ಬೆಂಗಳೂರು : ಅಶ್ಲೀಲ ಕಮೆಂಟ್ ಬಗ್ಗೆ ವಿಜಯಲಕ್ಷ್ಮಿ ದೂರು ನೀಡಿದ ವಿಚಾರವಾಗಿ ಬೆಂಗಳೂರಿನಲ್ಲಿ ನಟ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ನಾನು ಜಗಳ ಮಾಡುವುದಕ್ಕೆ ಸಿನಿಮಾ ಇಂಡಸ್ಟ್ರಿಗೆ ಬಂದಿಲ್ಲ. ಎಲ್ಲರನ್ನೂ ನಗಿಸಲು ಮತ್ತು ಮನರಂಜಿಸಲು ಚಿತ್ರರಂಗಕ್ಕೆ ಬಂದಿದ್ದೇನೆ. ಪ್ರೀತಿಯಿಂದ ತಾಯಿ ಹೊಡಿಯುವುದೇ ಬೇರೆ ಅದೇ ಪಕ್ಕದ ಮನೆಯವರು ಹೊಡೆಯುವುದೇ ಬೇರೆಯಾಗುತ್ತದೆ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಇದನ್ನು ಮಿಸ್‌ಮಾಡದೇ ಓದಿ: ಕೆಟ್ಟ ಕಮೆಂಟ್ ಮಾಡುವವರು ವೇಸ್ಟ್ ನನ್ಮಕ್ಕಳು: ಕಿಚ್ಚ ಸುದೀಪ್
ಇದನ್ನು ಮಿಸ್‌ಮಾಡದೇ ಓದಿ: ಸೈಟ್ ಮನೆ ಖರೀದಿಸುವಾಗ ಈ ‘ಪ್ರಮಾಣಪತ್ರ’ ಕಡ್ಡಾಯ
ಬೆಂಗಳೂರಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಯುದ್ಧ ಅಂತ ಬಂದಾಗ ನನ್ನ ವಿಚಾರ ಬಗ್ಗೆ ನಾನು ಮಾತನಾಡುತ್ತೇನೆ. ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಚೆನ್ನಾಗಿದ್ದೇವೆ ನನ್ನಲ್ಲಿರುವ ಹುಡುಗರು ಸರಿ ಇಲ್ಲ ಅಂದರೆ ಸರಿಪಡಿಸಿಕೊಳ್ಳೋಣ. ನನಗೆ ಹೊಡೆದರೆ ಕಪಾಳಕ್ಕೆ ಹೊರಡಿಸಿಕೊಳ್ಳುವಷ್ಟು ನಾನು ಒಳ್ಳೆಯವನಲ್ಲ ಪ್ರೀತಿಯಿಂದ ತಾಯಿ ಹೊಡಿಯುವುದೇ ಬೇರೆ ಅದೇ ಪಕ್ಕದ ಮನೆಯವರು ಹೊಡೆಯುವುದೇ ಬೇರೆಯಾಗುತ್ತದೆ ಎಂದು ನಟ ಕಿಚ್ಚ ಸುದೀಪ್ ಪರೋಕ್ಷವಾಗಿ ವಿಜಯಲಕ್ಷ್ಮಿ ಅವರಿಗೆ ಟಾಂಗ್ ನೀಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಇದೀಗ ಮತ್ತೆ ಸ್ಟಾರ್ ವಾರ್ ಶುರುವಾಗಿದ್ದು ಡೆವಿಲ್ ಸಿನಿಮಾ ರಿಲೀಸ್ ಬಳಿ ಹಲವು ಕಿಡಿಗೇಡಿಗಳು ನಟ ಕಿಚ್ಚ ಸುದೀಪ್ ಹಾಗೂ ಅವರ ಮಗಳ ಫೋಟೋ ಎಡಿಟ್ ಮಾಡಿ ಪೋಸ್ಟ್ ಮಾಡಿ ಕೆಟ್ಟದಾಗಿ ಕಮೆಂಟ್ ಹಾಕಿದ್ದರು. ಈ ವಿಚಾರವಾಗಿ ಕಿಚ್ಚ ಸುದೀಪ್ ಇದೀಗ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು ಕೆಟ್ಟ ಕಮೆಂಟ್ಸ್ ಹಾಕುವವರು ವೇಸ್ಟ್ ನನ್ನ ಮಕ್ಕಳು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ನನ್ನ ಮಗಳು ನನಗಿಂತ ದೊಡ್ಡದಾಗಿ ಬೆಳೆಯುತ್ತಾಳೆ ಎಂದು ಕಿಡಿ ಕಾರಿದ್ದಾರೆ.

ನಟ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಬಗ್ಗೆ ಕೆಟ್ಟ ಕಮೆಂಟ್ ವಿಚಾರಕ್ಕೆ ಸಂಬಂಧಪಟ್ಟಂತೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ನಾವು ಸೆಲೆಬ್ರೇಶನ್ ಬಗ್ಗೆ ಮಾತನಾಡೋಣ. ಅಂತಹ ವಿಚಾರಗಳ ಬಗ್ಗೆ ಮಾತನಾಡಿಯೇ ಚೀಪ್ ಆಗಿರೋದು ಅವರ ಬಗ್ಗೆ ಮಾತನಾಡಿ ಟೈಂ ವೇಸ್ಟ್ ಮಾಡಲ್ಲ. ಕೆಟ್ಟ ಕಮೆಂಟ್ ಮಾಡುವವರು ವೇಸ್ಟ್ ನನ್ ಮಕ್ಕಳು. ನಾನು ಫೇಸ್ ಮಾಡಿದ್ದಕ್ಕಿಂತ ಅದರ ಹತ್ತರಷ್ಟು ಫೇಸ್ ಮಾಡುತ್ತಾಳೆ. ಪುತ್ರಿ ಸಾನ್ವಿ ನನಗಿಂತ ದೊಡ್ಡದಾಗಿ ಬೆಳೆಯುತ್ತಾಳೆ ಎಂದು ಬೆಂಗಳೂರಿನಲ್ಲಿ ನಟ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದರು.
Being beaten by a mother is one thing, being beaten by a neighbor is another Kiccha Tong for Vijayalakshmi













Follow Me