ಕರ್ನಾಟಕದ ಈ ಗ್ರಾಮದಲ್ಲಿ ಪ್ರತಿ ರಾತ್ರಿ ಮೊಬೈಲ್‌, ಟಿ.ವಿ ಬಂದ್‌, ಕಾರಣ ಏನು ಗೊತ್ತಾ

Karnataka Halaga village in Belagavi district has launched a daily Digital Detox programme to curb screen time.
Karnataka Halaga village in Belagavi district has launched a daily Digital Detox programme to curb screen time.

ಬೆಳಗಾವಿ : ಡಿಜಿಟಲ್ ಯುಗದಲ್ಲಿ ‘ಡಿಜಿಟಲ್ ಡಿಟಾಕ್ಸ್’ಗೆ ಬೆಳಗಾವಿ ಜಿಲ್ಲೆಯ ಹಲಗಾ ಗ್ರಾಮಪಂಚಾಯತಿಯ ಮಾದರಿ ಹೆಜ್ಜೆಯಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು,ಆಧುನಿಕತೆ ಬೆಳೆದಂತೆ ಜನರ ಜೀವನಶೈಲಿ, ಸಾಮಾಜಿಕ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಡಿಜಟಲೀಕರಣ ಮತ್ತು ಸಾಮಾಜಿಕ ಮೌಲ್ಯ, ಸಂಬಂಧಗಳು ಜೊತೆಜೊತೆಗೆ ಸಾಗಬೇಕಾದ ಅವಶ್ಯಕತೆ ಇದೆ. ಇವುಗಳಲ್ಲಿ ಒಂದರ ನಂಟನ್ನು ಕಡಿದುಕೊಂಡರೂ ಭವಿಷ್ಯವನ್ನು ರೂಪಿಸುವ ಹಾದಿ ಮಸುಕಾಗುತ್ತದೆ. ಆದರೆ ತಂತ್ರಜ್ಞಾನದ ವ್ಯಾಪ್ತಿ ವಿಸ್ತರಿಸಿದಂತೆ ಕೆಲವು ಸವಾಲುಗಳೂ ಎದುರಾಗುತ್ತಿವೆ.

ಇದನ್ನು ಮಿಸ್‌ ಮಾಡದೇ ಓದಿ: ಜನವರಿ 2026 ರಲ್ಲಿ ಈ ದಿನಗಳಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ

ಇದನ್ನು ಮಿಸ್‌ ಮಾಡದೇ ಓದಿ: ಫೆಬ್ರವರಿ ತಿಂಗಳಲ್ಲಿ ಕಂದಾಯಗ್ರಾಮಗಳ 1.10 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

ಇತ್ತೀಚಿನ ದಿನಗಳಲ್ಲಿ ಹದಿಹರೆಯದವರು, ಯುವಜನರು ಮಿತಿ ಮೀರಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಬಾಹ್ಯ ಜಗತ್ತಿನ ಪರಿವಿಲ್ಲದಂತೆ ಗ್ಯಾಜೆಟ್ ಲೋಕದಲ್ಲಿ ಮುಳುಗುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದೆ. ಯುವಜನರು ಮಾತ್ರವಲ್ಲದೆ, ಹಿರಿಯರೂ ಸಾಮಾಜಿಕ ಒಡನಾಟಗಳಿಂದ ವಿಮುಖರಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಹಲಗಾ ಗ್ರಾಮಪಂಚಾಯತಿಯು ವಿನೂತನ ಪ್ರಯತ್ನಕ್ಕೆ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ.

Karnataka's Halaga Village Implements Mandatory 7-9 PM 'Digital Detox
Karnataka’s Halaga Village Implements Mandatory 7-9 PM ‘Digital Detox

ಈ ಗ್ರಾಮಪಂಚಾಯತಿಯಲ್ಲಿ ಪ್ರತಿ ಸಂಜೆ 7 ಗಂಟೆಗೆ ಸೈರನ್ ಮೊಳಗಿಸಲಾಗುತ್ತಿದೆ. ನಂತರ ಮಕ್ಕಳಿಗೆ ಪಠ್ಯ ಪುಸ್ತಕ ಅಭ್ಯಾಸ ಕಡ್ಡಾಯ. ಪೋಷಕರೂ ಟೆಲಿವಿಷನ್ ಬಂದ್ ಮಾಡಿ ಮಕ್ಕಳ ಓದು ಅಥವಾ ಸಾಮಾಜಿಕ ಅಥವಾ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಜೊತೆಗೂಡುತ್ತಾರೆ. ಈ ಕ್ರಮವು ಮೊಬೈಲ್ ಫೋನ್, ಟಿವಿ ಬಳಕೆಗೆ ವಿರಾಮ ನೀಡುವುದರೊಂದಿಗೆ, ಜನರಲ್ಲಿ ಪರಸ್ಪರ ಬಾಂಧವ್ಯ ವೃದ್ಧಿಸಲು ಸಹಕರಿಸುತ್ತದೆ.

ತಂತ್ರಜ್ಞಾನದ ಲಾಭಗಳನ್ನು ಸದುಪಯೋಗಪಡಿಸಿಕೊಳ್ಳುವಾಗ, ನಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಕೂಡ ಮರೆಯಬಾರದು ಎಂಬ ಹಲಗಾ ಗ್ರಾಮಪಂಚಾಯತಿಯ ಉದ್ದೇಶ ಶ್ಲಾಘನೀಯ ಎಂದು ತಿಳಿಸಿದ್ದಾರೆ.

Karnataka Halaga village in Belagavi district has launched a daily Digital Detox programme to curb screen time.