ್ಧಿ ಪಡಿಸಿ, ಒಂದೂವರೆ ತಿಂಗಳೊಳಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.

ಬೆಂಗಳೂರಿಗೆ ಹತ್ತಿರವಿರುವ ರಾಮನಗರ, ತುಮಕೂರು ಜಿಲ್ಲೆಗಳು ಶರವೇಗದಲ್ಲಿ ಬೆಳೆಯುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರವು ಸವಲತ್ತುಗಳನ್ನು ನೀಡಲು ಸಿದ್ದವಿದೆ, ಪ್ರಯಾಣಿಕರ ಅನುಕೂಲಕ್ಕಾಗಿ ಮೆಮೊ ರೈಲುಗಳನ್ನು ಮೈಸೂರಿಗೆ ಓಡಿಸಲಾಗುತ್ತಿದೆ, ರಾಮನಗರ-ಮೈಸೂರು ಡಬ್ಲಿಂಗ್ ಲೈನ್‌ಗೆ ಕೇಂದ್ರ ಸರ್ಕಾರದಿಂದ 825 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ, 2014ರಲ್ಲಿ ಮಂಜೂರಾಗಿರುವ ಎಲೆಕೆರೆ ಗೇಟ್ ಎಲ್‌ಸಿ-47 ಬದಲಿಗೆ ಸುಮಾರು 19 ಕೋಟಿ ರೂ.ಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಇದನ್ನು ಸಹ ಲೋಕಾರ್ಪಣೆ ಮಾಡಲಾಗುವುದು. ಇನ್ನೊಂದು ತಿಂಗಳಲ್ಲಿ ಒಡೆಯರ್ ಎಕ್ಸ್ಪ್ರೆಸ್ ಹಾಗೂ ಮೈಲಾಡ್ ತೊರೆ ಎಕ್ಸ್ಪ್ರೆಸ್ ರೈಲುಗಳು ರಾಮನಗರದಲ್ಲಿ ನಿಲ್ಲುಲು ಆದೇಶ ಹೊರಡಿಸಲಾಗುವುದು ಎಂದರು.

Central government committed to railway development in the state V. Somanna
Central government committed to railway development in the state V. Somanna

ಹೆಜ್ಜಾಲ-ಚಾಮರಾಜನಗರ ರೈಲು ಯೋಜನೆಗೆ ಸ್ಥಳೀಯ ಶಾಸಕರು, ರಾಜ್ಯದ ಉಪಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ರೈಲು ಮಾರ್ಗ ನಿರ್ಮಾಣಕ್ಕೆ ಅಗತ್ಯ ಭೂಮಿಯನ್ನು ನೀಡಿ, ಜಿಲ್ಲಾಧಿಕಾರಿಗಳ ಮೂಲಕ ಪತ್ರ ರವಾನಿಸಿದರೆ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುದು. ಅದೇ ರೀತಿ ಬೆಂಗಳೂರು ಸುತ್ತಮುತ್ತಲು 101 ಮೇಲ್ಸೇತುವೆ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಸುಮಾರು 600 ಮೇಲ್ಸೇತುವೆ ನಿರ್ಮಿಸಲಾಗುವುದು. ಅಭಿವೃದ್ಧಿ ಮರೀಚಿಕೆಯಾಗಬಾರದು. ರೈಲ್ವೇ 2ನೇ ಹಂತದ ಅಭಿವೃದ್ಧಿ ಕಾಮಗಾರಿಗಳು 14 ವರ್ಷಗಳ ಹಿಂದೆ ಶೇ.27 ರಷ್ಟು ಆಗಿತ್ತು ಆದರೆ ಈಗ ಶೇ. 98 ರಷ್ಟು ಅಭಿವೃಧ್ಧಿ ಪಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ (Bangalore Rural Lok Sabha Constituency) ಸಂಸದರಾದ ಡಾ. ಸಿ.ಎನ್. ಮಂಜುನಾಥ್, ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಇಕ್ಬಾಲ್ ಹುಸೇನ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಕೆ.ರಾಜು, ರಾಮನಗರ ನಗರಸಭೆ ಅಧ್ಯಕ್ಷರಾದ ಶೇಷಾದ್ರಿ (ಶಶಿ), ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ನೈರುತ್ಯ ರೇಲ್ವೆಯ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೇ ವ್ಯವಸ್ಥಾಪಕ ಪರಿಕ್ಷಿತ್ ಮೋಹಲ್ ಪೂರ್ಯ, ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಾಣೇಶ್ ಕೌಲಗಿ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕೃಷ್ಣ ಚೈತನ್ಯ, ಉಪ ಮುಖ್ಯ ಯೋಜನಾಧಿಕಾರಿ (ಗತಿಶಕ್ತಿ) ಶುಭಂ ಶರ್ಮ, ಹಿರಿಯ ವಿಭಾಗೀಯ ಇಂಜಿನಿಯರ್ ರಾಜೀವ್ ಶರ್ಮ, ಸ್ಟೇಷನ್ ಮಾಸ್ಟರ್ ಕೆ.ಟಿ. ತಗಡಯ್ಯ, ರೈಲ್ವೇ ಇಲಾಖೆ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.