kea exam : KSDL, ಕೃಷಿ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆ ದಿನಾಂಕ ಮುಂದೂಡಿಕೆ, ಇಲ್ಲಿದೆ ಹೊಸ ದಿನಾಂಕ

kea exam
kea exam

ಬೆಂಗಳೂರು: ಕೆ ಎಸ್ ಡಿ ಎಲ್ ಮತ್ತು ಕೃಷಿ ಮಾರಾಟ ಇಲಾಖೆಯ ವಿವಿಧ ಹುದ್ದೆಗಳಿಗೆ ಜನವರಿ 10 ಮತ್ತು 12ರ ಬದಲಿಗೆ ಜನವರಿ 18ರಂದು ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.  

ಇದನ್ನು ಮಿಸ್ ಮಾಡದೇ ಓದಿ: ಪುಷ್ಪ 2 ಕಾಲ್ತುಳಿತ ಪ್ರಕರಣ, ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಕೆ, ಅಲ್ಲು ಅರ್ಜುನ್ ಆರೋಪಿ

ಇದನ್ನು ಮಿಸ್ ಮಾಡದೇ ಓದಿ: 12 ಕೋಟಿ ಗಡಿ ದಾಟಿದ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ

ಕೃಷಿ‌ ಮಾರಾಟ ಇಲಾಖೆಯ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗೆ ಜನವರಿ 10ರಂದು ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿಮಿಟೆಡ್‌ ನ ಕಿರಿಯ ಅಧಿಕಾರಿ (ಉತ್ಪಾದನೆ ಮತ್ತು ನಿರ್ವಹಣೆ), ಕಿರಿಯ ಅಧಿಕಾರಿ (ಸಾಮಗ್ರಿ ಮತ್ತು ಉಗ್ರಾಣ) ಹುದ್ದೆಗಳಿಗೆ ಜನವರಿ 12ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಈ ದಿನಾಂಕಗಳ ಬದಲಿಗೆ ಜನವರಿ 18 ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಉಳಿದಂತೆ ಜನವರಿ 19ರ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹೆಚ್ಚಿನ ವಿವರಗಳಿಗೆ ಕೆಇಎ ವೆಬ್ ಸೈಟ್ ನೋಡಲು ಅವರು ಕೋರಿದ್ದಾರೆ.

 

 

KSDL, Agriculture Department recruitment exam date postponed, here is the new date
KSDL, Agriculture Department recruitment exam date postponed, here is the new date

ಬಳ್ಳಾರಿ ಮಹಾನಗರ ಪಾಲಿಕೆ: ನಾಮಫಲಕ, ಜಾಹೀರಾತುಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ನಾಮಫಲಕ, ಜಾಹೀರಾತುಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿ ಬಳಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಅವರು ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿರುವ ಉದ್ದಿಮೆದಾರರ ನಾಮಫಲಕಗಳಲ್ಲಿ ಹಾಗೂ ಜಾಹೀರಾತು ಮಾಲೀಕರು ಮುದ್ರಣ ಮಾಡುವ ಜಾಹೀರಾತುಗಳಲ್ಲಿ ಕಡ್ಡಾಯವಾಗಿ ಶೇ.60 ರಷ್ಟು ಕನ್ನಡ ಭಾಷೆಯನ್ನು ಬಳಸಬೇಕು. ತಪ್ಪಿದಲ್ಲಿ ಉದ್ದಿಮೆಗಳ ಹಾಗೂ ಮುದ್ರಣ ಮಾಡುವ ಜಾಹೀರಾತು ಮಾಲೀಕರ ಪರವಾನಿಗೆಗಳನ್ನು ರದ್ದುಪಡಿಸಿ ಉದ್ದಿಮೆಯನ್ನು ಸ್ಥಗಿತಗೊಳಿಸಲು ಕ್ರಮ ವಹಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಕನ್ನಡವು ಆಡಳಿತ ಭಾಷೆಯಾಗಿದ್ದು, ಎಲ್ಲಾ ಉದ್ದಿಮೆಗಳ ನಾಮಫಲಕಗಳಲ್ಲಿ ಹಾಗೂ ಜಾಹೀರಾತು ಮುದ್ರಣದಾರರು ಜಾಹೀರಾತು ಮುದ್ರಿಸುವ ಸಮಯದಲ್ಲಿ ಶೇಕಡ 60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಲು ಸರ್ಕಾರದಿಂದ ಕಾಯ್ದೆ ಜಾರಿಯಾಗಿದೆ.

ಹಾಗಾಗಿ ಸರ್ಕಾರದ ಆದೇಶದನ್ವಯ ಯಾವುದೇ ಉದ್ದಿಮೆಯ ಹಾಗೂ ಮುದ್ರಣ ಮಾಡುವ ಜಾಹೀರಾತುಗಳಲ್ಲಿ ಮಾಲೀಕರು ಪ್ರಧಾನವಾಗಿ ಶೇಕಡ 60 ರಷ್ಟು ಸ್ಥಳ ಮೀಸಲಿರಿಸಿ ಕನ್ನಡದಲ್ಲಿರತಕ್ಕದ್ದು.
ನಾಮಫಲಕದಲ್ಲಿ ಕನ್ನಡ ಭಾಷೆ ನಾಮಫಲಕದ ಮೇಲ್ಭಾಗದಲ್ಲಿ ಪ್ರದರ್ಶಿತವಾಗುವಂತೆ ಹಾಗೂ ಅನ್ಯಭಾಷೆಯ ನಾಮಫಲಕಕ್ಕಿಂತ ಕನ್ನಡ ಭಾಷೆ ನಾಮಫಲಕ ಮೇಲ್ಭಾಗದಲ್ಲಿರುವಂತೆ ಹಾಗೂ ದೊಡ್ಡದಾಗಿರುವಂತೆ ಅಳವಡಿಸಬೇಕು.

ಜನವರಿ 05 ರೊಳಗಾಗಿ ಪಾಲಿಕೆ ವ್ಯಾಪ್ತಿಯ ಎಲ್ಲಾ ಉದ್ದಿಮೆ ಹಾಗೂ ಮುದ್ರಣ ಮಾಡುವ ಜಾಹೀರಾತು ಮಾಲೀಕರು ನಾಮಫಲಕಗಳು ಹಾಗೂ ಮುದ್ರಣ ಮಾಡುವ ಜಾಹೀರಾತುಗಳಲ್ಲಿ ಪ್ರಧಾನವಾಗಿ ಕನ್ನಡ ಬಳಸಬೇಕು.

ತಪ್ಪಿದಲ್ಲಿ ಅಂತಹ ನಾಮಫಲಕ, ಮುದ್ರಣ ಜಾಹೀರಾತುಗಳನ್ನು ತೆರವುಗೊಳಿಸಿ ನಿಯಮಾನುಸಾರ ದಂಡವಿಧಿಸಿ ಉದ್ದಿಮೆಗಳನ್ನು ಸ್ಥಗಿತಗೊಳಿಸಲು ಕ್ರಮವಹಿಸಲಾಗುವುದು ಎಂದು ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

KSDL, Agriculture Department recruitment exam date postponed, here is the new date