ಮೈಸೂರಿನಲ್ಲಿ ಅಹಿಂದ ಸಮಾವೇಶಕ್ಕೆ ಮಹೂರ್ತಕ್ಕೆ ದಿನಾಂಕ ಫಿಕ್ಸ್

Siddaramaiah
Siddaramaiah

ಬೆಂಗಳೂರು: ಅಹಿಂದ ಸಮಾವೇಶಕ್ಕೆ ಮಹೂರ್ತಕ್ಕೆ ದಿನಾಂಕ ಫಿಕ್ಸ್ ಆಗಿದ್ದು ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತುಕೊಳ್ಳುವುದಕ್ಕೆ ಅಹಿಂದ ನಾಯಕರು ಮುಂದಾಗಿದ್ದಾರೆ.

ಕುರ್ಚಿ ಕದನದ ನಡುವೆ ಸಿದ್ದರಾಮಯ್ಯ ಬೆಂಬಲಿಗರ ಹೊಸ ಅಸ್ತ್ರ ಪ್ರಯೋಗ ಮಾಡಲಿದ್ದು, ಜನವರಿ 25 ಕ್ಕೆ ಅಹಿಂದ ಸಮಾವೇಶ ನಡೆಲಿದೆ ಎನ್ನಲಾಗಿದೆ.

ಇದನ್ನು ಮಿಸ್‌ ಮಾಡದೇ ಓದಿ: ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿಗೆ ಲೋಕಾಯುಕ್ತ ಶಾಕ್

ಇದನ್ನು ಮಿಸ್‌ ಮಾಡದೇ ಓದಿ: ಅಂಜನಾದ್ರಿಯ ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್

ಇಂದು ಅಹಿಂದ ಸಮಾವೇಶ ನಡೆಸಲು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯಿಂದ ಸಿದ್ದತೆ ನಿಟ್ಟಿನಲ್ಲಿ ಪೂರ್ವಭಾವಿ ನಡೆಯಿತು, ಸಭೆಯಲ್ಲಿ ಎಲ್ಲರೂ ಕೂಡ ಜನವರಿ 25 ರಂದು ಅಹಿಂದ ಸಮಾವೇಶವನ್ನು ನಡೆಸುವುದಕ್ಕೆ ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

Siddaramaiah
Image credit: https://www.facebook.com/Siddaramaiah.Official

ಅಹಿಂದ ಸಮಾವೇಶಕ್ಕೆ ಸುಮಾರು 15 ರಿಂದ 20 ಸಾವಿರ ಜನರನ್ನು ಸೇರಿಸಲು ಇಂದಿನ ಸಭೆಯಲ್ಲಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್‌ ಗೆ ಅಹಿಂದ ನಾಯಕರು ಹಾಗೂ ಸಿಎಂ ಸಿದ್ದರಾಮಯ್ಯ ನೇರ ಸಂದೇಶವನ್ನು ಕಳುಹಿಸುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಇನ್ನೂ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡುವುದಿಲ್ಲ. ಅವರ ಪರವಾಗಿ ನಾವು ಸಮಾವೇಶ ಹಮ್ಮಿಕೊಂಡಿದ್ದೇವೆ ಅಂತ ಆಯೋಜಕರು ಹೇಳಿದ್ದಾರೆ.

Siddaramaiah
Image credit: https://www.facebook.com/Siddaramaiah.Official

ಇನ್ನೂ ಸಮಾವೇಶದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಶುಭ ಹಾರೈಸಿದ್ದಾರೆ. ಇದೇ ಈ ಬಗ್ಗೆ ಅವರು ದೆಹಲಿಯಲ್ಲಿ ಮಾತನಾಡಿದರು, ಇನ್ನೂ ದೆಹಲಿ ಭೇಟಿಗೆ ಸಂಬಂಧಪಟ್ಟಂತೆ ಅವರು ಮಾತನಾಡಿ ನಾನು ಯಾರನ್ನು ಭೇಟಿ ಮಾಡಿಲ್ಲ, ನಾನು ಯಾರಿಗೂ ತೊಂದರೆ ನೀಡುವುದಕ್ಕೆ ಬಯಸುವುದಿಲ್ಲ ಅಂತ ಹೇಳಿದರು. ಹೈಕಮಾಂಡ್ ನಮಗೆ ಫ್ರಿ ಹ್ಯಾಂಡ್‌ ಕೊಟ್ಟಿದೆ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಅಂತ ಹೇಳಿದರು.

Date fixed for Muhurat for Ahinda convention in Mysore